Advertisement
ರಂಗ ಚಟುವಟಿಕೆಗೆ ಆಧುನಿಕ ಸ್ಪರ್ಶಕಾರ್ಕಳದ ಕಡಂದಲೆಯ ನಾರಾಯಣ ಅವರು ಮಂಗಳೂರಿಗೆ ಬಂದು ತನ್ನ ನಿಕಟ ಬಂಧುಗಳ ಟೈಲರ್ ಅಂಗಡಿಯಲ್ಲಿ ಕೆಲಸ ಮಾಡುತ್ತಾ ವೃತ್ತಿ ಕಲಿತು ಕೆ.ಎನ್. ಟೈಲರ್ ಎಂದು ಗುರುತಿಸಿಕೊಂಡರು. ನಾಟಕದ ಮೇಲಿನ ಅಭಿಮಾನದಿಂದ ತನ್ನ ವೃತ್ತಿಯಲ್ಲಿ ನಷ್ಟ ಹೊಂದಿ ಮುಂಬಯಿಗೆ ಹೋಗಿ ಬಳಿಕ ವೃತ್ತಿ, ಪ್ರವೃತ್ತಿಯಲ್ಲಿ ಯಶಸ್ಸು ಕಂಡರು. ಊರಿಗೆ ಬಂದು ಟೈಲರ್ ವೃತ್ತಿ ಮುಂದುವರಿಸಿದರು. ನಾಟಕ ಕ್ಷೇತ್ರಕ್ಕೆ ಪೂರಕ ವಾತಾವರಣ ಇಲ್ಲದಂತಹ ಸಂದರ್ಭದಲ್ಲಿಯೂ, ಲಭ್ಯ ತಂತ್ರಜ್ಞಾನ ಬಳಸಿ ರಂಗ ಚಟುವಟಿಕೆಗೆ ಆಧುನಿಕ ಸ್ಪರ್ಶ ನೀಡಿದ್ದರು ಎಂದರು.
ಕೆ.ಬಿ. ಭಂಡಾರಿ ತನ್ನ ಜೀವನವನ್ನು ಸಂಪೂರ್ಣವಾಗಿ ತುಳು ರಂಗಭೂಮಿಗೆ ಅರ್ಪಿಸಿಕೊಂಡು ಏಕಾಂಗಿ ಜೀವನ ನಡೆಸಿದವರು. ತುಳು ರಂಗ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡವರನ್ನು ಮಕ್ಕಳಂತೆ ಪ್ರೀತಿಸುತ್ತಿದ್ದ ಅವರು ತುಳು ರಂಗ ಭೂಮಿಯ ಎಲ್ಲ ವಿಭಾಗಗಳಲ್ಲೂ ತೊಡಗಿಸಿಕೊಂಡಿದ್ದರು ಎಂದರು.
Related Articles
Advertisement
ಕೆ.ಬಿ. ಭಂಡಾರಿ ನೆಂಪುತುಳು ನಾಟಕ ಪರ್ಬದ 6ನೇ ದಿನದ ಕಾರ್ಯಕ್ರಮದಲ್ಲಿ ಕೆ.ಬಿ. ಭಂಡಾರಿ ಅವರ ನೆಂಪು ಕಾರ್ಯಕ್ರಮ ಜರಗಿತು. ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯೆ ಸರೋಜಿನಿ ಶೆಟ್ಟಿ ನುಡಿನಮನ ಸಲ್ಲಿಸಿದರು.