ಕೋವಿಡ್ 19 ವೈರಸ್ ಸೋಂಕಿನ ಪ್ರಭಾವ ಹೇಗಿದೆ ಎಂದರೆ ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿರುವ ಅತ್ಯಂತ ದೊಡ್ಡ ಆಸ್ಪತ್ರೆ ಲಾ ಪಾಸಾದಲ್ಲಿ ಶವಗಳನ್ನು ಸುರಕ್ಷಿತವಾಗಿ ಇರಿಸಲು ಅಗತ್ಯವಾಗಿರುವ ಮಂಜುಗಡ್ಡೆಯ ಕೊರತೆ ಉಂಟಾಗಿದೆ.
ಏಕೆಂದರೆ ಹೆಚ್ಚಿನ ಪ್ರಮಾಣದಲ್ಲಿ ಜನರು ಸಾವನ್ನಪ್ಪುತ್ತಿರುವುದರಿಂದ ಸದ್ಯಕ್ಕೆ ಶವ ಸಂಸ್ಕಾರದ ಮೇಲೆ ಕೂಡ ಸರ್ಕಾರ ನಿಷೇಧ ಹೇರಬೇಕಾಗಿರುವ ಅನಿವಾರ್ಯ ಸ್ಥಿತಿ ಉಂಟಾಗಿದೆ.
ಸರ್ಕಾರವು, ಹಿರಿಯರು, ಕಿರಿಯರಿಗಾಗಿ ಬದುಕುವ ಕನಸ್ಸು ಬಿಟ್ಟುಬಿಡಬೇಕು ಅನ್ನೋ ಹೊಸ ಕಠಿಣ ಕಾನೂನು ಮಾಡಿದ ಮೇಲೆಯೂ ಐಸಿಯೂನಲ್ಲಿ ರೋಗಿಗಳು ಕಿಕ್ಕಿರಿದು ಹೋಗುತ್ತಿದ್ದಾರೆ.
ಸ್ಪೇನ್‌ಗೆ ಚೀನಾ: ಕೋವಿಡ್ 19 ವೈರಸ್ ಮೂಲಕ ಜಗತ್ತನ್ನು ಸಾವಿನ ಬಾಗಿಲಲ್ಲಿ ನಿಲ್ಲಿಸಿರುವ ಚೀನಾ, ಸ್ಪೇನ್‌ಗೆ ಮಹಾನ್ ಟೋಪಿ ಹಾಕಿದೆ. 423 ಮಿಲಿಯನ್ ಡಾಲರ್ ಪಡೆದು ಸ್ಪೇನ್‌ಗೆ 55 ಲಕ್ಷ ಕಳಪೆ ಟೆಸ್ಟಿಂಗ್ ಕಿಟ್‌ಗಳನ್ನು ಮಾರಿರುವುದು ಇದೀಗ ಬಹಿರಂಗವಾಗಿದೆ.
ಜತೆಗೆ ವೆಂಟಿಲೇಟರ್ಸ್, ಕೃತಕ ಉಸಿರಾಟದ ಡಿವೈಸ್‌ಗಳು, ಸ್ಯಾನಿಟೈಸರ್ ಇತ್ಯಾದಿಗಳನ್ನು ಪಡೆದಿದ್ದ ಸ್ಪೇನ್, ಇವೆಲ್ಲವನ್ನೂ ಮರಳಿಸಲು ನಿರ್ಧರಿಸಿದೆ.
ಟೆಸ್ಟಿಂಗ್ ಕಿಟ್‌ಗಳು ಪಾಸಿಟಿವ್ ಪ್ರಕರಣಗಳನ್ನೂ ತಪ್ಪುತಪ್ಪಾಗಿ ತೋರಿಸುತ್ತಿವೆ. 15 ನಿಮಿಷದೊಳಗೆ ವರದಿ ನೀಡಬೇಕಾದ ಡಿವೈಸ್‌ಗಳು ಬಳಕೆಗೆ ಯೋಗ್ಯವಾಗಿಲ್ಲ ಎಂದು ಸ್ಪ್ಯಾನಿಷ್ ಲ್ಯಾಬ್‌ಗಳು ದೂರುತ್ತಿವೆ.