Advertisement

ರಿಯಲ್‌ ಎಸ್ಟೇಟ್‌ ಕ್ಷೇತ್ರ ನಿರಾಳ

07:23 AM May 14, 2020 | Lakshmi GovindaRaj |

ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿ ಕಾರದಡಿ (ರೇರಾ) ಯೋಜನೆಯಡಿ ಬರುವಂಥ ನಿರ್ಮಾಣ ಕಾಮಗಾರಿಗಳು ಹಾಗೂ ಇತರೆ ಪ್ರಾಜೆಕ್ಟ್ಗಳ ನೋಂದಣಿ ಹಾಗೂ ಕಾಮಗಾರಿ ಪೂರ್ಣಗೊಳಿಸುವ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಇದರಿಂದಾಗಿ ರಿಯಲ್‌ ಎಸ್ಟೇಟ್‌ ಕ್ಷೇತ್ರ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಲಾಕ್‌ ಡೌನ್‌ ನಿಂದಾಗಿ ನಿರ್ಮಾಣ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿದ್ದು, ಹಣದ ಹರಿವು ಕೂಡ ನಿಂತುಹೋಗಿದೆ.

Advertisement

ಹೀಗಾಗಿ ಸಂಕಷ್ಟದಲ್ಲಿರುವ  ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ನೆರವಾಗುವ ಸಲುವಾಗಿ ಸರ್ಕಾರವು, ಕೆಲವೊಂದು ನಿಯಮಗಳನ್ನು ಸಡಿಲಿಕೆ ಮಾಡಿದೆ. ಅದರಂತೆ, 2020ರ ಮಾ.25 ರಂದು ಅಥವಾ ನಂತರದಲ್ಲಿ ಪೂರ್ಣಗೊಳಿಸಬೇಕಾಗಿದ್ದ ಎಲ್ಲ ನೋಂದಾಯಿತ  ರಿಯಲ್‌ ಎಸ್ಟೇಟ್‌ ಯೋಜನೆಗಳನ್ನು ಹಾಗೂ ನೋಂದಣಿ ಪ್ರಕ್ರಿಯೆಗಳನ್ನು 6 ತಿಂಗಳವರೆಗೆ ವಿಸ್ತರಿಸಲಾಗಿದೆ. ಜತೆಗೆ ಪರಿಷ್ಕೃತ ದಿನಾಂಕವನ್ನು ನಮೂದಿಸಿ, ಹೊಸದಾಗಿ ಪ್ರಾಜೆಕ್ಟ್ ನೋಂದಣಿ ಪ್ರಮಾಣಪತ್ರವನ್ನು ವಿತರಣೆ ಮಾಡುವಂತೆಯೂ ಸೂಚಿಸಲಾಗಿದೆ.

ಕೇವಲ ರಿಯಲ್‌ ಎಸ್ಟೇಟ್‌  ಗೆ ಮಾತ್ರವಲ್ಲದೆ, ಇತರೆ ಗುತ್ತಿಗೆದಾರರಿಗೂ ಅನುಕೂಲ ಕಲ್ಪಿಸಲಾಗಿದ್ದು, ರೈಲ್ವೆ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಸಿಪಿಡಬ್ಲ್ಯುಡಿ ಯೋಜನೆಗಳನ್ನು ಕೂಡ 6  ತಿಂಗಳವರೆಗೆ ವಿಸ್ತರಿಸುವಂತೆ ಸೂಚಿಸಲಾಗಿದೆ. ಹಾಗಾಗಿ, ಗಡುವಿನೊಳಗಾಗಿ ಕಾಮಗಾರಿ ಪೂರ್ಣಗೊಳಿಸಿಲ್ಲ ಎಂಬ ಕಾರಣಕ್ಕೆ ದಂಡ ತೆರಬೇಕಾದ ಭೀತಿಯಿಂದ ಗುತ್ತಿಗೆದಾರರು ಪಾರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next