ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರಾದ ಎಂ.ಬಿ.ಪಾಟೀಲ, ವಿನಯ ಕುಲಕರ್ಣಿ ಹಾಗೂ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ದೇಶದ ಏಳನೇ ಧರ್ಮವಾಗಲು ಲಿಂಗಾಯತ ಧರ್ಮ ಎಲ್ಲ ಅರ್ಹತೆ ಹೊಂದಿದೆ. ಮುಖ್ಯಮಂತ್ರಿಯವರು ವಿಳಂಬ ತೋರದೆ ಶಿಫಾರಸು ಮಾಡಬೇಕೆಂದರು.
Advertisement
ರಾಜ್ಯ ಸರಕಾರಕ್ಕೆ ಮಾತೆ ಮಹಾದೇವಿಯವರು, ವಿರಕ್ತ ಮಠಾಧೀಶರು ಹಾಗೂ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ಸಮಿತಿಯಿಂದ ಪ್ರತ್ಯೇಕವಾಗಿ ಮೂರು ಮನವಿ ಸಲ್ಲಿಸಿದ್ದು, ವೀರಶೈವ ಮಹಾಸಭಾದಿಂದ ವೀರಶೈವ- ಲಿಂಗಾಯತ ಎಂದು, ಪಂಚಪೀಠಾಧೀಶರರು ವೀರಶೈವ ಧರ್ಮ ಎಂದು ಒಟ್ಟು ಐದು ಮನವಿ ಸಲ್ಲಿಕೆಯಾಗಿವೆ.
ಧಾರವಾಡ: ಹುಬ್ಬಳ್ಳಿಯಲ್ಲಿ ನ.5ರಂದು ನಡೆಯಲಿರುವ ಲಿಂಗಾಯತ ಸಮಾವೇಶಕ್ಕೆ ಹುಬ್ಬಳ್ಳಿಯವರೇ ಆದ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ ಅವರನ್ನು ಸಂಪರ್ಕಿಸಲು ಯತ್ನಿಸುತ್ತಿದ್ದೇವೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಹೇಳಿದರು. ನಗರದಲ್ಲಿ ಗುರುವಾರ ಮಾತನಾಡಿ, ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಜರುಗುವ ಸಮಾವೇಶಕ್ಕೆ ಯಡಿಯೂರಪ್ಪ ಅವರಿಗೂ ಆಹ್ವಾನ ಕೊಡುತ್ತೇವೆ. ಬಸವಣ್ಣ ಯಾವ ಪಕ್ಷಕ್ಕೂ ಸೇರಿದವರಲ್ಲ. ಹೀಗಾಗಿ, ಯಾರೇ ಬಂದರೂ ಆಹ್ವಾನವಿದೆ. ಇದು ಅನುಭವ ಮಂಟಪವಿದ್ದಂತೆ. ಎಲ್ಲ ಪಕ್ಷದವರನ್ನೂ ಕರೆಯುತ್ತೇವೆ ಎಂದರು.