Advertisement

ಗಗನಯಾತ್ರಿ ಜಾನ್‌ ಯಂಗ್‌ ನಿಧನ

10:00 AM Jan 08, 2018 | Karthik A |

ವಾಷಿಂಗ್ಟನ್‌: ಹಲವು ಪ್ರಥಮಗಳನ್ನು ಸಾಧಿಸಿದ ನಾಸಾದ ಬಾಹ್ಯಾಕಾಶ ವಿಜ್ಞಾನಿ, ಗಗನಯಾತ್ರಿ ಜಾನ್‌ ಯಂಗ್‌ (87) ಶನಿವಾರ ನ್ಯುಮೋನಿಯಾದಿಂದ ನಿಧನರಾಗಿದ್ದಾರೆ. ಅಮೆರಿಕದ ಟೆಕ್ಸಾಸ್‌ನ ಜಾನ್‌, ಚಂದ್ರನನ್ನು ಸುತ್ತು ಹಾಕಿದ ಮೊದಲ ಗಗನಯಾತ್ರಿಯಾಗಿದ್ದಾರೆ. ನಾಸಾದ ಜೆಮಿನಿ, ಅಪೊಲೋ ಮತ್ತು ಸ್ಪೇಸ್‌ ಶಟಲ್‌ನಲ್ಲಿ ಪ್ರಯಾಣಿಸಿದ ಮೊದಲ ಯಾತ್ರಿ ಇವರಾಗಿದ್ದು, ಶಟಲ್‌ ಫ್ಲೈಟ್‌ ಅನ್ನು ಮೊದಲ ಬಾರಿಗೆ ಮುನ್ನಡೆಸಿದ ಖ್ಯಾತಿಯೂ ಇವರದ್ದು. ತನ್ನ 32ನೇ ವಯಸ್ಸಿನಲ್ಲಿ ನೀಲ್‌ ಆರ್ಮ್ಸ್ಟ್ರಾಂಗ್‌ ಹಾಗೂ ಜಿಮ್‌ ಲಾವೆಲ್‌ರೊಂದಿಗೆ ನಭಕ್ಕೇರುವ ಮೂಲಕ ನಾಸಾಗೆ ಸೇರ್ಪಡೆಯಾಗಿದ್ದರು. ಚಂದ್ರನ ಮೇಲೆ 2ಬಾರಿಗೆ ಕಾಲಿಟ್ಟ ಕೇವಲ ಮೂವರು ಗಗನಯಾತ್ರಿಗಳ ಪೈಕಿ ಇವರೂ ಒಬ್ಬರಾಗಿದ್ದಾರೆ. ಒಟ್ಟು 20 ತಾಸು 14 ನಿಮಿಷಗಳ ಕಾಲ ಇವರು ಚಂದ್ರನ ಮೇಲೆ ನಡೆದ ದಾಖಲೆ ಹೊಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next