Advertisement

ವಿಕೋಟ ಸೋಂಕಿತನ ಓಡಾಟ ಸವಾಲಾಗಿ ಸ್ವೀಕರಿಸಿ

05:32 PM May 11, 2020 | mahesh |

ಕೋಲಾರ: ಆಂಧ್ರಪ್ರದೇಶದ ವಿಕೋಟದ ಕೋವಿಡ್ ಸೋಂಕಿತ ವ್ಯಕ್ತಿ ಕೋಲಾರದ ಎಪಿಎಂಸಿಯಲ್ಲಿ ಓಡಾಡಿದ್ದು ಮಂಡಿ ಮಾಲೀಕರು ಇದನ್ನು ಸವಾಲಾಗಿ ಸ್ವೀಕರಿಸಿ
ಕಡ್ಡಾಯವಾಗಿ ಜಿಲ್ಲಾಡಳಿತದ ನಿಯಮ ಪಾಲಿಸಬೇಕು ಎಂದು ಎಪಿಎಂಸಿ ಅಧ್ಯಕ್ಷ ವಡಗೂರು ಡಿ.ಎಲ್‌.ನಾಗರಾಜ್‌ ತಿಳಿಸಿದರು.

Advertisement

ನಗರದ ಹೊರವಲಯದ ಎಪಿಎಂಸಿಯಲ್ಲಿ ಭಾನುವಾರ ನಡೆದ ಆಡಳಿತ ಮಂಡಳಿ, ವರ್ತಕರು, ಮಂಡಿ ಮಾಲೀಕರ ಸಭೆಯಲ್ಲಿ ಮಾತನಾಡಿದ ಅವರು, ತಮ್ಮ ಮಂಡಿಗೆ ಯಾರೇ ಹೊಸ ವ್ಯಕ್ತಿ ಬಂದರೂ ಅವರನ್ನು ಪರೀಕ್ಷೆಗೆ ಒಳಪಡಿಸಬೇಕು. ಜೊತೆಗೆ ವಿಕೋಟ ವ್ಯಕ್ತಿಯೊಂದಿಗೆ ಸಂಪರ್ಕ ಇದ್ದವರು ಸ್ವತಃ ತಾವೇ ತಪಾಸಣೆಗೆ ಹೋಗಬೇಕು, ರೈತರ ಹಿತದೃಷ್ಟಿಯಿಂದ ನಮ್ಮೆಲ್ಲರ ಜವಾಬ್ದಾರಿ ಎಂಬುದನ್ನು ಅರಿತು ಕೆಲಸ ಮಾಡಬೇಕು ಎಂದು ಸೂಚಿಸಿದರು.

ನಂಬಿಕೆ ಉಳಿಸಿಕೊಳ್ಳಿ: ನಮ್ಮೆಲ್ಲರ ಜೀವವನ್ನು ಉಳಿಸಿಕೊಳ್ಳಬೇಕಾಗಿದೆ, ನಾವು ಇದ್ದರೆ ಮುಂದಿನ ದಿನಗಳಲ್ಲಿ ವ್ಯಾಪಾರ ಮಾಡಬಹುದು. ಜೀವ ಇಲ್ಲದೇ ಹೋದರೆ ವ್ಯಾಪಾರ ಮಾಡಲು ಸಾಧ್ಯವಿಲ್ಲ, ಹೊರಗಿನ ತರಕಾರಿ ಗಳನ್ನು ಕೋಲಾರದ ಎಪಿಎಂಸಿಗೆ ತರಿಸಿಕೊಳ್ಳುವುದು ಬೇಡ, ರೈತರನ್ನು ಮಂಡಿಗೆ ಕರೆಸಿಕೊಳ್ಳಬೇಡಿ, ಮಾಲಿಕರ ಮೇಲೆ ರೈತರ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಎಪಿಎಂಸಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕಾಗಿದೆ
ಎಂದು ವಿವರಿಸಿದರು.

500 ರೂ.ದಂಡ: ಜನರ, ರೈತರ ಉಳಿವಿಗಾಗಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಸ್ಕ್ ಇಲ್ಲದವರಿಗೆ 500 ರೂ.ದಂಡ ವಿ ಧಿಸಲಾಗುವುದು ಎಂದು ಪ್ರತಿ ಮಂಡಿ ಮಾಲಿಕರು ನೋಟಿಸ್‌ ಹಾಕಬೇಕು. ಮಾರುಕಟ್ಟೆಯಲ್ಲಿ ಕಾಲಕಾಲಕ್ಕೆ ಔಷಧಿಗಳನ್ನು ಸಿಂಪಡಿಸಬೇಕು, ಬೀಡಿ ಗುಟ್ಕಾ ಉಗಿಯುವರಿಗೆ ಬುದ್ಧಿ ಹೇಳಿ ಈ ಕೋವಿಡ್ ನಮ್ಮ ಜಿಲ್ಲೆ ಯಲ್ಲಿ ಬರದಂತೆ ನೋಡಿಕೊಳ್ಳಲು ಸಹಕರಿಸಿ‌ಬೇಕು ಎಂದು ವಿವರಿಸಿದರು.

ಆತಂಕ ಬೇಡ: ನಮ್ಮ ಜಿಲ್ಲೆಯಲ್ಲಿ ಯಾವುದೇ ಕೋವಿಡ್ ಪಾಸಿಟಿವ್‌ ಪ್ರಕರಣ ಪತ್ತೆಯಾ ಗಿಲ್ಲ. ವಿಕೋಟದ ವ್ಯಕ್ತಿ ಬಂದು ಹೋಗಿದ್ದಾನೆ ಎಂದು ಮಾರುಕಟ್ಟೆಯಲ್ಲಿ ಕೆಲಸ ಮಾಡುವ ವರು ಬಾಡಿಗೆ ಮನೆ ಮಾಲಿಕರು ಕಿರುಕುಳ ಕೊಡುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ ಯಾರು ಬಾಡಿಗೆ ಮನೆಯ ಮಾಲಿಕರು ಆತಂಕ ಪಡಬಾರದು ಎಂದು ತಿಳಿಸಿದರು.

Advertisement

ದಲ್ಲಾಳಿಗಳ ಸಂಘದ ಅಧ್ಯಕ್ಷ ಆರ್‌.ಎ.ಪಿ ನಾರಾಯಣಸ್ವಾಮಿ ಮಾತನಾಡಿ, ಸರ್ಕಾರ ಮತ್ತು ಜಿಲ್ಲಾಡಳಿತದ ನಿಯಮಗಳನ್ನು ಕಡ್ಡಾಯವಾಗಿ ಮಾಲಿಕರು ಜಾರಿ ಮಾಡ
ಬೇಕು. ಮಾರುಕಟ್ಟೆಯಲ್ಲಿ ವಹಿವಾಟು ನಿಲ್ಲಿ ಸುವ ನಿರ್ಧಾರ ಜಿಲ್ಲಾ ಧಿಕಾರಿಗಳಿಗೆ ಇದೆ. ನಾವು ಎಲ್ಲಾ ರೈತರು ನಮ್ಮ ದೇವರು ಎಂಬುದನ್ನು ತಿಳಿಯಬೇಕು ಎಂದು ವಿವರಿಸಿದರು.
ಸಭೆಯಲ್ಲಿ ಎಪಿಎಂಸಿ ಉಪಾಧ್ಯಕ್ಷ ಕೆ. ರವಿಶಂಕರ್‌, ನಿರ್ದೇಶಕ ದೇವರಾಜ್‌, ಕಾರ್ಯದರ್ಶಿ ಟಿ.ಎಸ್‌ ರವಿಕುಮಾರ್‌, ಮಂಡಿ ಮಾಲೀಕರಾದ ಸುಧಾಕರ್‌, ರಾಮ
ಸ್ವಾಮಿ, ಪುಟ್ಟರಾಜು, ಬೈಚಪ್ಪ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next