Advertisement
ರಾಜ್ಯಸಭೆಯಲ್ಲಿಂದು ಪ್ರಶ್ನೋತ್ತರ ವೇಳೆ ಜಿ.ಬಿ.ಎಲ್ ನರಸಿಂಹರಾವ್ ಅವರು ಕೇಳಿದ ಪೂರಕ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಕೋವಿಡ್ ನಿಂದಾಗಿ ರಸಗೊಬ್ಬರ ಉತ್ಪಾದನೆ ಮತ್ತು ಸಾಗಣೆ ಮಾಡುವುದು ಒಂದು ದೊಡ್ಡ ಸವಾಲಾಗಿತ್ತು. ಕೆಲಸಗಾರರ ಪೈಕಿ ಯಾರೀಗಾದರೂ ಕೋವಿಡ್ ಸೋಂಕು ತಗುಲಿದರೆ ಇಡೀ ಪ್ಯಾಕ್ಟರಿಯನ್ನೇ ಮುಚ್ಚಬೇಕಾದ ಪರಿಸ್ಥಿತಿ ಇತ್ತು. ಅದೇ ರೀತಿ ಸಾಗಣೆ ಮಾಡುವಾಗ, ಲೋಡ್, ಅನ್‌ಲೋಡ್ ಮಾಡುವಾಗ ಕಾರ್ಮಿಕರ ಕೊರತೆ ಎದುರಾಗಿತ್ತು. ಆದರೆ ಇವನ್ನೆಲ್ಲ ಸಮರ್ಪಕವಾಗಿ ನಿಭಾಯಿಸಲಾಯಿತು. ಅತಿವೃಷ್ಟಿಯಿಂದ ಕೆರೆ-ಕುಂಟೆಗಳು, ನೀರಾವರಿ ಜಲಾಶಯಗಳು ತುಂಬಿದವು. ಬಿತ್ತನೆ ಪ್ರದೇಶ ವೃದ್ಧಿಸಿ ರಸಗೊಬ್ಬರ ಬೇಡಿಕೆಯೂ ಹೆಚ್ಚಾಯಿತು. ಹೆಚ್ಚಾದ ಬೇಡಿಕೆಯನ್ನು ಪೂರೈಸಿ ಎಲ್ಲಿಯೂ ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಲಾಯಿತು. ಇದರಿಂದಾಗಿ ಕೃಷಿ ವಲಯ ಶೇಕಡಾ 3.7 ಬೆಳವಣಿಗೆ ಸಾಧಿಸಲು ಸಾಧ್ಯವಾಯಿತು ಎಂದು ವಿವರಿಸಿದರು.
Related Articles
Advertisement
ಸದಸ್ಯರ (ವಿಜಯಸಾಯಿ ರೆಡ್ಡಿ) ನಿರ್ದಿಷ್ಟ ಪ್ರಶ್ನೆಗೆ ಉತ್ತರಿಸಿದ ಸಚಿವರು ಆಂಧ್ರಪ್ರದೇಶದಲ್ಲಿ ಯಾವುದೇ ನಮೂನೆಯ ಗೊಬ್ಬರ ಕೊರತೆಯಾಗಿಲ್ಲ, ರಾಜ್ಯಕ್ಕೆ (ಎಪಿ) ಪ್ರಸಕ್ತ ಸಾಲಿನಲ್ಲಿ (2020-21) ಇದುವರೆಗೆ 17.5 ಲಕ್ಷ ಟನ್ ಯೂರಿಯಾ, 4 ಲಕ್ಷ ಟನ್ ಡಿಎಪಿ, 2.8 ಲಕ್ಷ ಟನ್ ಎಂಓಪಿ ಹಾಗೂ 13.5 ಲಕ್ಷ ಟನ್ ಎನ್‌ಪಿಕೆ ನಮೂನೆ ರಸಗೊಬ್ಬರ ಪೂರೈಕೆಯಾಗಿದೆ ಎಂದು ವಿವರಿಸಿದರು.
ಸಭಾಪೀಠದಲ್ಲಿದ್ದ ಉಪ-ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಕೋವಿಡ್ ಸಾಂಕ್ರಮಿಕದ ಮಧ್ಯೆಯೂ ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಂಡ ಸಚಿವ ಶ್ರೀ ಡಿ ವಿ ಸದಾನಂದ ಗೌಡರನ್ನು ಅಭಿನಂದಿಸಿದರು. ಸದಸ್ಯ ಜಿ.ಬಿ.ಎಲ್ ನರಸಿಂಹ ರಾವ್ ಅವರೂ ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: “ಮಾನವನ ಕೂದಲಿಗಿಂತ 10 ಪಟ್ಟು ಸಣ್ಣದಿರುವ ಬ್ರೈನ್ ಮೆಷಿನ್” ಅಭಿವೃದ್ಧಿಯಲ್ಲಿ ಎಲೊನ್ ಮಸ್ಕ್.!