Advertisement

ಮತ್ತೆ ತೆಲುಗಿನತ್ತ ಉಪ್ಪಿ

12:27 PM Feb 21, 2021 | Team Udayavani |

ನಟ ಉಪೇಂದ್ರ ತೆಲುಗು ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಕೇಳಿಬರುತ್ತಲೇ ಇತ್ತು. ಆದರೆ, ಯಾವುದೂ ಅಂತಿಮವಾಗಿ ರಲಿಲ್ಲ. ಈಗ ಉಪೇಂದ್ರ ತೆಲುಗು ಚಿತ್ರ “ಘನಿ’ಯಲ್ಲಿ ನಟಿಸುತ್ತಿರೋದು ಅಧಿಕೃತವಾಗಿದೆ.

Advertisement

ವರಣ್‌ ತೇಜ್‌ ನಾಯಕರಾಗಿರುವ “ಘನಿ’ ಚಿತ್ರದಲ್ಲಿ ಉಪೇಂದ್ರ ನಟಿಸುತ್ತಿದ್ದು, ಇತ್ತೀಚೆಗೆ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಕಿರಣ್‌ ನಿರ್ದೇಶನದ ಈ ಚಿತ್ರದಲ್ಲಿ ಉಪೇಂದ್ರ ಜೊತೆಗೆ ಸುನೀಲ್‌ ಶೆಟ್ಟಿ, ಜಗಪತಿ ಬಾಬು ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಇನ್ನು, ಈ ಚಿತ್ರದಲ್ಲಿ ಉಪೇಂದ್ರ ಅವರ ಪಾತ್ರ ಯಾವ ತರಹದ್ದು ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

ಇದನ್ನೂ ಓದಿ : ಜೂನ್ 18 ಕ್ಕೆ ಅಮಿತಾಭ್ ನಟನೆಯ “ಜುಂಡ್ ” ದೇಶಾದ್ಯಂತ ರಿಲೀಸ್

ಇನ್ನು, ಉಪೇಂದ್ರ ಅಭಿನಯದ “ಕಬ್ಜ’ ಚಿತ್ರ ಕೂಡಾ ಚಿತ್ರೀಕರಣಕ್ಕೆ ಅಣಿಯಾಗುತ್ತಿದೆ. ಈಗಾಗಲೇ ಚಿತ್ರೀಕರಣಕ್ಕೆ ಬೇಕಾದ ಸೆಟ್‌ ಕೆಲಸಗಳು ಜೋರಾಗಿ ನಡೆಯುತ್ತಿದ್ದು, ಶೀಘ್ರದಲ್ಲೇ “ಕಬ್ಜ’ ಕೂಡಾ ಶುರುವಾಗಲಿದೆ. ಈ ಚಿತ್ರವನ್ನು ಆರ್‌.ಚಂದ್ರು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next