Advertisement

Record; 7.28 ಕೋಟಿ ITR ಸಲ್ಲಿಕೆ: ಆದಾಯ ತೆರಿಗೆ ಇಲಾಖೆ

01:17 AM Aug 03, 2024 | Team Udayavani |

ಹೊಸದಿಲ್ಲಿ: ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಕೆಯಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.7.5ರಷ್ಟು ಹೆಚ್ಚಳವಾಗಿದ್ದು, ಒಟ್ಟು 7.28 ಕೋಟಿ ಐಟಿ ರಿಟರ್ನ್ಸ್ ಸಲ್ಲಿಕೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಶುಕ್ರವಾರ ಹೇಳಿದೆ. ಜುಲೈ 31 ಐಟಿ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನವಾಗಿತ್ತು. 2023-24ರ ಸಾಲಿನಲ್ಲಿ 6.77 ಕೋಟಿ ಐಟಿ ರಿಟರ್ನ್ಸ್ ಸಲ್ಲಿಕೆಯಾಗಿದ್ದವು. 2024-25ರ ವರ್ಷದಲ್ಲಿ ಸಲ್ಲಿಕೆಯಾಗಿರುವ ಒಟ್ಟು 7.28 ಕೋಟಿ ಐಟಿ ರಿಟರ್ನ್ಸ್  ಗಳ ಪೈಕಿ 5.27 ಕೋಟಿ ರಿಟರ್ನ್ಸ್ ಹೊಸ ಪದ್ಧತಿಯ ಪ್ರಕಾರ ಸಲ್ಲಿಕೆಯಾಗಿವೆ. ಹಳೆ ಪದ್ಧತಿಯಲ್ಲಿ 2.01 ಕೋಟಿ ಸಲ್ಲಿಕೆಯಾಗಿವೆ ಎಂದು ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಜು.31, ಒಂದೇ ದಿನ 69.92 ಲಕ್ಷ ರಿಟರ್ನ್ಸ್ ದಾಖಲಾಗಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next