Advertisement

ಧೋನಿ ತಂಡದಿಂದ ದೂರವುಳಿಯಲು ಕಾರಣವೇನು ಗೊತ್ತಾ?

09:31 AM Sep 27, 2019 | keerthan |

ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ, ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಕಳೆದ ವಿಶ್ವಕಪ್ ನಂತರ ಯಾವುದೇ ಕ್ರಿಕೆಟ್ ಪಂದ್ಯವಾಡಿಲ್ಲ. ಬಿಸಿಸಿಐನಿಂದ ಎರಡು ತಿಂಗಳ ರಜೆ ಪಡೆದಿದ್ದ ಧೋನಿ ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಸರಣಿ ತಪ್ಪಿಸಿಕೊಂಡಿದ್ದರು. ಈಗ ಮುಂದಿನ ನವೆಂಬರ್ ನಲ್ಲಿ ನಡೆಯಲಿರುವ ಬಾಂಗ್ಲಾ ವಿರುದ್ಧದ ಸರಣಿಗೂ ಧೋನಿ ಅಲಭ್ಯರಾಗಲಿದ್ದಾರೆ. ಹಾಗಾದರೆ ಧೋನಿ ಯಾಕೆ ಕ್ರಿಕೆಟ್ ಆಡುತ್ತಿಲ್ಲ, ರಜೆಯ ಹಿಂದಿನ ಕಾರಣವೇನು? ಮುಂದೆ ಓದಿ.

Advertisement

ಮಹೇಂದ್ರ ಸಿಂಗ್ ಧೋನಿ ಕಳೆದ ವಿಶ್ವಕಪ್ ವೇಳೆ ಗಾಯಗೊಂಡಿದ್ದರು. ಇದೇ ಕಾರಣದಿಂದ ಅವರು ಆಯ್ಕೆಗೆ ಲಭ್ಯವಾಗುತ್ತಿಲ್ಲ. ಇಂಗ್ಲೆಂಡ್ ವಿಶ್ವಕಪ್ ನ ಮಧ್ಯದಲ್ಲೇ ಅವರು ಗಾಯಗೊಂಡಿದ್ದರು. ಆದರೂ ಅವರು ಸಂಪೂರ್ಣ ಕೂಟವನ್ನು ಗಾಯದೊಂದಿಗೆ ಆಡಿದ್ದರು ಎನ್ನುತ್ತವೆ ಬಿಸಿಸಿಐ ಮೂಲಗಳು.

ಮುಂದಿನ ಡಿಸೆಂಬರ್ ನಲ್ಲಿ ಭಾರತದಲ್ಲಿ ನಡೆಯಲಿರುವ ವಿಂಡೀಸ್ ವಿರುದ್ಧದ ಸರಣಿಗೆ ಧೋನಿ ಲಭ್ಯರಾಗುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next