Advertisement

ವೆಬ್​ ಸರಣಿಗೆ ಎಂಟ್ರಿ ಕೊಟ್ಟ ರಿಯಲ್ ಸ್ಟಾರ್

04:49 PM Aug 13, 2018 | |

ಬಾಲಿವುಡ್‍ನಲ್ಲಿ ಪ್ರಖ್ಯಾತವಾಗಿದ್ದ ವೆಬ್​ ಸರಣಿಗಳು ಇದೀಗ ಸ್ಯಾಂಡಲ್‍ವುಡ್‍ನಲ್ಲೂ ಸದ್ದು ಮಾಡುತ್ತಿದ್ದು, ಈ ಹಿಂದೆ “ಲೂಸ್ ಕನೆಕ್ಷನ್’ ವೆಬ್ ಸರಣಿಯಲ್ಲಿ ಸುನೀಲ್ ರಾವ್ ಕಾಣಿಸಿಕೊಂಡಿದ್ದರು. ಇತ್ತೀಚೆಗಷ್ಟೇ “ಹೇಟ್ ಯೂ ರೋಮಿಯೋ’ ವೆಬ್ ಸರಣಿಯನ್ನು ಆರಂಭಿಸಿರುವುದಾಗಿ ಹೇಳಿದ್ದ ಶಿವಣ್ಣ ಪುತ್ರಿ ನಿವೇದಿತಾ ಶಿವರಾಜಕುಮಾರ್ ಸರಣಿಯ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದರು.

Advertisement

ಇದೀಗ ವಿನಾಯಕ್​ ಜೋಷಿ ಸರದಿ. ಹೌದು ವಿನಾಯಕ್​ “ಜೋಷಿಲೆ’ ಎಂಬ ವೆಬ್​ ಸರಣಿಯನ್ನು ಆರಂಭಿಸಿದ್ದು, ಈಗಾಗಲೇ ಸರಣಿಯ ಟೀಸರ್ ನ್ನು ಯೂಟ್ಯೂಬ್‍ನಲ್ಲಿ ಬಿಡುಗಡೆ ಮಾಡಿದ್ದಾರೆ. ಅಲ್ಲದೇ ಆ ಸರಣಿಯಲ್ಲಿ ಅವರೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮುಖ್ಯವಾಗಿ ಈ ಸರಣಿಯಲ್ಲಿ ಸದಾ ವಿಭಿನ್ನ ಸಿನಿಮಾಗಳನ್ನು ಮಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸುವ ರಿಯಲ್​ ಸ್ಟಾರ್​ ಉಪೇಂದ್ರ ಅವರು ಮೊದಲ ಬಾರಿಗೆ ಕನ್ನಡದ ವೆಬ್​ ಸರಣಿಯೊಂದರಲ್ಲಿ ಅಭಿನಯಿಸುತ್ತಿದ್ದಾರೆ.

ಇನ್ನು ಈ ವೆಬ್ ಸರಣಿಯನ್ನು ವಿನಾಯಕ್​ ಜೋಷಿ ನಿರ್ದೇಶಿಸಿ, ನಿರ್ಮಿಸುತ್ತಿದ್ದು, ಉಪ್ಪಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವೆಬ್​ ಸರಣಿ ಗಣೇಶನ ಹಬ್ಬಕ್ಕೆ ಗಿಫ್ಟ್ ಆಗಿ ಸಿಗಲಿದೆ. ಅಲ್ಲದೇ ಇದು ಯೂಟ್ಯೂಬ್​ನಲ್ಲಿ ಪ್ರಸಾರಗೊಳ್ಳಲಿದ್ದು, ಇದನ್ನು ಜನರು ಉಚಿತವಾಗಿ ಸಿನಿಪ್ರಿಯರು ವೀಕ್ಷಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next