Advertisement
ಕಾರಣ, ನಿಲ್ದಾಣ, ಜಾಲತಾಣಗಳಲ್ಲಿ ತಿಳಿಸಿದ ಸಮಯಕ್ಕೆ ಸರಿಯಾಗಿ ಬಸ್ ಬಂದದ್ದೇ ಇಲ್ಲ! ಪ್ರಯಾಣಿಕರನ್ನು ಈ ಕಿರಿಕಿರಿಯಿಂದ ಮುಕ್ತಗೊಳಿಸಿ, “ರಿಯಲ್ ಟೈಮ್’ ಸಾರಿಗೆ ಸೇವೆ ನೀಡಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮುಂದಾಗಿದೆ. ಬಸ್‌ಗಳ ಸಮಯ ಏರುಪೇರಾಗಲು ಕಾರಣ ಸಂಚಾರದಟ್ಟಣೆ. ಹೀಗಾಗಿ ಆಯಾ ಭಾಗಗಳ ಸಂಚಾರ ದಟ್ಟಣೆಗೆ ಅನುಗುಣವಾಗಿ ಆರಂಭದಲ್ಲಿ ಒಂದು ಸಾವಿರ ಶೆಡ್ನೂಲ್‌ಗಳನ್ನು (ಅನುಸೂಚಿ) ಪರಿಷ್ಕರಿಸಲು ಉದ್ದೇಶಿಸಿರುವ ಬಿಎಂಟಿಸಿ, ಈಗಾಗಲೇ ಪ್ರಾಯೋಗಿಕವಾಗಿ 175 ಪ್ರಮುಖ ಶೆಡ್ನೂಲ್‌ಗಳನ್ನು ಮರು ಸಂಯೋಜನೆ ಮಾಡಿದೆ. ಈ ಪ್ರಯೋಗ ಫಲ ನೀಡಿದ್ದು, ಶೇ.95ರಷ್ಟು ಬಸ್‌ಗಳು ನಿರೀಕ್ಷಿತ ಸಮಯಕ್ಕೆ ಆಗಮಿಸುತ್ತಿವೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಪೊನ್ನುರಾಜ್ ತಿಳಿಸಿದರು.
ಪ್ರಮುಖ ಶೆಡ್ನೂಲ್‌ಗಳನ್ನು ಗುರುತಿಸಿ, ವೇಳಾಪಟ್ಟಿ ಪರಿಷ್ಕರಿಸಲು ಉದ್ದೇಶಿಸಲಾಗಿದೆ. ಆ ಪೈಕಿ ಮೊದಲ ಹಂತದಲ್ಲಿ ಸಾವಿರ ಶೆಡ್ನೂಲ್‌ಗಳನ್ನು ಕೈಗೆತ್ತಿಕೊಂಡಿದ್ದು, ಎರಡು ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು. ಶಾಂತಿನಗರದ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಬುಧವಾರ ಸಂಸ್ಥೆ ಸಾಧನೆಗಳ ಕುರಿತು ಪ್ರಾತ್ಯಕ್ಷಿಕೆ ನೀಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚತುರ ಸಾರಿಗೆ ವ್ಯವಸ್ಥೆ (ಐಟಿಎಸ್) ನೆರವಿನಿಂದ “ಪೀಕ್ ಅವರ್’ ಮತ್ತು ಉಳಿದ ಅವಧಿಯಲ್ಲಿ ಬಸ್‌ಗಳು ಮಾರ್ಗ ಕ್ರಮಿಸಲು ತೆಗೆದುಕೊಳ್ಳುತ್ತಿರುವ ಸಮಯವನ್ನು ವಿಶ್ಲೇಷಣೆ ಮಾಡಿ, ಶೆಡ್ನೂಲ್‌ಗಳ ವೇಳೆಯನ್ನು ಪರಿಷ್ಕರಿಸಲಾಗಿದೆ. ಇದರಿಂದ ಪ್ರಯಾಣಿಕರಿಗೆ ಬಸ್‌ಗಳ ಆಗಮನ-ನಿರ್ಗಮನದ ನಿಖರ ಮಾಹಿತಿ ದೊರೆಯಲಿದ್ದು, ವಿನಾಕಾರಣ ಕಾಯುವುದು ತಪ್ಪಲಿದೆ. ಜತೆಗೆ ಸಮಯ ಪಾಲನೆ ಮಾಡಲು ಚಾಲಕರಿಗೂ ಅನುಕೂಲವಾಗುತ್ತದೆ ಎಂದರು.
Related Articles
Advertisement
ಇಂದಿನಿಂದ ಪಾಸು ವಿತರಣೆ ಕೊನೆಗೂ ನಗರ ವ್ಯಾಪ್ತಿಯ ವಿದ್ಯಾರ್ಥಿಗಳ ರಿಯಾಯ್ತಿ ದರದ ಪಾಸುಗಳ ವಿತರಣೆಗೆ ಮುಹೂರ್ತ ನಿಗದಿಯಾಗಿದ್ದು, ಗುರುವಾರದಿಂದ ಪಾಸು ವಿತರಣೆ ಪ್ರಕ್ರಿಯೆ ಆರಂಭಗೊಳ್ಳಲಿದೆ. 20 ಸಾವಿರ ಸ್ಮಾರ್ಟ್‌ಕಾರ್ಡ್ ಮಾದರಿ ಬಸ್ ಪಾಸ್‌ಗಳು ಸಿದ್ಧವಾಗಿವೆ. ಪಾಸುಗಳು ಅಂಚೆ ಮೂಲಕವೇ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತಲುಪಲಿದ್ದು, ಹಣ ಪಾವತಿಸಿ ಪಾಸು ಪಡೆಯಬಹುದು ಎಂದು ಪೊನ್ನುರಾಜ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪ್ರತಿ ವರ್ಷ ನಾಲ್ಕು ಲಕ್ಷ ವಿದ್ಯಾರ್ಥಿಗಳ ಪಾಸು ವಿತರಣೆಯಾಗಲಿದ್ದು, ಈ ಪೈಕಿ ಜುಲೈ ಅಂತ್ಯಕ್ಕೆ 1.20 ಲಕ್ಷ ಪಾಸುಗಳನ್ನು ವಿತರಿಸಲಾಗುತ್ತದೆ. ಇದರಲ್ಲಿ ಈವರೆಗೆ 50 ಸಾವಿರ ವಿದ್ಯಾರ್ಥಿಗಳು ಪಾಸಿಗಾಗಿ ಆನ್ ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದು, 20 ಸಾವಿರ ವಿದ್ಯಾರ್ಥಿಗಳಿಗೆ ಗುರುವಾರದಿಂದ ಪಾಸು ವಿತರಿಸಲಾಗುವುದು.
ಪಾಸ್ ಪಡೆಯುವುದು ತುಂಬಾ ಸುಲಭ ಬಿಎಂಟಿಸಿ ವೆಬ್‌ಸೈಟ್ “mybmtc.com’ ಅಥವಾ ಇ-ಗವರ್ನನ್ಸ್ ಆ್ಯಪ್‌ನಲ್ಲಿ “161′ ಡಯಲ್ ಮಾಡುವ ಮೂಲಕ ಮೊಬೈಲ್‌ನಲ್ಲೇ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ನಿಗಮದ ವೆಬ್‌ಸೈಟ್ ಪರದೆ ಮೇಲೆ ಸ್ಟುಡೆಂಟ್ ಪಾಸ್ ಆಯ್ಕೆ ಇರುತ್ತದೆ. ಅದನ್ನು ಆಯ್ಕೆ ಮಾಡಿ, ವಿದ್ಯಾರ್ಥಿಯ ಹಾಜರಾತಿ ಸಂಖ್ಯೆ (ಎನ್‌ರೋಲ್‌ಮೆಂಟ್ ಸಂಖ್ಯೆ) ಮತ್ತು ಹೆಸರು ನಮೂದಿಸಬೇಕು. ನಂತರ ಸಂಪೂರ್ಣ ಮಾಹಿತಿ ಬರುತ್ತದೆ. ಅಲ್ಲಿ ಪೋಷಕರ ಮೊಬೈಲ್ ಸಂಖ್ಯೆ ನೀಡಿದರೆ, ಆ ಸಂಖ್ಯೆಗೆ ಅರ್ಜಿ ಸಲ್ಲಿಕೆಯಾದ ಬಗ್ಗೆ ಸಂದೇಶ ಬರುತ್ತದೆ. ವಾರದಲ್ಲಿ ಆ ವಿದ್ಯಾರ್ಥಿಗೆ ಪಾಸು ಕೂಡ ಬರುತ್ತದೆ. ಪ್ರಸ್ತುತ ಪಿಯುಸಿವರೆಗಿನ ವಿದ್ಯಾರ್ಥಿಗಳಿಗೆ ಈ ಸೇವೆ ಲಭ್ಯವಿದೆ.