Advertisement
ಕಣಿವೆ ಮೂಲದ ಬಂಡುಕೋರರು ಗುಂಪುಗಳ ಸಹಾಯದಿಂದ ಕೆಲವು ದುಷ್ಕರ್ಮಿಗಳು ಮಾರುಕಟ್ಟೆಯಿಂದ ಹಲವು ಟ್ರಕ್‌ಗಳನ್ನು ಖರೀದಿಸಿ, ಅವುಗಳಿಗೆ ಸೇನೆಯ ಮಾದರಿಯ ಬಣ್ಣಗಳನ್ನು ಹಚ್ಚಿದ್ದಾರೆ. ಜತೆಗೆ ಅಸ್ಸಾಂ ರೈಫಲ್ಸ್‌ನ ಲಾಂಛನವನ್ನೂ ಅಳವಡಿಸಿದ್ದಾರೆ. ನಾಗರಿಕ ವಾಹನಗಳನ್ನು ಸೇನಾ ವಾಹನಗಳಾಗಿ ಕಾಣುವಂತೆ ಬದಲಾಯಿಸಿದ್ದಾರೆ. ಇವುಗಳನ್ನು ಬಳಸಿಕೊಂಡು ದೇಶವಿರೋಧಿ ಕೃತ್ಯಗಳನ್ನು ನಡೆಸುವ ಅಪಾಯವಿದೆ ಎಂದು ಚುರಾಚಾಂದ್‌ಪುರ ಎಸ್‌ಪಿಗೆ ಬರೆದ ಪತ್ರದಲ್ಲಿ ಅಸ್ಸಾಂ ರೈಫಲ್ಸ್ ಕಳವಳ ವ್ಯಕ್ತಪಡಿಸಿದೆ. ಜತೆಗೆ, ಕೂಡಲೇ ಎಚ್ಚೆತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಸಂಭಾವ್ಯ ವಿಧ್ವಂಸಕ ಕೃತ್ಯವನ್ನು ತಪ್ಪಿಸುವಂತೆಯೂ ಮನವಿ ಮಾಡಿದೆ.ಸತತ 4 ತಿಂಗಳಿಂದಲೂ ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದ್ದು, ಈವರೆಗೆ 175ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.