Advertisement

ಜನಪರ ಆಡಳಿತಕ್ಕೆ ಜನತೆ ನೀಡಿದ ಮನ್ನಣೆ

12:32 PM May 25, 2019 | Team Udayavani |

ಈ ಬಾರಿಯ ಹ್ಯಾಟ್ರಿಕ್‌ ಜಯದ ಬಗ್ಗೆ ಏನೆನ್ನುತ್ತೀರಿ?
– ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಹತ್ತಿರವಾಗುವ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ನಮ್ಮದೇ ಪಕ್ಷದ ಸರ್ಕಾರ ಕೇಂದ್ರದಲ್ಲಿ ಇರುವುದರಿಂದ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಯಿತು. ಜನಪರ ಆಡಳಿತಕ್ಕೆ ಜನರು ಮನ್ನಣೆ ನೀಡಿದ್ದಾರೆ. ದೇಶ ರಕ್ಷಣೆ ವಿಷಯದಲ್ಲಿ ಮೋದಿ ಕೈಗೊಂಡ ನಿರ್ಧಾರಗಳಿಗೆ ಜನತೆ ಬೆಂಬಲ ನೀಡಿದ್ದಾರೆ. ಜತೆಗೆ ಮೋದಿ ಅಲೆ ಕೈ ಹಿಡಿಯಿತು. ಹೀಗಾಗಿ ಈ ಬಾರಿ ಹೆಚ್ಚಿನ ಅಂತರದಿಂದ ಗೆಲುವು ಸಿಕ್ಕಿತು.

Advertisement

ಮೋದಿ ಅಲೆಯೇ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತೆ?
– ಕೇಂದ್ರ ಸರ್ಕಾರದ ಯೋಜನೆ, ಸಾಧನೆಗಳೇ ಮೋದಿ ಅಲೆ ಸೃಷ್ಟಿಸಿದ್ದು. ಹೀಗಾಗಿ ಪ್ರಧಾನಿ ಮೋದಿಯರ ಯೋಜನೆ, ಅವರ ಸಾಧನೆಗಳೇ ಮತದಾರರನ್ನು ಆಕರ್ಷಿಸಿವೆ. ಮೋದಿಯವರ ಕಾರಣದಿಂದಲೇ ನಮ್ಮ ಕ್ಷೇತ್ರಕ್ಕೆ ಹೆಚ್ಚಿನ ಕಾಮಗಾರಿಗಳನ್ನು ತರಲು ಸಾಧ್ಯವಾಯಿತು. ಕ್ಷೇತ್ರದಲ್ಲಿ
“ಮೋದಿ ಅಲೆ ಇಲ್ಲ’ ಪ್ರಚಾರ ಮಾಡಿದ ಕಾಂಗ್ರೆಸ್‌ನವರಿಗೆ ಈಗ ಮೋದಿ ಅಲೆ ಇರುವುದು ಅರಿವಾಗಿರಬಹುದು.

ಯಾವ ತಂತ್ರಗಾರಿಕೆ ಈ ಬಾರಿ ಹೆಚ್ಚು ಅನುಕೂಲ ತಂದು ಕೊಟ್ಟಿತು?
– ಮತ ಸೆಳೆಯುವ ಯಾವ ತಂತ್ರಗಾರಿಕೆಯೂ ಇರಲಿಲ್ಲ. ಕೆಲಸ ಮಾಡಿದ್ದೇವೆ. ಇನ್ನಷ್ಟು ಕೆಲಸ ಮಾಡಲು ಅವಕಾಶ ಕೋರಿ ಕಣಕ್ಕಿಳಿಯಲಾಗಿತ್ತು. ಜನ ನನ್ನ ಕ್ಷೇತ್ರದಲ್ಲಾದ ಕೆಲಸ, ಮೋದಿಯವರ ಮೇಲಿನ ಅಭಿಮಾನ, ದೇಶ ರಕ್ಷಣೆ ವಿಚಾರ ಹೀಗೆ ಎಲ್ಲವೂ ನನ್ನ ಗೆಲುವಿಗೆ ಪೂರಕವಾದವು.

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ನಿಮಗೆ ವರವಾಯಿತೆ?
– ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಿಂದ ಗೆಲುವು ಸುಲಭವಾಯಿತು ಎನ್ನುವುದಕ್ಕಿಂತ ಕಾಂಗ್ರೆಸ್‌ ಯಾವ ಆಧಾರದಲ್ಲಿ ರಾಜಕಾರಣ ಮಾಡುತ್ತ ಬಂದಿದೆ ಎಂಬುದು ಎಲ್ಲರಿಗೂ ಗೊತ್ತು. ಟೆಂಪಲ್‌ ರನ್‌, ಗೋತ್ರ, ಪೂಜೆ ಇತ್ಯಾದಿ ನಾವು ಮಾಡಿದರೆ ಅದು ಸಹಜ. ಆದರೆ, ಇದನ್ನು ಕಾಂಗ್ರೆಸ್‌ ಮಾಡುತ್ತಿರುವುದು ನಾಟಕ ಎಂಬುದು ಜನರಿಗೆ ಗೊತ್ತಾಗಿದೆ. ಕಾಂಗ್ರೆಸ್‌ ಜನರ ಭಾವನೆ ಜತೆ ಚೆಲ್ಲಾಟವಾಡುವುದನ್ನು ಬಿಡಬೇಕು.

ನೀವು ಈ ಬಾರಿ ಮಾಡಲುದ್ದೇಶಿಸಿರುವ ಐದು ಆದ್ಯತಾ ಕೆಲಸಗಳು ಯಾವವು?
ರೇಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲು ಶ್ರಮಿಸುತ್ತೇನೆ. ರೋಣ, ಗದಗ, ಶಿರಹಟ್ಟಿ ಭಾಗದಲ್ಲಿ ಉಳ್ಳಾಗಡ್ಡಿ ಸಂಸ್ಕರಣಾ ಘಟಕ ಹಾಗೂ ಮಾರುಕಟ್ಟೆ ಬೇಡಿಕೆಗೆ ಸಾಕಾರಗೊಳಿಸುತ್ತೇನೆ. ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿ ಕೆರೆ ತುಂಬಿಸುವ ಯೋಜನೆ ತರುತ್ತೇನೆ. ಕೃಷಿ ಪೂರಕ ಕೈಗಾರಿಕೆ ಸ್ಥಾಪನೆ ಹಾಗೂ ಮೂಲಭೂತ ಸೌಕರ್ಯ ಹೆಚ್ಚಳಕ್ಕೆ ಆದ್ಯತೆ ನೀಡುತ್ತೇನೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next