Advertisement
ದೇಶದ ಚರ್ಯೆಯನ್ನೇ ಬದಲಿಸಬಲ್ಲ ಎರಡು ಪ್ರಮುಖ ಕ್ಷೇತ್ರಗಳು ಅಂದರೆ ರಿಯಲ್ ಎಸ್ಟೇಟ್ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಕ್ಷೇತ್ರಗಳು. ಉತ್ತಮ ಆದಾಯ ಪಡೆಯುವುದರ ಜೊತೆಗೆ, ನೂರಾರು ಜನರ ಕನಸುಗಳನ್ನು ಈಡೇರಿಸುವಲ್ಲಿ, ದೇಶದ ಅಭಿವೃದ್ಧಿಗೆ ಕೈ ಜೋಡಿಸುವುದರಲ್ಲಿ ಇವುಗಳ ಪಾತ್ರ ಹಿರಿದು. ಅನೇಕ ಡಿಗ್ರಿ, ಡಬ್ಬಲ್ ಡಿಗ್ರಿ ಪೂರೈಸಿದವರು ಇಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಅಷ್ಟೊಂದು ಓದದವರೂ ಕೂಡ ಈ ಕ್ಷೇತ್ರ ನಂಬಿ ಬದುಕಬಹುದು. ಮೂಲ ಸೌಕರ್ಯ ಅಭಿವೃದ್ಧಿ ಮತ್ತು ರಿಯಲ್ ಎಸ್ಟೇಟ್‌ನಲ್ಲಿ ನಿಮ್ಮ ಕೆರಿಯರ್ ಬೆಳೆಸಲು ಒಬ್ಬ ಸ್ವತಂತ್ರ ಉದ್ದಿಮೆದಾರನಿಗೆ ಬೇಕಾದ ಕೌಶಲಗಳು ನಿಮ್ಮಲ್ಲಿ ಇರಬೇಕು.
Related Articles
Advertisement
ಪದವಿ ಮುಖ್ಯವಲ್ಲ: ದಕ್ಕೆ ಪದವಿಯಷ್ಟೇ ಮುಖ್ಯವಲ್ಲ. ಅನುಭವ ಕೂಡ ಬೇಕಾಗುತ್ತದೆ. ಶೋಭಾ, ಹೀರಾನಂದಾನಿಯಂಥ ದೊಡ್ಡ ದೊಡ್ಡ ಕಂಪೆನಿಗಳು ಎಂಬಿಎ ಪದವಿ ಪಡೆದವರನ್ನು ಎಕ್ಸಿಕ್ಯುಟೀವ್, ಸೇಲ್ಸ್ ಮ್ಯಾನೇಜರ್ ಹುದ್ದೆಗೆ ಆಯ್ಕೆ ಮಾಡುವುದುಂಟು. ಕಟ್ಟಡ ಮತ್ತು ಕಾಮಗಾರಿಗಳ ಸ್ಥೂಲ ಪರಿಚಯ, ಕೆಲಸ ಮಾಡುವ ಕ್ಷೇತ್ರದ ವಿವಿಧ ಬಡಾವಣೆಗಳಲ್ಲಿನ ನಿವೇಶನ, ಕಟ್ಟಡಗಳ ಮಾರುಕಟ್ಟೆ ಮೌಲ್ಯ,
ವಿವಿಧ ಕನ್‌ಸ್ಟ್ರಕ್ಷನ್ ಕಂಪನಿಗಳ ಸ್ಟಾಕ್ ಮತ್ತು ಶೇರ್ ಮೌಲ್ಯ, ಮಾರ್ಕೆಟಿಂಗ್, ಸೆಲ್ಲಿಂಗ್, ಮೌಲ್ಯ, ನಿಷ್ಕಷೆಯ ಮೂಲಕ ಗ್ರಾಹಕರನ್ನು ಸೆಳೆಯುವ ತಂತ್ರಗಾರಿಕೆ ಇರಬೇಕು. ಗ್ರಾಹಕರ ಪಟ್ಟಿ, ಅವರ ಮನವೊಲಿಸುವ ಚಾಕಚಕ್ಯತೆ ಇದ್ದರೆ ಖಂಡಿತ ಈ ಕ್ಷೇತ್ರದಲ್ಲಿ ಯಶಸ್ವಿಯಾಗಬಹುದು. ಅಂಬುಜಾ ರಿಯಾಲಿಟಿ ಗ್ರೂಪ್, ಡಿಎಲ್‌ಫ್ ಬಿಲ್ಡಿಂಗ್, ಸನ್ ಸಿಟಿ ಪ್ರಾಜಕ್ಟ್, ಮ್ಯಾಜಿಕ್‌ಬ್ರಿಕ್ಸ್, ಮಿಥಲ್ ಬಿಲ್ಡರ್ಸ್, ಕೆ. ರಹೇಜ ಕನ್‌ಸ್ಟ್ರಕ್ಷನ್‌ನಂಥ ಕಂಪನಿಗಳಲ್ಲಿ ಉದ್ಯೋಗ ಗಿಟ್ಟಿಸಬಹುದು.
ಸ್ವಂತ ಉದ್ದಿಮೆಯಾಗಿ ಸೂಕ್ತವೆ?: ಸವಾಲುಗಳನ್ನು ಎದುರಿಸುವ ಹುಮ್ಮಸ್ಸು, ಅಪಾರ ಜನಸಂಪರ್ಕ, ಶ್ರಮಪಡುವ ಮನಸ್ಸು, ತಂಡವನ್ನು ಮುನ್ನಡೆಸುವ ಧೈರ್ಯ ನಿಮಗಿದ್ದರೆ, ಇದು ನಿಮಗೆ ಹೇಳಿ ಮಾಡಿಸಿದ ಕ್ಷೇತ್ರ. ಮೊದಲಿಗೆ ಆಸ್ತಿ ಪತ್ರಗಳನ್ನು ಪರೀಕ್ಷಿಸುವ, ಚೌಕಾಸಿಮಾಡಿಕೊಳ್ಳುವ, ತಗಾದೆ ಇರುವ ಭೂಮಿಯನ್ನೂ ಕೊಂಡು ಬುದ್ಧಿವಂತಿಕೆಯಿಂದ ಅದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಿ ಗಟ್ಟಿ ಮಾಡಿಕೊಳ್ಳುವ ಚಾಕಚಕ್ಯತೆ ಇರಬೇಕು.
ಆ ಬಳಿಕ ಈ ಆಸ್ತಿಗಳನ್ನು ಅಭಿವೃದ್ಧಿಪಡಿಸಿ ಅದನ್ನು ಗ್ರಾಹಕರಿಗೆ ಮಾರುವ ತಂತ್ರವೂ ತಿಳಿದಿರಬೇಕು. ಇದು ಆರಂಭದಲ್ಲಿ ಕಷ್ಟ ಎನಿಸಿದರೂ ಒಮ್ಮೆ ಕೈ ಕುದುರಿದರೆ ಲಕ್ಷ, ಕೋಟಿಗಳಲ್ಲಿ ಹಣ ಗಳಿಕೆ ಆಗುವುದು. ರಿಯಲ್ ಎಸ್ಟೇಟ್ ಉದ್ಯಮ ಬಯಸುವುದು ಸ್ಮಾರ್ಟ್ ಆಗಿರುವವರನ್ನು, ಒಳ್ಳೆಯ ಸಂವಹನ ಕೌಶಲ, ಪ್ರಾಜೆಕ್ಟ್ಗಳ ಪೂರ್ಣ ಮಾಹಿತಿ, ನಿಮ್ಮದೇ ಆದ ಕಾಂಟಾಕ್ಟ್ ಲಿಸ್ಟ್‌ಗಳಿಂದ ಸಂದರ್ಶಕರನ್ನು ನೀವು ಮೆಚ್ಚಿಸಬಹುದು. ಕೆಲಸ ಗಿಟ್ಟಿಸಬಹುದು. ದೇಶ ಕಟ್ಟುವುದರೊಂದಿಗೇ ದುಡ್ಡು ಮಾಡುವ ಉದ್ಯಮ ಇದು.
* ವಿ. ರಘು, ಪ್ರಾಂಶುಪಾಲರು