Advertisement
ಇದನ್ನೂ ಓದಿ:ಪರಿಷತ್ ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ ನಿಂದ ನಜೀರ್ ಅಹ್ಮದ್ ಸ್ಪರ್ಧೆ: ನಾಮಪತ್ರ ಸಲ್ಲಿಕೆ
ಇದು ಸಹ 5ಜಿ ನೆಟ್‌ವರ್ಕ್ ಬೆಂಬಲಿಸುವ ಫೋನ್ ಆಗಿದೆ. 6.4 ಇಂಚಿನ ಸುಪರ್ ಅಮೋಲೆಡ್ ಪರದೆ ಹೊಂದಿದೆ. ಫುಲ್ಎ ಚ್ ಪ್ಲಸ್ ಡಿಸ್‌ಪ್ಲೇ ಇದ್ದು, 60 ಹರ್ಟ್ಜ್ ರಿಫ್ರೆಶ್ ರೇಟ್ ಇದೆ. ಇದರಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 800ಯು ಪ್ರೊಸೆಸರ್ ಹಾಕಲಾಗಿದೆ. ಅಂಡ್ರಾಯ್ಡ್ 10, ರಿಯಲ್ ಮಿ ಯೂಸರ್ ಇಂಟರ್ ಫೇಸ್ ಇದೆ. 64 ಮೆ.ಪಿ. 8 ಮೆ.ಪಿ. ಮತ್ತು 2 ಮೆ.ಪಿ. ತ್ರಿವಳಿ ಕ್ಯಾಮರಾ ಹೊಂದಿದ್ದು, ಸೆಲ್ಫಿಗೆ 16 ಮೆ.ಪಿ. ಕ್ಯಾಮರಾ ಇದೆ. 4310 ಎಂಎಎಚ್ ಬ್ಯಾಟರಿಗೆ 50 ವ್ಯಾಟ್ಸ್ ವೇಗದ ಚಾರ್ಜರ್ ಸೌಲಭ್ಯ ನೀಡಲಾಗಿದೆ.
Related Articles
Advertisement
ಪೋಕೋ ಎಂ3ಇದು 11 ಸಾವಿರ ಮತ್ತು 12 ಸಾವಿರ ದರದಲ್ಲಿ ಎರಡು ಆವೃತ್ತಿಗಳನ್ನು ಹೊಂದಿದೆ. ಈ ಹಿಂದಿನ ಪೋಕೋ ಎಂ2 ಮಾಡೆಲ್ ಬೆಸ್ಟ್ ಸೆಲ್ಲರ್ ಆಗಿದ್ದು, ಅದಕ್ಕಿಂತ ಸುಧಾರಿತ ಮಾದರಿಯಾಗಿ ಎಂ3 ಅನ್ನು ಹೊರತರಲಾಗಿದೆ. ಪೋಕೋ ಎಂ3 6 ಜಿಬಿ ರ್ಯಾಮ್, ಹಿಂಬದಿಗೆ 48 ಮೆಗಾಪಿಕ್ಸಲ್ ತ್ರಿವಳಿ ಕ್ಯಾಮರಾ, ಸೆಲ್ಫಿಗೆ 8 ಮೆ.ಪಿ. ಕ್ಯಾಮರಾ, 6000 ಎಂಎಎಚ್ ಬ್ಯಾಟರಿ, ಫುಲ್ ಎಚ್‌ಡಿ ಪ್ಲಸ್ ಡಿಸ್‌ಪ್ಲೇ, ಕ್ವಾಲ್ಕಾಂ ಸ್ನಾಪ್ ಡ್ರಾಗನ್ 662 ಪ್ರೊಸೆಸರ್ ಹೊಂದಿದೆ. ಈ ಮೊಬೈಲ್ 6.53 ಫುಲ್ ಎಚ್ ಡಿ ಪ್ಲಸ್
ಡಿಸ್‌ಪ್ಲೇ ಹೊಂದಿದ್ದು, ಪರದೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್‌ನ ರಕ್ಷಣೆ ಹೊಂದಿದೆ. ಅಲ್ಲದೇ ಬಾಕ್ಸ್ ನೊಂದಿಗೆ ಬ್ಯಾಕ್ ಕವರ್ ಮತ್ತು ಪರದೆ ರಕ್ಷಕ ಫಿಲ್ಮ್ ಸಹ ಇದೆ. ಮೊಬೈಲ್‌ನಲ್ಲಿ ಹೆಚ್ಚಿನ ದರದ ಮೊಬೈಲ್‌ಗಳಲ್ಲಿ ಮಾತ್ರ ಇರುವ ಸ್ಟೀರಿಯೋ ಸೌಂಡ್ ಸೌಲಭ್ಯ ಸಹ ನೀಡಲಾಗಿದೆ. 6000 ಎಂಎಎಚ್ ಬ್ಯಾಟರಿಗೆ 18 ವ್ಯಾಟ್ಸ್ ವೇಗದ ಚಾರ್ಜರ್ ಸಹ ನೀಡಲಾಗಿದೆ. ಕಪ್ಪು, ನೀಲಿ ಮತ್ತು ಹಳದಿ ಬಣ್ಣದಲ್ಲಿ ದೊರೆಯಲಿದೆ. ಫೆ. 9ರಿಂದ ಫ್ಲಿಪ್‌ಕಾರ್ಟ್ ನಲ್ಲಿ ಮಾತ್ರ ಲಭ್ಯ. 6 ಜಿಬಿ ರ್ಯಾಮ್ 64 ಜಿಬಿ ಆಂತರಿಕ ಸಂಗ್ರಹ:
11,000 ರೂ. 6 ಜಿಬಿ ರ್ಯಾಮ್, 128 ಜಿಬಿ ಆಂತರಿಕ ಸಂಗ್ರಹ: 12,000 ರೂ. ಇದಲ್ಲದೇ ಐಸಿಐಸಿಐ ಕ್ರೆಡಿಟ್ ಮೂಲಕ ಕೊಂಡರೆ ಹೆಚ್ಚುವರಿಯಾಗಿ 1000 ರೂ. ರಿಯಾಯಿತಿ ಸಹ ಲಭ್ಯ.
ಕೆ.ಎಸ್.ಬನಶಂಕರ ಆರಾಧ್ಯ