Advertisement

ದಾಖಲೆಯ ಗೇರುಬೀಜ ಉತ್ಪಾದನೆ

10:33 AM Aug 01, 2018 | Harsha Rao |

ನವದೆಹಲಿ: ದೇಶದಲ್ಲಿ 2017-18ನೇ ಸಾಲಿನಲ್ಲಿ ದಾಖಲೆ ಪ್ರಮಾಣದ ಕಚ್ಚಾ ಗೋಡಂಬಿ ಉತ್ಪಾದನೆ ಆಗಿದ್ದು, 8.17 ಲಕ್ಷ ಮೆಟ್ರಿಕ್‌ ಟನ್‌ ತಲುಪಿದೆ. 2015-16ನೇ ಸಾಲಿನಲ್ಲಿ ಉತ್ಪಾದನೆ 6.70 ಲಕ್ಷ ಮೆಟ್ರಿಕ್‌ ಟನ್‌ ಇತ್ತು ಎಂದು ಕೇಂದ್ರ ವಾಣಿಜ್ಯ ಖಾತೆ ಸಹಾಯಕ ಸಚಿವ ಸಿ.ಆರ್‌.ಚೌಧರಿ ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ಇದೊಂದು ದಾಖಲೆ ಎಂದು ಹೇಳಿದ ಅವರು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕೆಲ ಸಮಸ್ಯೆಯಿಂದಾಗಿ ಉತ್ಪಾದನೆ ಮತ್ತು ಪೂರೈಕೆ ನಡುವೆ ಸಮಸ್ಯೆ ಉಂಟಾಗಿದೆ ಎಂದು ತಿಳಿಸಿದ್ದಾರೆ. 

Advertisement

ಕೇಂದ್ರ  ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ತೋಟಗಾರಿಕೆ ಬೆಳೆಗಳ ಅಭಿವೃದ್ಧಿಗೆ ಏಕೀಕೃತ ಯೋಜನೆ ಮತ್ತು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯೇ ಉತ್ಪಾದನೆ ಹೆಚ್ಚಳಕ್ಕೆ ಕಾರಣ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next