Advertisement

ಆರೋಗ್ಯದಲ್ಲಿ ಚೇತರಿಕೆ; ವೈದ್ಯರ ಸ್ಪಷ್ಟನೆ

06:30 AM Mar 08, 2018 | |

ಬೆಂಗಳೂರು: ನ್ಯಾ. ವಿಶ್ವನಾಥ್‌ ಶೆಟ್ಟಿ ಚೇತರಿಸಿಕೊಳ್ಳುತ್ತಿದ್ದಾರೆ. ಆತಂಕ ಪಡಬೇಕಾಗಿಲ್ಲ ಎಂದು ಚಿಕಿತ್ಸೆ ನೀಡುತ್ತಿರುವ ಮಲ್ಯ ಆಸ್ಪತ್ರೆ ವೈದ್ಯ ದಿವಾಕರ್‌ ಭಟ್‌ ತಿಳಿಸಿದ್ದಾರೆ.

Advertisement

ತೀವ್ರ ರಕ್ತಸ್ರಾವದಿಂದ ಗಾಯಗೊಂಡಿದ್ದ ಲೋಕಾಯುಕ್ತರಿಗೆ ತಕ್ಷಣ ಶಸ್ತ್ರಉಚಿಕಿತ್ಸೆ ನೀಡಲಾಗಿದೆ. ಎದೆ ಭಾಗಕ್ಕೆ ಮೂರು, ತೊಡೆಗೆ ಮತ್ತು ಹೊಟ್ಟೆ ಭಾಗದಲ್ಲಿ ತಲಾ 1ಇರಿತವಾಗಿದೆ. ಕೈ ಹಾಗೂ ಎಡ ಎದೆ ಭಾಗದಲ್ಲೂ ಗಾಯಗಳಾಗಿವೆ. ಹೀಗಾಗಿ ಸತತ ಮೂರು ಗಂಟೆಗಳ ಕಾಲ ಶಸ್ತ್ರಉಚಿಕಿತ್ಸೆ ನಡೆಸಲಾಗಿದ್ದು, ಸರ್ಜರಿ ನಡೆಸಿ ರಕ್ತಸ್ರಾವ ತಡೆಯಲಾಗಿದೆ ಎಂದಿದ್ದಾರೆ. ಅಲ್ಲದೇ, ಬೈಪಾಸ್‌ ಸರ್ಜರಿ ನಡೆದಿರುವ ಕಾರಣ ಚಾಕುವಿನ ಇರಿತದಿಂದ ಹೆಚ್ಚಿನ ತೊಂದರೆ ಉಂಟಾಗಿದೆ. 74 ವರ್ಷ ಆಗಿರುವುದರಿಂದ ತೀರಾ ನೋವು ತಡೆದುಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ. ಅವರಿಗೆ ಡಯಾಬಿಟಿಸ್‌ ಕೂಡ ಇದೆ. ಹೀಗಾಗಿ ನಾಲ್ಕೈದು ದಿನಗಳ ಕಾಲ ಐಸಿಯುನಲ್ಲೇ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು.

ಸಿಎಂರಿಂದ ವೈದ್ಯರ ಭೇಟಿ: ಈ ಮಧ್ಯೆ ನ್ಯಾ. ವಿಶ್ವನಾಥ್‌ ಶೆಟ್ಟಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಡಿ.ಕೆ.ಶಿವಕುಮಾರ್‌,ಎಂ,ಬಿ.ಪಾಟೀಲ್‌, ಕಾಗೋಡು ತಿಮ್ಮಪ್ಪ, ಎಚ್‌.ಎಂ.ರೇವಣ್ಣ, ಮೇಯರ್‌ ಸಂಪತ್‌ಕುಮಾರ್‌, ಆರ್‌.ಅಶೋಕ್‌, ಶೋಭಾ ಕರಂದ್ಲಾಜೆ, ನ್ಯಾಯಾಧೀಶರು ಭೇಟಿಯಾಗಿ ಸಾಂತ್ವನ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next