ಗಂಗಾವತಿ: ಇತಿಹಾಸ ಪ್ರಸಿದ್ಧ ಪಂಪಾಸರೋವರದ ಜಯಲಕ್ಷ್ಮಿ ಮೂರ್ತಿಯನ್ನು ಶ್ರೀ ಚಕ್ರಸಮೇತ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಜೂನ್ 08,09 ಮತ್ತು 10ರಂದು ಧಾರ್ಮಿಕ ವಿಧಿವಿಧಾನಗಳ ಮೂಲಕ ಆಗಮ ಪಂಡಿತರಿಂದ ನೆರವೇರಲಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಹಸೀಲ್ದಾರ್ ಯು. ನಾಗರಾಜ ಹಾಗೂ ಸಚಿವ ಬಿ. ಶ್ರೀರಾಮುಲು ಅವರ ಆಪ್ತ ಕಾರ್ಯದರ್ಶಿ ರಾಜು ಬಳ್ಳಾರಿ ತಿಳಿಸಿದ್ದಾರೆ .
ಗಂಗಾವತಿಯ ಸರ್ಕಿಟ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯನಗರ ಕಾಲದ ಪಂಪಾಸರೋವರವನ್ನು ಜೀರ್ಣೋದ್ಧಾರ ಮಾಡುವ ಉದ್ದೇಶದಿಂದ ಪಂಪಾ ಸರೋವರ ಮತ್ತು ಮುಖಮಂಟಪ ಕಾಮಗಾರಿ ಕೈಗೊಳ್ಳಲಾಗಿತ್ತು ಆದರೆ ಜಯಲಕ್ಷ್ಮಿ ಗರ್ಭಗುಡಿ ಹಲವೆಡೆ ಭಿನ್ನವಾಗಿದ್ದರಿಂದ ಸ್ಥಳೀಯರ ಮನವಿಯ ಮೇರೆಗೆ ಗರ್ಭ ಗುಡಿಯನ್ನು ಜೀರ್ಣೋದ್ಧಾರ ಮಾಡಿ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಸಾಮಗ ನಿರ್ಮಿಸಲಾಗಿದೆ ಕೆಲವು ಗಂಟೆಗಳ ನಂತರ ಇದೀಗ ಎಲ್ಲರ ವಿಶ್ವಾಸದೊಂದಿಗೆ ಜೂನ್ 08,09 ಮತ್ತು 10 ರಂದು ಜಯಲಕ್ಷ್ಮಿ ಮೂರ್ತಿ ಶ್ರೀಚಕ್ರ ಸಮೇತ ಪುನರ್ ಪ್ರತಿಷ್ಠಾಪನಾ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ಜರುಗಲಿವೆ .ಹಂಪಿ ಮಹಾಸಂಸ್ಥಾನದ ಪೂಜ್ಯ ಅರ್ಚಕರು ಮತ್ತು ತಮಿಳುನಾಡು ದೇಶದ ವಿವಿಧ ಭಾಗಗಳಿಂದ ಆಗಮ ಪಂಡಿತರ ನ ಕರೆದು 3 ದಿನಗಳ ಕಾಲ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಕಾರ್ಯ ನೆರವೇರಿಸಲಾಗುತ್ತದೆ. ಈಗಾಗಲೇ ಆನೆಗುಂದಿ ರಾಜಮನೆತನದವರನ್ನು ಸಂಪರ್ಕ ಮಾಡಲಾಗಿದೆ ಜೊತೆಗೆ ಗಂಗಾವತಿ ಸೇರಿದಂತೆ ಜಿಲ್ಲೆಯ ಎಲ್ಲ ಜನಪ್ರತಿಗಳನ್ನು ಮಾಜಿ ಹಾಲಿ ಸಚಿವರು ಶಾಸಕರನ್ನು ಸಂಪರ್ಕ ಮಾಡಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಲಾಗಿದೆ ಎಂದರು.
ಪಂಪಾ ಸರೋವರದಲ್ಲಿ ಜಯಲಕ್ಷ್ಮಿ ಮೂರ್ತಿಯನ್ನು ವಿಜಯನಗರದ ಅರಸರ ರಾಜಗುರುಗಳಾದ ವಿದ್ಯಾರಣ್ಯರ ಆಸನಗಳು ನೆರವೇರಿಸಿದ್ದಾರೆ .ಎಂಬ ನಂಬಿಕೆಯಿಂದ ಸ್ಥಳೀಯರು ಹಲವು ಕಾರ್ಯಕ್ರಮಗಳನ್ನ ಪುನರ್ ಮಾಡುವಂತೆ ಸಲಹೆ ನೀಡಿದ್ದಾರೆ.ಮೂರ್ತಿ ಪ್ರತಿಷ್ಠಾಪನಾ ಧಾರ್ಮಿಕ ವಿಧಿವಿಧಾನಗಳ ಕಾರ್ಯಗಳು ನೆರವೇರಲಿವೆ. ಸ್ಥಳೀಯರು ಸೇರಿದಂತೆ 9 ಜನ ದಂಪತಿಗಳು ಪುನರ್ ಪ್ರತಿಷ್ಠಾಪನಾ ಕಾರ್ಯವನ್ನು ನೆರವೇರಿಸಿದ್ದಾರೆ .ಕುಂಕುಮಾರ್ಚನೆ ಬಲಿ ನೀಡುವುದು ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ಆಗಮ ಪಂಡಿತರ ಸಲಹೆ ಸೂಚನೆ ಮೇರೆಗೆ ಕೈಗೊಳ್ಳಲಾಗುತ್ತದೆ ಹಂಪಿ ವಿರೂಪಾಕ್ಷೇಶ್ವರ ದೇವಾಲಯದ ಅರ್ಚಕರು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ .ಜಿಲ್ಲಾಡಳಿತದ ಅಧಿಕಾರಿಗಳು ತಾಲ್ಲೂಕು ಆಡಳಿತ ಮತ್ತು ಸ್ಥಳೀಯವಾಗಿರುವ ಅಧಿಕಾರಿಗಳು ಪಾಲ್ಗೊಳ್ಳಲಿದ್ದು ಇದರಲ್ಲಿ ಜನಪ್ರತಿನಿಧಿಗಳು ಧಾರ್ಮಿಕ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಚಕ್ರ ಸಮೇತ ಜಯಲಕ್ಷ್ಮಿ ಮೂರ್ತಿಯನ್ನು ಪುನರ್ ಪ್ರತಿಷ್ಠಾಪನೆಗೆ ಸಹಕರಿಸಿ ಜಯಲಕ್ಷ್ಮಿಯ ಕೃಪೆಗೆ ಪಾತ್ರರಾಗಬೇಕು ಎಂದರು.
ಜಯಲಕ್ಷ್ಮಿ ಗರ್ಭ ಗುಡಿಯ ಗೋಪುರದಲ್ಲಿ ಸಣ್ಣ ಪ್ರಮಾಣದ ಬಿರುಕು ಕಾಣಿಸಿಕೊಂಡಿದ್ದರಿಂದ ಮಾರ್ಚ್ 04 ರಂದು ಜಯಲಕ್ಷ್ಮಿ ಮೂರ್ತಿಯನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಳಸದಲ್ಲಿ ಮಾಡಿ ಅದನ್ನು ಧಾರ್ಮಿಕ ಆಚರಣೆ ಮೂಲಕ ನೇ ಈಶ್ವರನ ಗುಡಿಯಲ್ಲಿ ಇರಿಸಲಾಗಿದೆ ಇಲ್ಲಿ ಧಾರ್ಮಿಕ ನಂಬಿಕೆಗಳಿಗೆ ಚ್ಯುತಿ ಆಗಿಲ್ಲ ಪುನರ್ ಪ್ರತಿಷ್ಠಾಪನಾ ಕಾರ್ಯವನ್ನು ಎಲ್ಲರ ಸಹಕಾರ ಸಲಹೆ ಮೇರೆಗೆ ಮಾಡಲಾಗುತ್ತಿದೆ.ಸಂಪರ್ಕದ ಕೊರತೆ ಕಾರಣ ಗೊಂದಲ ಉಂಟಾಗಿತ್ತು ಆದ್ದರಿಂದ ದಯವಿಟ್ಟು ಎಲ್ಲರೂ ದೇವರ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ರಾಜು ಬಳ್ಳಾರಿ ಮನವಿ ಮಾಡಿದ್ದಾರೆ.