Advertisement

“ಸಾಮರಸ್ಯ ಕದಡಿದವರಿಗೆ ಜನರಿಂದಲೇ ಪಾಠ’: ರಮಾನಾಥ ರೈ

01:57 AM May 03, 2022 | Team Udayavani |

ಮಂಗಳೂರು: ಧರ್ಮ, ದೇವರು, ದೇಶದ ಹೆಸರಿನಲ್ಲಿ ಜನರ ಭಾವನೆಗಳನ್ನು ಕೆರಳಿಸಿ ಮತ ಯಾಚಿಸುವ ಬಿಜೆಪಿಯು ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸು ತ್ತಿಲ್ಲ ಎಂಬುದನ್ನು ಜನರು ಅರ್ಥ ಮಾಡಿ ಕೊಂಡಿದ್ದಾರೆ.

Advertisement

ಹೀಗಾಗಿ ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಸಾಮರಸ್ಯ ಕದಡುತ್ತಿರುವವರಿಗೆ ಜನ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಮಾಜಿ ಸಚಿವ, ಕಾಂಗ್ರೆಸ್‌ ಮುಖಂಡ ಬಿ. ರಮಾನಾಥ ರೈ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕಾಂಗ್ರೆಸ್‌ ನಿರಂತರವಾಗಿ ಸಾಮಾಜಿಕ ಸಾಮರಸ್ಯ ಹಾಗೂ ಅಭಿವೃದ್ಧಿ ಕಾರ್ಯ ಗಳಿಗೆ ಒತ್ತು ನೀಡಿದೆ. ಸಿದ್ದರಾಮಯ್ಯ ಆಡಳಿತದಲ್ಲಿದ್ದಾಗ ಮಾಡಿದ ಯೋಜನೆ ಗಳನ್ನು ಅನುಷ್ಠಾನಿಸುವ ಕಾರ್ಯವನ್ನಷ್ಟೆ ಪ್ರಸಕ್ತ ಸರಕಾರ ಮಾಡುತ್ತಿದೆ ಎಂದರು.

ಬಿಜೆಪಿ ಸರಕಾರದ ವೈಫ‌ಲ್ಯಗಳು ಹೆಚ್ಚುತ್ತಿದ್ದು, ಬೆಲೆ ಏರಿಕೆ ನಿಯಂತ್ರಿಸುವಲ್ಲಿ ರಾಜ್ಯ ಸರಕಾರ ವಿಫ‌ಲವಾಗಿದೆ. ಪೆಟ್ರೋಲ್‌, ಡೀಸೆಲ್‌ ಬೆಲೆ ನಿಯಂತ್ರಣದಲ್ಲಿ ರಾಜ್ಯ ಸರಕಾರ ಕೂಡ ಹೊಣೆಗಾರರು ಎಂದು ಕೇಂದ್ರ ಹೇಳಿಕೆ ನೀಡುತ್ತಿದೆ. ಈ ಮೂಲಕ ಜನರನ್ನು ಗೊಂದಲಕ್ಕೀಡು ಮಾಡಿ ದಾರಿ ತಪ್ಪಿಸಲಾಗುತ್ತಿದೆ ಎಂದರು.

ಗಲಭೆಗಳಿಗೆ ಕಾಂಗ್ರೆಸ್‌ ಕಾರಣ ಎಂದು ಸಂಸದರು ಹೇಳುತ್ತಾರೆ. ಜಿಲ್ಲೆಯಲ್ಲಿ ಧರ್ಮದ ಹೆಸರಿನಲ್ಲಿ ಅನೇಕ ಹತ್ಯೆ, ಸಂಘರ್ಷಗಳು ನಡೆದಿವೆ. ಆದರೆ ಆ ಹತ್ಯೆಯ ಪ್ರಕರಣ ಗಳಲ್ಲಿ ಎಫ್ಐಆರ್‌ಗೊಳಗಾಗಿ ಆರೋಪಿ ಸ್ಥಾನದಲ್ಲಿ ಒಬ್ಬ ಕಾಂಗ್ರೆಸ್‌ ಕಾರ್ಯಕರ್ತ ಇಲ್ಲ. ಸಭೆ ಸಮಾರಂಭಗಳ ವೇದಿಕೆಗಳಲ್ಲಿ ಕಾಂಗ್ರೆಸ್‌ನವರು ಯಾವತ್ತೂ ಪ್ರಚೋದನಕಾರಿ ಭಾಷಣ ಮಾಡುವುದಿಲ್ಲ ಎಂದರು.

Advertisement

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌, ಮುಖಂಡರಾದ ಇಬ್ರಾಹಿಂ ಕೋಡಿಜಾಲ್‌, ಶಾಹುಲ್‌ ಹಮೀದ್‌, ಹರಿನಾಥ್‌, ಶಶಿಧರ ಹೆಗ್ಡೆ, ಪ್ರಕಾಶ್‌ ಸಾಲಿಯಾನ್‌, ಮಮತಾ ಗಟ್ಟಿ, ಅಪ್ಪಿ, ದಿವ್ಯಪ್ರಭಾ, ಸಲೀಂ, ಬೇಬಿ ಕುಂದರ್‌, ಉಮೇಶ್‌ ದಂಡೆಕೇರಿ, ಅಬ್ದುಲ್‌ ರವೂಫ್, ನವೀನ್‌ ಡಿ’ಸೋಜಾ, ಶೆರಿಲ್‌, ಶಬ್ಬೀರ್‌, ವಿಶ್ವನಾಥ್‌, ನಝೀರ್‌ ಬಜಾಲ್‌, ಸುದೀಪ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

“340 ರೂ. ಇದ್ದ ಅನಿಲ ದರ ಈಗ 1 ಸಾವಿರ ರೂ.’
ಹಿಂದೆ ಗ್ಯಾಸ್‌ಗೆ 340 ರೂ. ಇದ್ದಾಗ ಚುನಾವಣ ಪ್ರಚಾರ ಭಾಷಣಗಳಲ್ಲಿ ಅದನ್ನೇ ಮುಂದಿಟ್ಟುಕೊಂಡು ಮತ ಯಾಚಿಸಿ ಗೆದ್ದವರು ಈಗ ಅಡುಗೆ ಅನಿಲ ದರವನ್ನು 1 ಸಾವಿರ ರೂ.ಗಳಿಗೆ ತಂದು ನಿಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಯಾರೂ ಪಶ್ನಿಸುತ್ತಿಲ್ಲ. ಕಾನೂನು ಸುವ್ಯವಸ್ಥೆ ಕಾಯುವಲ್ಲಿ ಪಿಎಸ್‌ಐಗಳ ಪಾತ್ರ ಮಹತ್ತರ; ಅವರ ನೇಮಕಾತಿಯಲ್ಲೇ ಹಗರಣ ನಡೆದಿದೆ. ಇದು ಗಂಭೀರ ವಿಚಾರ. ಪ್ರಮುಖ ಆರೋಪಿಗಳು ಯಾವ ಪಕ್ಷದವರೆಂದು ಎಲ್ಲರಿಗೂ ತಿಳಿದಿದೆ ಎಂದು ರಮಾನಾಥ ರೈ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next