Advertisement

ಸಾಮರಸ್ಯ, ಮಾನವತವಾದದಿಂದ ಉನ್ನತಿ: ರಮಾನಾಥ ರೈ 

12:34 PM Dec 27, 2017 | Team Udayavani |

ಮಹಾನಗರ: ಕಾರ್ಮಿಕರ ಮಕ್ಕಳಿಗೆ ರಾಜಕೀಯವಾಗಿ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಯುವ ಇಂಟಕ್‌ ರಾಜ್ಯದಲ್ಲಿ
ಸಂಘಟಿಸಲಾಗುತ್ತಿದ್ದು, ಮಲ್ಲಿಕಟ್ಟೆಯ ಕಾಂಗ್ರೆಸ್‌ ಭವನದಲ್ಲಿ ಯುವಇಂಟೆಕ್‌ ಸಮಾವೇಶ ಜರಗಿತು.

Advertisement

ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಉದ್ಘಾಟಿಸಿದರು. ಪ್ರಸಕ್ತ ಜಿಲ್ಲೆಯಲ್ಲಿ ಸಾಮರಸ್ಯದ ಕೊರತೆಯಿದೆ. ಈ ನಿಟ್ಟಿನಲ್ಲಿ ಯುವಕರು ಮಾನವತವಾದ ಮತ್ತು ಸಾಮರಸ್ಯದ ಮೂಲಕ ಜಾತಿಮತ ಭೇದವಿಲ್ಲದೆ ಬಾಳಬೇಕು ಮತ್ತು ಯುವ ಇಂಟಕ್‌ ಬಹಳ ಬಲಿಷ್ಠವಾಗಿ ಬೆಳೆಯುತ್ತಿರುವುದು ಕಾಂಗ್ರೆಸ್‌ಗೆ ಇನ್ನಷ್ಟು ಬಲ ಬರುವಂತೆ ಆಗಿದೆ ಎಂದರು.

ನೂತನ ಇಂಟಕ್‌ ಕಚೇರಿ ಉದ್ಘಾಟನೆಯನ್ನು ಹಿರಿಯ ಕಾರ್ಮಿಕ ಮುಖಂಡ ಮಾಜಿ ಶಾಸಕ ಎನ್‌. ಎಂ. ಅಡ್ಯಂತಾಯ ರವರು ಉದ್ಘಾಟಿಸಿದರು. 2ಜಿ ಹಗರಣದ ತೀರ್ಪು ಗುಜರಾತ್‌ ಚುನಾವಣೆಯ ಮೊದಲೇ ಬರುತ್ತಿದ್ದಲ್ಲಿ ಗುಜರಾತ್‌ನಲ್ಲಿ ಕಾಂಗ್ರೆಸ್‌ ಸರಕಾರವಾಗುತ್ತಿತ್ತು. ಸುಳ್ಳು ಆಪಾದನೆ ಮೂಲಕ ನಮ್ಮ ಎದುರಾಳಿಗಳು ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಆದ್ದರಿಂದ ನಾವು ಎಚ್ಚೆತ್ತುಕೊಂಡು ರಾಜ್ಯದಲ್ಲಿ ನಮ್ಮ ಸರಕಾರಕ್ಕೆ ಜನ ಪುನಃ ಆಶೀರ್ವಾದ ಮಾಡುವಂತೆ ನೋಡಬೇಕೆಂದು ಕರೆ ನೀಡಿದರು.

ಸಮಾವೇಶದ ಅಧ್ಯಕ್ಷತೆಯನ್ನು ಇಂಟಕ್‌ ರಾಜ್ಯಾಧ್ಯಕ್ಷ ರಾಕೇಶ್‌ ಮಲ್ಲಿ ವಹಿಸಿದ್ದರು. ಯುವ ಇಂಟಕ್‌ ಕಾರ್ಯಕರ್ತರು
ಕಾರ್ಮಿಕರಿಗೆ ಸಿಗುವ ಸೌಲಭ್ಯಗಳನ್ನು ಜನರಿಗೆ ಮುಟ್ಟುವಂತೆ ನೋಡಬೇಕು ಮತ್ತು ಪಕ್ಷ ಬಲಪಡಿಸುವಲ್ಲಿ ಕ್ರಿಯಾಶೀಲ
ರಾಗಿ ದುಡಿಯಬೇಕೆಂದರು.

ಶಾಸಕರಾದ ಐವನ್‌ ಡಿ’ಸೋಜಾ, ಜೆ. ಆರ್‌. ಲೋಬೋ, ಮೊದಿನ್‌ ಬಾವ, ಅಭಯಚಂದ್ರ ಜೈನ್‌, ಮೇಯರ್‌ ಕವಿತಾ
ಸನಿಲ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌, ಮಹಿಳಾ ಅಧ್ಯಕ್ಷೆ ಶಾಲೆಟ್‌ ಪಿಂಟೋ, ಮಮತಾ ಗಟ್ಟಿ, ಇಂಟಕ್‌
ರಾಜ್ಯ ಪದಾಧಿಕಾರಿಗಳಾದ ಅಬೂಬಕರ್‌, ಶಶಿರಾಜ್‌ ಅಂಬಟ್‌, ಸಿ. ಎ. ರಹೀಂ, ಪಿ.ಕೆ. ಸುರೇಶ್‌, ಶಿವಣ್ಣ, ಸುನಿಲ್‌ ರೈ, ಅಮೀರ್‌ ಅಹಮ್ಮದ್‌ ತುಂಬೆ, ನಾರಾಯಣ, ಜಿಲ್ಲಾಧ್ಯಕ್ಷ ಮನೋಹರ್‌ ಶೆಟ್ಟಿ, ಕಾನೂನು ಸಲಹೆಗಾರ ದಿನಕರ ಶೆಟ್ಟಿ,
ಜಿಲ್ಲಾ ಪದಾಧಿಕಾರಿಗಳಾದ ಬೊಂಡಾಲ ಚಿತ್ತರಂಜನ್‌ ಶೆಟ್ಟಿ, ಸ್ಟೀವನ್‌ ಡಿಸೋಜ, ಪ್ರಸನ್ನ ಶೆಟ್ಟಿ, ಯುವ ಕಾಂಗ್ರೆಸ್‌ ಉಪಾಧ್ಯಕ್ಷ ಲುಕ್ಮನ್‌ ಬಂಟ್ವಾಳ, ಇಂಟಕ್‌ ಮಹಿಳಾ ಅಧ್ಯಕ್ಷೆ ದಿವ್ಯಾ ಹರೀಶ್‌ ಶೆಟ್ಟಿ, ಯುವ ಇಂಟಕ್‌ ಜಿಲ್ಲಾಧ್ಯಕ್ಷ ದೀಕ್ಷಿತ್‌ ಎ. ಶೆಟ್ಟಿ, ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement

ಸಮ್ಮಾನ
ಇಂಟಕ್‌ನ ವಿಲ್ಫ್ರೆಡ್ ಪೀಟರ್‌ ಪಿಂಟೋ, ವಿಜಯ ಸುವರ್ಣರನ್ನು ಸಮ್ಮಾನಿಸಲಾಯಿತು. ಭಾರತ ದೇಶವನ್ನು ಇಂಡೋನೇಶಿಯಾದಲ್ಲಿ ನಡೆದ ವಿಶ್ವ ಸಂಸ್ಥೆಯ ಸಭೆಯಲ್ಲಿ ಭಾಗವಹಿಸಿ ದೇಶಕ್ಕೆ ಗೌರವ ತಂದುಕೊಟ್ಟ ರಘುವೀರ್‌ ಸೂಟರ್‌ ಪೇಟೆಯವರನ್ನು ಸಮ್ಮಾನಿಸಲಾಯಿತು. ಕಾನೂನು ಸಲಹೆಗಾರ ದಿನಕರ ಶೆಟ್ಟಿ ಸ್ವಾಗತಿಸಿದರು. ಶೈಲೇಶ್‌ ಕೊಟ್ಟಾರಿ ಮಣ್ಣಗುಡ್ಡ ಕಾರ್ಯಕ್ರಮ ನಿರೂಪಿಸಿದರು. ಮನ್ಸೂರ್‌ ಕುದ್ರೋಳಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next