Advertisement
ಇದು ಆಳುವ ವರ್ಗದ ನಿರ್ಲಕ್ಷéವೋ ಅಥವಾ ಕ್ರೀಡಾಪಡುಗಳ ದುರಂತವೋ ಗೊತ್ತಿಲ್ಲ. ಇದರಿಂದ ಅಂತಾರಾಷ್ಟ್ರೀಯ ಕ್ರೀಡಾಪಟುವೊಬ್ಬರಿಗೆ ನಿತ್ಯ ಅನ್ಯಾಯವಾಗುತ್ತಿರುವುದಂತೂ ಸುಳ್ಳಲ್ಲ. ಅಂದಹಾಗೆ, ಇದು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ಗ್ಳಲ್ಲಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿರುವ ಕುಂದಾಪುರ ಮೂಲದ ಹೆಮ್ಮೆಯ ಕ್ರೀಡಾಪಟು ವಿಶ್ವನಾಥ ಭಾಸ್ಕರ ಗಾಣಿಗ ಅವರ ನೋವಿನ ಕತೆ.
Related Articles
Advertisement
3 ರಾಷ್ಟ್ರೀಯ ದಾಖಲೆ: 2017 ರಲ್ಲಿ ಕೇರಳದಲ್ಲಿ ನಡೆದ ಏಷ್ಯನ್ ಕ್ಲಾಸಿಕ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ, ದಕ್ಷಿಣ ಆಫ್ರಿಕಾದಲ್ಲಿ ನಡೆದ ಕಾಮನ್ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್‌ನಲ್ಲಿ 1 ಚಿನ್ನ, ಅದೇ ಟೂರ್ನಿಯ ಬೆಂಚ್ ಪ್ರಸ್ ಚಾಂಪಿಯನ್ ಶಿಪ್‌ನಲ್ಲಿ 1 ಬೆಳ್ಳಿ ಪದಕ, ಜಮ್ಶೆಡ್‌ಪುರದಲ್ಲಿ ನಡೆದ ಸುಬ್ರತಾ ಕ್ಲಾಸಿಕ್ ಇಂಟರ್‌ನ್ಯಾಶನಲ್ ಪವರ್ ಲಿಫ್ಟಿಂಗ್‌ನಲ್ಲಿ 1 ಚಿನ್ನ, ಅಂತಾರಾಷ್ಟಿಯ ಪವರ್ ಲಿಫ್ಟಿಂಗ್‌ನಲ್ಲಿ ಬಲಿಷ್ಠ ಪುರುಷ ಪ್ರಶಸ್ತಿ ಪಡೆದದ್ದು, ಒಟ್ಟಾರೆಯಾಗಿ 6 ಅಂತಾರಾಷ್ಟ್ರೀಯ, 17 ರಾಷ್ಟ್ರೀಯ ಪ್ರಶಸ್ತಿಯೊಂದಿಗೆ 3 ವೈಯಕ್ತಿಕ ರಾಷ್ಟ್ರೀಯ ದಾಖಲೆ ಇವರ ಹೆಸರಲ್ಲಿದೆ.
2014ರದೇ ನಗದು ಪುರಸ್ಕಾರ ಕೊಟ್ಟಿಲ್ಲ!: ಕ್ರೀಡಾಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆಗೈದವರಿಗೆ ರಾಜ್ಯ ಸರ್ಕಾರ ನಗದು ಪುರಸ್ಕಾರ ನೀಡುವುದು ವಾಡಿಕೆ. ಆದರೆ ವಿಶ್ವನಾಥ ಗಾಣಿಗ ಅವರು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ 20ಕ್ಕೂ ಅಧಿಕ ಪದಕಗಳನ್ನು ಗೆದ್ದರೂ ಅವರಿಗೆ 2014ರಲ್ಲಿ ರಾಷ್ಟ್ರೀಯ ಪದಕ ಗೆದ್ದಿರುವುದಕ್ಕೆ ಇನ್ನೂ ನಗದು ಪುರಸ್ಕಾರ ಸಿಕ್ಕಿಲ್ಲ. ಕ್ರೀಡೆಗೆ ಅದರಲ್ಲೂ ಪವರ್ ಲಿಫ್ಟಿಂಗ್‌ನಂತಹ ಕಠಿಣ ಕ್ರೀಡೆಗೆ ಸರ್ಕಾರ ಕೊಡುವ ಬೆಲೆಯೇ ಇದು?!
ತರಬೇತಿಗೆ 2.50 ಸಾಲ: “ದಕ್ಷಿಣ ಆಫ್ರಿಕಾದಲ್ಲಿ ನಡೆದ ಕಾಮನ್‌ವೆಲ್ತ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ನಾನು ಬ್ಯಾಂಕಿಂದ ಸುಮಾರು 2.50 ಲಕ್ಷ ರೂ. ಸಾಲ ಮಾಡಿದೆ. ಸರ್ಕಾರ ಪದಕ ಗೆದ್ದಿರುವುದಕ್ಕೆ ನಗದು ಪುರಸ್ಕಾರ ಏನಾದರೂ ಕೊಟ್ಟಿದ್ದರೆ ಸ್ವಲ್ಪವಾದರೂ ಅನುಕೂಲವಾಗುತ್ತಿತ್ತು. ಆದರೀಗ ಕೆಲಸವೂ ಸಿಕ್ಕಿಲ್ಲ. ಸಾಲವೂ ಸುಮಾರು 3.50 ಲಕ್ಷದಷ್ಟಿದೆ. ಅದನ್ನು ತೀರಿಸುವುದೇ ಸವಾಲಾಗಿದೆ.
ಕ್ರಿಕೆಟ್, ಹಾಕಿಯಂತಹ ಕ್ರೀಡೆಗಳಿಗೆ ಮಾತ್ರ ಸರ್ಕಾರ ಮನ್ನಣೆ ಕೊಡುತ್ತಿದೆ. ಪವರ್ ಲಿಫ್ಟಿಂಗ್ ಬಹಳಷ್ಟು ತ್ರಾಸದಾಯಕ ಕ್ರೀಡೆಯಾಗಿದ್ದರೂ ಅದಕ್ಕೆ ಪ್ರೊತ್ಸಾಹ ಕೊಡಲು ಯಾರೂ ಗಮನ ಕೊಡುವುದಿಲ್ಲ. ಕೆಲಸ ಕೊಡುತ್ತೇನೆಂದು ಕರೆಸಿ, ಶೈಕ್ಷಣಿಕ ಅರ್ಹತೆ ಕೇಳಿದರು. ಹಾಗಾದರೆ ನನ್ನ ಸಾಧನೆ, ಸ್ನಾತಕೋತ್ತರ ಪದವಿಗೆ ಬೆಲೆ ಇಲ್ಲವೇ?’ ಎಂದು ವಿಶ್ವನಾಥ ಭಾಸ್ಕರ ಗಾಣಿಗ ತಮ್ಮ ಅಳಲು ತೋಡಿಕೊಂಡರು.
ಕ್ರೀಡಾ ಕೋಟಾದಡಿ ಕರೆಸಿ ಅರ್ಹತೆ ಕೇಳಿದರು!: ರಾಜ್ಯದಲ್ಲಿ ಈಗ ಸಾಧಕ ಕ್ರೀಡಾಪಟುಗಳಿಗೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಹೊರತುಪಡಿಸಿದರೆ ಬೇರೆ ಇಲಾಖೆಯಲ್ಲಿ ಕ್ರೀಡಾ ಕೋಟಾದಡಿ ಕೆಲಸ ನೀಡುತ್ತಿಲ್ಲ. ವಿಶ್ವನಾಥ ಗಾಣಿಗ ಅವರನ್ನು 2015 ರಲ್ಲಿ ಅರಣ್ಯ ಇಲಾಖೆಯಲ್ಲಿ ಕ್ರೀಡಾ ಕೋಟಾದಡಿ ಕೆಲಸ ಕೊಡುತ್ತೇವೆ ಎಂದು ಕರೆಸಿಕೊಳ್ಳಲಾಗಿತ್ತು.
ದೈಹಿಕ ಪರೀಕ್ಷೆಯಲ್ಲಿ ಪ್ರಥಮ, ಲಿಖೀತ ಪರೀಕ್ಷೆಯಲ್ಲಿ 4ನೇ ಸ್ಥಾನ ಪಡೆದು ಉದ್ಯೋಗಾಂಕ್ಷಿಯಾಗಿದ್ದರು. ವಾಸ್ತವ ಆಗಿದ್ದರೂ “ನೀವು ಪದವಿಯಲ್ಲಿ ಬಿಸಿಎ ಮಾಡಿದ್ದು, ಅದಕ್ಕೆ ಮಾನ್ಯತೆಯಿಲ್ಲ. ಸೈನ್ಸ್ ಮಾಡಿದ್ದರೆ ಕೊಡಬಹುದಿತ್ತು’ ಎಂಬ ಕಾರಣ ಹೇಳಿ ಉದ್ಯೋಗ ನೀಡಲು ನಿರಾಕರಿಸಲಾಯಿತು ಎಂದು ವಿಶ್ವನಾಥ್ ಬೇಸರದಿಂದ ಹೇಳಿಕೊಳ್ಳುತ್ತಾರೆ.
* ಪ್ರಶಾಂತ್ ಪಾದೆ