ಉಡುಪಿ: ಭಾರತದ ಪತ್ರಿಕಾ ರಂಗದಲ್ಲಿ ಮೊದಲಿಗೆ ಆಧುನಿಕ ‘ಆಫ್ಸೆಟ್’ ತಂತ್ರಜ್ಞಾನ ಬಳಸಿ ದಿನಪತ್ರಿಕೆಯನ್ನು ಮುದ್ರಣ ಮಾಡಿದ ಕೀರ್ತಿ ಉದಯವಾಣಿ ದಿನಪತ್ರಿಕೆಗೆ ಸಲ್ಲುತ್ತದೆ. ಇದರ ಹಿಂದೆ ಸಾಕಷ್ಟು ಸಿಬಂದಿ ಕೆಲಸ ಮಾಡಿದ್ದಾರೆ ಎಂದು ಮಣಿಪಾಲ ಮೀಡಿಯಾ ನೆಟ್ವರ್ಕ್ ಲಿ.ನ ಆಡಳಿತ ನಿರ್ದೇಶಕ ಟಿ. ಸತೀಶ್ ಯು. ಪೈ ತಿಳಿಸಿದರು.
ತರಂಗ ವಾರ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಪೈ ಮಾತನಾಡಿ, ಉದಯವಾಣಿ ಪ್ರತಿಕೆ ಪ್ರಾರಂಭದಲ್ಲಿ ಇಂದಿನಷ್ಟು ತಂತ್ರಜ್ಞಾನ ಮುಂದುವರಿದಿರಲಿಲ್ಲ. ಸಂಪಾದಕೀಯ ವಿಭಾಗ ಸೇರಿದಂತೆ ವಿವಿಧ ವಿಭಾಗದವರ ಪರಿಶ್ರಮದಿಂದ ಪತ್ರಿಕೆ ಕರಾವಳಿಯಲ್ಲಿ ಬಹಳಷ್ಟು ಓದುಗರನ್ನು ಹೊಂದಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ, ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಪತ್ರಿಕೆಗಳು ಮುಖ್ಯ ಪಾತ್ರ ವಹಿಸುತ್ತವೆ. ಉದಯವಾಣಿ ಪತ್ರಿಕೆ 50ರ ಸಂಭ್ರಮ ಆಚರಿಸುತ್ತಿದೆ. ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲಿ ಉದಯವಾಣಿ ಪತ್ರಿಕೆ ಕೊಡುಗೆ ಅಪಾರ ಎಂದರು.
ತರಂಗ ವಾರ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಪೈ ಅವರನ್ನು ಈ ಸಂದರ್ಭ ಗೌರವಿಸಲಾಯಿತು. ಪತ್ರಕರ್ತರ ವೇದಿಕೆಯ ಜಿಲ್ಲಾಧ್ಯಕ್ಷ ಶೇಖರ್ ಅಜೆಕಾರ್ ಅಧ್ಯಕ್ಷತೆ ವಹಿಸಿದ್ದರು. ಮಣಿಪಾಲ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಟಿ. ಗೌತಮ್ ಪೈ, ಉದ್ಯಮಿ ಪ್ರಶಾಂತ ಕಾಮತ್, ವಿಶ್ವನಾಥ್ ಶೆಣೈ, ಸಂಗೀತ ತಜ್ಞ ನಾದವೈಭವಂ ವಾಸುದೇವ ಭಟ್, ಸಾಹಿತಿ ಕು.ಗೋ., ಪಿ.ಎನ್. ಆಚಾರ್ಯ, ಎ. ನರಸಿಂಹಮೂರ್ತಿ ಬೊಮ್ಮರಬೆಟ್ಟು ಉಪಸ್ಥಿತರಿದ್ದರು.
Advertisement
ಬೆಂಗಳೂರು ಪತ್ರಕರ್ತರ ವೇದಿಕೆ ಪತ್ರಿಕಾ ದಿನಾಚರಣೆ ಅಂಗವಾಗಿ ರವಿವಾರ ಮಣಿಪಾಲದಲ್ಲಿ ಆಯೋಜಿಸಿದ್ದ ‘ಹಿರಿಯರೆಡೆಗೆ ನಮ್ಮ ನಡೆ’ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
Related Articles
Advertisement
ಸಂಘಟಕ ಭುವನ ಪ್ರಸಾದ್ ಹೆಗ್ಡೆ ಸ್ವಾಗತಿಸಿದರು, ರಾಘವೇಂದ್ರ ಕರ್ವಾಲು ಅವರು ವಂದಿಸಿದರು.
ಸುವರ್ಣ ಸಂಭ್ರಮದಲ್ಲಿ ಉದಯವಾಣಿ
ಮೂರು ತಿಂಗಳಿಗಿಂತ ಹೆಚ್ಚು ಕಾಲ ನಮ್ಮ ಪತ್ರಿಕೆ ಬದುಕುವುದಿಲ್ಲ ಎಂದು ಹಲವರು ಹೇಳಿದ್ದರು. ಓದುಗರು, ತಂತ್ರಜ್ಞರು ಹಾಗೂ ಅಂದಿನಿಂದ ಇಂದಿನವರೆಗೆ ದುಡಿದ ನಿಷ್ಠಾವಂತರಿಂದ ಉದಯವಾಣಿ ಸುವರ್ಣ ಸಂಭ್ರಮ ಆಚರಿಸುತ್ತಿದೆ. ದಿನಪತ್ರಿಕೆಯನ್ನು ಕಟ್ಟುವಲ್ಲಿ ಟಿ. ಮೋಹನ್‌ದಾಸ್ ಪೈಅವರ ಪಾತ್ರ ಪ್ರಮುಖವಾಗಿದೆ. ರಾಮಾಚಾರ್ಯ, ಗೋವಿಂದಾಚಾರ್ಯ ಅವರು ಉದಯವಾಣಿ ಪತ್ರಿಕೆಯ ಬಲಿಷ್ಠವಾದ ಆಧಾರ ಸ್ತಂಭಗಳಾಗಿದ್ದರು. ಅವರನ್ನು ಈ ಸಂದರ್ಭದಲ್ಲಿ ನೆನಪಿಸುವುದು ಅಗತ್ಯವಾಗಿದೆ ಎಂದು ಟಿ. ಸತೀಶ್ ಯು. ಪೈ ಅವರು ತಿಳಿಸಿದರು.