Advertisement

ಕೋಡ್ಲಿ ವಲಯದಲ್ಲಿ ದಾಖಲೆ ಮಳೆ: ಹೊಲಗಳಲ್ಲಿ ನೀರು

11:09 AM Oct 05, 2018 | Team Udayavani |

ಚಿಂಚೋಳಿ:ತಾಲೂಕಿನ ಕೋಡ್ಲಿ ವಲಯದಲ್ಲಿ ಬುಧವಾರ ಸಂಜೆ ಗುಡುಗು ಸಿಡಿಲಿನ ಆರ್ಭಟದಿಂದ ಕೂಡಿದ ವ್ಯಾಪಕ
ಮಳೆ ಆಗಿದ್ದು, ಹೊಲಗಳಲ್ಲಿ ನೀರು ನಿಂತುಕೊಂಡು ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗಿದೆ.

Advertisement

ಹಲಚೇರಿ, ನಾವದಗಿ, ತೇಗಲತಿಪ್ಪಿ, ಕುಡಹಳ್ಳಿ, ಹೊಸಳ್ಳಿ ಗ್ರಾಮಗಳ ರೈತರ ಹೊಲದಲ್ಲಿ ಮಳೆ ನೀರು ನಿಂತುಕೊಂಡಿದೆ.
ಕೋಡ್ಲಿ ಹೋಬಳಿಯಲ್ಲಿ ಎರಡು ಗಂಟೆಗಳಲ್ಲಿ 87.2 ಮಿ.ಮೀ ದಾಖಲೆ ಮಳೆ ಸುರಿದಿದೆ. ಇದರಿಂದ ಅನೇಕ ಹೊಲಗಳಲ್ಲಿ
ಸಾಕಷ್ಟು ಪ್ರಮಾಣದಲ್ಲಿ ನೀರು ನಿಂತಿದೆ. ಅಲ್ಲದೆ ಬಿರುಗಾಳಿಗೆ ತೊಗರಿ ಬೆಳೆಯ ಹೂವಿನ ಮೊಗ್ಗು ಉದುರಿವೆ ಎಂದು ಹೊಸಳ್ಳಿ ರೈತ ವಿಜಯಕುಮಾರ ಚೇಂಗಟಿ ತಿಳಿಸಿದ್ದಾರೆ.ತಾಲೂಕಿನ ಶಿರೋಳಿ, ನಿಡಗುಂದಾ, ರುದನೂರ, ಕೆರೋಳಿ, ಕರ್ಚಖೇಡ, ಕೊಡಂಪಳ್ಳಿ ಗ್ರಾಮಗಳಲ್ಲಿ ಜೋರಾದ ಮಳೆ ಆಗಿದೆ. ಕೆರೊಳ್ಳಿ ಗ್ರಾಮದಲ್ಲಿ ಒಂದೇ ಸಮನೆ ಸುರಿದ ಭಾರಿ ಮಳೆಯಿಂದ ಮನೆಯೊಂದರಲ್ಲಿ ಮಳೆ ನೀರು ಹೊಕ್ಕಿದೆ ಎಂದು ಪಿಕಾರ್ಡ್‌ ಬ್ಯಾಂಕ್‌ ನಿರ್ದೇಶಕ ಬಸವರಾಜ ಕೆರೊಳ್ಳಿ ತಿಳಿಸಿದ್ದಾರೆ.

ಉತ್ತಮ ಮಳೆ: ತಾಲೂಕಿನಲ್ಲಿ ವ್ಯಾಪಕ ಮಳೆ ಆಗುತ್ತಿರುವುದರಿಂದ ಹಿಂಗಾರು ಬಿತ್ತನೆಗೆ ಅನುಕೂಲವಾಗಿದೆ. ಐನಾಪುರ,ರಟಕಲ್‌,ಸಲಗರ ಬಸಂತಪುರ, ಬೆನಕೆಪಳ್ಳಿ, ಮೋಘಾ, ಕೋಡ್ಲಿ, ಕನಕಪುರ, ಚಿಮ್ಮನಚೋಡ ಗ್ರಾಮಗಳಲ್ಲಿ
ರೈತರು ಹಿಂಗಾರು ಜೋಳ ಮತ್ತು ಕಡಲೆ ಬೀಜ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ತೊಗರಿ ಬೆಳೆಯು ಉತ್ತಮವಾಗಿ
ಬೆಳೆಯುತ್ತಿದೆ.

2018-19ನೇ ಸಾಲಿನಲ್ಲಿ ಹಿಂಗಾರು ಬಿತ್ತನೆ ಗುರಿ 36,427 ಹೆಕ್ಟೇರ್‌ ಇದೆ. ಇದರಲ್ಲಿ 19,7800 ಹೆಕ್ಟೇರ್‌ ಕಡಲೆ, 15,275 ಹೆಕ್ಟೇರ್‌ ಜೋಳ ಬಿತ್ತನೆ ಗುರಿ ಇದೆ ಎಂದು ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್‌.ಹೆಚ್‌. ಗಡಗಿಮನಿ ತಿಳಿಸಿದ್ದಾರೆ. ಐನಾಪುರ, ಚಿಮ್ಮನಚೋಡ, ಕೋಡ್ಲಿ, ಸುಲೇಪೇಟ, ಚಿಂಚೋಳಿ ರೈತ ಸಂಪರ್ಕ ಕೇಂದ್ರಗಳಲ್ಲಿ 1055 ಕ್ವಿಂಟಲ್‌ ಕಡಲೆ, 57ಕ್ವಿಂಟಲ್‌ ಜೋಳದ ಬಿತ್ತನೆ ಬೀಜಗಳನ್ನು ಸಂಗ್ರಹಣೆ ಮಾಡಲಾಗಿದೆ. ರೈತರು ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ.

ಚಿಂಚೋಳಿ 4.2 ಮಿ.ಮೀ, ಸುಲೇಪೇಟ 16.8 ಮಿ.ಮೀ, ಕೋಡ್ಲಿ 87.2 ಮಿ.ಮೀ, ನಿಡಗುಂದಾ 2.0 ಮಿ.ಮೀ ಮಳೆ
ಆಗಿದೆ. ಗುಡುಗು ಮಿಂಚಿನ ಹಿಂಗಾರು ಮಳೆ ಆಗುತ್ತಿದ್ದು, ಬಿತ್ತನೆ ಕಾರ್ಯ ತುರುಸಿನಿಂದ ನಡೆಯಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next