Advertisement

ಶೀಘ್ರದಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ Realme X7 5G

02:23 PM Jan 31, 2021 | Team Udayavani |

ನವದೆಹಲಿ: ಕಳೆದ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಚೀನಾ ಮಾರುಕಟ್ಟೆಗೆ ಲಗ್ಗೆ ಇಡುವ ಮೂಲಕ ಧೂಳೆಬ್ಬಿಸಿದ್ದ ಪ್ರಸಿದ್ಧ ಸ್ಮಾರ್ಟ್ ಪೋನ್ ಕಂಪನಿಯಾದ realme ಯ  X7 5G ಆವೃತ್ತಿಯು ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡಲು ತಯಾರಾಗಿದ್ದು, ಮುಂಬರುವ ಫೆಬ್ರವರಿ 4ರಂದು ಬಿಡುಗಡೆಗೊಳ್ಳಲಿದೆ ಎನ್ನಲಾಗಿದೆ. ಈ ನಡುವೆ ಭಾರತದಲ್ಲಿ ಈ  ಹೊಸ ಸ್ಮಾರ್ಟ್ ಪೋನಿನ ಬೆಲೆ ಎಷ್ಟಿರಬಹುದು ಎಂಬ ಮಾಹಿತಿಗಳನ್ನು ಒಳಗೊಂಡಂತೆ ಮೊಬೈಲ್ ಪೋನಿನ ಫೀಚರ್ ಗಳ ಕುರಿತಾದ ಮಾಹಿತಿಗಳು ಆನ್ ಲೈನ್ ನಲ್ಲಿ ಸೋರಿಕೆಯಾಗಿದೆ.

Advertisement

ರಿಯಲ್ ಮೀ X7 5G ಯ ವೈಶಿಷ್ಟ್ಯತೆಗಳು

ಈ ಹೊಸ ಸರಣಿಯ ಸ್ಮಾರ್ಟ್ ಪೋನ್ ಓಕ್ಟಾ ಕೋರ್  ಮೀಡಿಯಾ ಟೆಕ್ ಡೆನ್ಸಿಟಿ 800U SoC ಪ್ರೊಸೆಸರ್ ಅನ್ನು ಒಳಗೊಂಡಿರಲಿದ್ದು, LPDDR 4x RAM ಅನ್ನು ಹೊಂದಿರಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಋತುವಿನ ಮೊದಲ ಕಂಬಳ ಯಶಸ್ವಿ: ಇಲ್ಲಿದೆ ಹೊಕ್ಕಾಡಿಗೋಳಿ ಕಂಬಳದ ಫಲಿತಾಂಶ ಪಟ್ಟಿ

ಡಿಸ್ ಪ್ಲೇ

Advertisement

X7 5G ಸ್ಮಾರ್ಟ್ ಪೋನ್ 6.4 ಇಂಚಿನ ಫುಲ್ ಹೆಚ್.ಡಿ+ ಅಮೋಲ್ಡ್ ಡಿಸ್ ಪ್ಲೇ ಅನ್ನು ಒಳಗೊಂಡಿರಲಿದೆ ಎಂದು ತಿಳಿದು ಬಂದಿದೆ.

ಕ್ಯಾಮರಾ ವಿನ್ಯಾಸ

ಈ ಸ್ಮಾರ್ಟ್ ಪೋನ್ ನಲ್ಲಿ ಕ್ವಾಡ್ ರೇರ್ ಕ್ಯಾಮರಾ ಇರಲಿದ್ದು, 64 MP ಪ್ರಾಥಮಿಕ ಕ್ಯಾಮರಾ, 8 MP  ಅಲ್ಟ್ರಾ ವೈಡ್ ಆ್ಯಂಗಲ್ ಕ್ಯಾಮರಾ ಮತ್ತು 2 MP ಮೈಕ್ರೋ ಕ್ಯಾಮರಾವನ್ನು ಹೊಂದಿರಲಿದೆ ಹಾಗೂ 32 MP ಸೆಲ್ಫಿ ಕ್ಯಾಮರಾವನ್ನು ಒಳಗೊಂಡಿರಲಿದೆ.

ಇದನ್ನೂ ಓದಿ:“ಹಾರ್ಮ್ ಫುಲ್ ಕಂಟೆಂಟ್ ಗಳನ್ನು ನಿಯಂತ್ರಿಸಲು ಹೊಸ ತಂತ್ರ” : ಫೇಸ್ ಬುಕ್

ಬೆಲೆ

ರಿಯಲ್ ಮೀ X7 5G ಭಾರತೀಯ ಮಾರುಕಟ್ಟೆಯಲ್ಲಿ  ಎರಡು ರೀತಿ ಬೆಲೆಗಳಲ್ಲಿ ಲಭ್ಯವಾಗಲಿದ್ದು, 6GB + 128 GB ಸ್ಟೋರೇಜ್ ಅನ್ನು ಒಳಗೊಂಡಿರುವ ಸ್ಮಾರ್ಟ್ ಪೋನ್ 19,999 ರೂಗಳಲ್ಲಿ ಲಭ್ಯಗೊಳ್ಳಲಿದೆ. ಇನ್ನು 8GB + 128 GB ಸ್ಟೋರೇಜ್ ಅನ್ನು ಒಳಗೊಂಡಿರುವ ಸ್ಮಾರ್ಟ್ ಪೋನ್ 21,999 ರೂಗಳಲ್ಲಿ ಬಳಕೆದಾರರನ್ನು ತಲುಪಲಿದೆ.

Advertisement

Udayavani is now on Telegram. Click here to join our channel and stay updated with the latest news.

Next