Advertisement
ಶೂನ್ಯ ವೇಳೆಯಲ್ಲಿ ಬಿಜೆಪಿಯ ಕುಮಾರ್ ಬಂಗಾರಪ್ಪ ಅವರು, ಹಾಸ್ಟೆಲ್‌ಗಳಿಗೆ ಆಹಾರ ಪೂರೈಕೆ ಟೆಂಡರ್‌ನಲ್ಲಿ 1 ರೂ.ಗೆ ರಾಗಿ, 10 ರೂ.ಗೆ ದಪ್ಪ ಅಕ್ಕಿ, 5 ರೂ.ಗೆ ಎಣ್ಣೆ ವಿತರಣೆ ಮಾಡಲಾಗುವುದು ಎಂದು ಕಡಿಮೆ ದರಕ್ಕೆ ಟೆಂಡರ್ ಹಾಕಿದವರಿಗೆ ನೀಡಲಾಗಿದೆ. ಹತ್ತು ವರ್ಷದಿಂದಲೇ ಅದೇ ಸಂಸ್ಥೆ ಆಹಾರ ಪೂರೈಸುತ್ತಿದೆ ಎಂದು ಹೇಳಿದರು. ಇದಕ್ಕೆ ಕೆ.ಎಸ್. ಈಶ್ವರಪ್ಪ, ಆರಗ ಜ್ಞಾನೇಂದ್ರ, ಹಾಲಪ್ಪ ಧ್ವನಿಗೂಡಿಸಿದರು. ಇದೊಂದು ಕರ್ಮಕಾಂಡ ಶಿವಮೊಗ್ಗ ಭಾಗದಲ್ಲಿ ಲೂಟಿ ಮಾಡಲಾಗುತ್ತಿದೆ. ರಾಜ್ಯಪೂರ್ತಿ ಲೂಟಿ ಮಾಡಲು ಇದೀಗ ರಾಜ್ಯಕ್ಕೆಲ್ಲಾ ಒಂದೇ ಟೆಂಡರ್ ಕರೆಯಲು ಸಿದ್ಧತೆ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಆಗ ರಮೇಶ್‌ಕುಮಾರ್, ಅಯ್ಯೋ ಶಿವಮೊಗ್ಗ ಎಂದರೆ ಗೋಪಾಲಗೌಡರು, ಕಡಿದಾಳ್ ಮಂಜಪ್ಪ ಹುಟ್ಟಿದ ಜಿಲ್ಲೆ. ಅಲ್ಲಿ ಲಂಚ, ಭ್ರಷ್ಟಾಚಾರ ಎಂದರೆ
ನೋವಾಗುತ್ತದೆ. 1 ರೂ.ಗೆ ರಾಗಿ ಕೊಡಲು ಟೆಂಡರ್ ಹಾಕಿದ್ದಾನೆ ಎಂದರೆ ವಿಚಾರಣೆಯೇ ಇಲ್ಲದೆ ಅವನು ಫ್ರಾಡ್ ಎಂದು ಹೇಳಬಹುದು. ಇಲ್ಲವೇ ರಾಜ್ಯಪೂರ್ತಿ ಆತನಿಗೆ ಟೆಂಡರ್ ಕೊಟ್ಟು ಸಪ್ಲೆç ಮಾಡು ಎಂದು ಹೇಳಬೇಕು. ಮೊದಲು ಟೆಂಡರ್ ಕ್ಯಾನ್ಸಲ್ ಮಾಡಿ ಎಂದು ತಾಕೀತು ಮಾಡಿದರು. ಸದುದ್ದೇಶದಿಂದ ತಂದ ಕೆಟಿಟಿಪಿ ಕಾಯ್ದೆ ದುರುಪಯೋಗವಾಗುತ್ತಿದೆ ಎಂದು ಹೇಳಿದರು.