Advertisement

ಸಾರಿಗೆ ನಿಗಮಗಳಲ್ಲಿ 2,814 ಸಿಬ್ಬಂದಿ ನೇಮಕ: ಸಚಿವ ಶ್ರೀರಾಮುಲು

09:17 PM Sep 21, 2022 | Team Udayavani |

ವಿಧಾನಸಭೆ: ರಾಜ್ಯದ ಸಾರಿಗೆ ನಿಗಮಗಳಲ್ಲಿ ಹೊಸದಾಗಿ 2,814 ಹುದ್ದೆಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.

Advertisement

ಪ್ರಶ್ನೋತ್ತರ ಅವಧಿಯಲ್ಲಿ ಕಲಘಟಗಿ ಶಾಸಕ ಸಿ.ಎಂ. ನಿಂಬಣ್ಣವರ್‌ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಸ್ತುತ ಸಂಸ್ಥೆಯಲ್ಲಿ 2,500 ಚಾಲಕ, 55 ಚಾಲಕ ಬ್ಯಾಕ್‌ಲಾಗ್‌ ಮತ್ತು 259 ಚಾಲಕ-ಕಂ-ನಿರ್ವಾಹಕ ಬ್ಯಾಕ್‌ಲಾಗ್‌ ಸೇರಿದಂತೆ ಒಟ್ಟು 2,814 ಹುದ್ದೆಗಳ ನೇಮಕಾತಿಗೆ 2019ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು.

ಕೋವಿಡ್‌-19 ಕಾರಣದಿಂದ ನೇಮಕಾತಿ ಸ್ಥಗಿತಗೊಂಡಿತ್ತು. ಈಗ ಪ್ರಸ್ತಾವನೆ ಸ್ವೀಕೃತಗೊಂಡಿದ್ದು, ಪರಿಶೀಲನೆಯಲ್ಲಿದೆ. ಸಿಬ್ಬಂದಿ ನೇಮಕದ ನಂತರ ಘಟಕಗಳಿಗೆ ಅವಶ್ಯಕತೆಗೆ ಅನುಗುಣವಾಗಿ ನಿಯೋಜಿಸಲಾಗುವುದು ಎಂದರು.

ಕೋವಿಡ್‌ ಕಾರಣದಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಳೆದ 2 ವರ್ಷಗಳಿಂದ ಯಾವುದೇ ಬಸ್‌ಗಳನ್ನು ಖರೀದಿಸಿರುವುದಿಲ್ಲ. ಆದರೆ, ಒಟ್ಟಾರೆ ಇಲಾಖೆಯಲ್ಲಿ 650 ಬಸ್‌ಗಳ ಖರೀದಿಗೆ ಟೆಂಡರ್‌ ಕರೆಯಲಾಗಿದೆ. ಹೊಸ ಬಸ್‌ಗಳು ಖರೀದಿಸಿದ ಮೇಲೆ ಬೇಡಿಕೆ ಆಧರಿಸಿ ಆದ್ಯತೆ ಮೇಲೆ ಬಸ್‌ಗಳನ್ನು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next