Advertisement
ರೆಸಾರ್ಟ್ ಘಟನೆ ನಂತರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ನಂತರ ಬೆಂಗಳೂರಿನ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಆನಂದ್ ಸಿಂಗ್ ಭಾನುವಾರ ಹೊಸಪೇಟೆ ನಗರಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ಬಸಂತ ಪಂಚಮಿ ನಿಮಿತ್ತ ಮನೆ ದೇವರು ಗೋಪಾಲಕೃಷ್ಣನ ದರ್ಶನ ಪಡೆದು, ಹಂಪಿ ವಿರೂಪಾಕ್ಷೇಶ್ವರ, ಪಂಪಾ ದೇವಿ ಮತ್ತು ಭುವನೇಶ್ವರಿ ಅಮ್ಮನ ದರ್ಶನ ಪಡೆದಿದ್ದೇನೆ. ನಾಳೆ ಮತ್ತೆ ಬೆಂಗಳೂರಿಗೆ ತೆರಳುವೆ ಎಂದರು. ಅಧಿವೇಶನ ಮುಗಿಯುವವರೆಗೆ ಬೆಂಗಳೂರಿನಲ್ಲಿರುವಂತೆ ಪಕ್ಷದ ಮುಖಂಡರು ತಿಳಿಸಿದ್ದಾರೆ. ಅವಶ್ಯಕತೆ ಇದ್ದರೆ ಮಾತ್ರ ಅಧಿವೇಶನದಲ್ಲಿ ಭಾಗಿಯಾಗುತ್ತೇನೆ. ಹೆಚ್ಚು ಹೊತ್ತು ಅಧಿವೇಶನದಲ್ಲಿ ಕುಳಿತುಕೊಳ್ಳಲು ಕಷ್ಟವಾಗಲಿದೆ ಎಂದರು. Advertisement
ಆರೋಗ್ಯದಲ್ಲಿ ಚೇತರಿಕೆಯಾಗ್ತಿದೆ’: ಆನಂದ ಸಿಂಗ್
12:35 AM Feb 11, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.