Advertisement

ಹೂಡಿಕೆಗೆ ರಿಯಲ್‌ ಎಸ್ಟೇಟ್‌ ಸೂಕ್ತ: ಡಾ|ಗಣೇಶ್‌ ಪೈ

07:10 AM Aug 28, 2017 | |

ಮಂಗಳೂರು: ಪ್ರಸ್ತುತ ಕಾಲಘಟ್ಟದಲ್ಲಿ ಹೂಡಿಕೆಗೆ ರಿಯಲ್‌ ಎಸ್ಟೇಟ್‌ ಕ್ಷೇತ್ರ ಅತ್ಯಂತ ಸೂಕ್ತ ಹಾಗೂ ಸುರಕ್ಷಿತವಾಗಿದೆ ಎಂದು ನಗರದ ಪ್ರಖ್ಯಾತ ಚರ್ಮರೋಗ ತಜ್ಞ ಡಾ| ಗಣೇಶ್‌ ಪೈ ಅವರು ಅಭಿಪ್ರಾಯಪಟ್ಟರು.

Advertisement

ಇನ್‌ಲ್ಯಾಂಡ್‌ಬಿಲ್ಡರ್ ಸಂಸ್ಥೆಯ ವತಿಯಿಂದ ನಗರದ ನವಭಾರತ ವೃತ್ತದ ಬಳಿ ಇರುವ “ಇನ್‌ಲ್ಯಾಂಡ್‌ ಓರ್ನೆಟ್‌’ನ ಇನ್‌ಲ್ಯಾಂಡ್‌ ಸೆನೆಟ್‌ ಹಾಲ್‌ನಲ್ಲಿ ರವಿವಾರ ಆಯೋಜಿಸಿದ್ದ “ವೈದ್ಯರಿಗೆ ಹೂಡಿಕೆ ಅವಕಾಶಗಳು’ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಸೂಕ್ತ ಪ್ರತಿಫಲ: ಇನ್‌ಲ್ಯಾಂಡ್‌ ಗ್ರೂಪ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಿರಾಜ್‌ ಅಹಮ್ಮದ್‌ ಅವರು ಮಾತನಾಡಿ, ವೈದ್ಯರಿಗೆ ಕಾರ್ಯದ ಒತ್ತಡದಿಂದಾಗಿ ಭವಿಷ್ಯದ ಯೋಜನೆಗಳನ್ನು ರೂಪಿ ಸಲು ಕಡಿಮೆ ಸಮಯ ಸಿಗುತ್ತದೆ. ಇದನ್ನು ಮನಗಂಡು ಇನ್‌ಲ್ಯಾಂಡ್‌ ಬಿಲ್ಡರ್ ವೈದ್ಯರಿಗೆ ಹೂಡಿಕೆ ಅವಕಾಶಬಗ್ಗೆ ವಿಚಾರಸಂಕಿರಣ ಹಮ್ಮಿಕೊಂಡಿದೆ ಎಂದರು.

ಸಂಸ್ಥೆಯು ಸದ್ಯದಲ್ಲೇ ಬಿಜೈಯಲ್ಲಿ ವೈದ್ಯರಿಗೆ ಅನುಕೂಲವಾಗುವ ಡಯಾಗ್ನೊಸ್ಟಿಕ್‌ ಸೆಂಟರ್‌ ಕಟ್ಟಡ ನಿರ್ಮಾಣ ಮಾಡಲಿದೆ ಎಂದು ತಿಳಿಸಿದರು.

ಗರಿಷ್ಠ ಪ್ರತಿಫಲ: ಸಂಸ್ಥೆಯ ಮಾರುಕಟ್ಟೆ ಹಾಗೂ ಮಾರಾಟ ವಿಭಾಗದ ಪ್ರಬಂಧಕ ಉಲ್ಲಾಸ್‌ ಕದ್ರಿ ಅವರು ಮಾತನಾಡಿ, ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ಹೂಡಿಕೆ ಕನಿಷ್ಠ ರಿಸ್ಕ್ನಲ್ಲಿ ಗರಿಷ್ಠ ಪ್ರತಿಫಲ ನೀಡುತ್ತದೆ. ಇನ್‌ಲಾÂಂಡ್‌ ಬಿಲ್ಡರ್ ಪ್ರತಿಯೋರ್ವರ ಬಜೆಟ್‌ಗಳಿಗೆ ಹೊಂದಿಕೆಯಾಗುವ ಯೋಜನೆಗಳನ್ನು ಬೆಂಗಳೂರು, ಮಂಗಳೂರು, ಪುತ್ತೂರು ಹಾಗೂ ಉಳ್ಳಾಲದಲ್ಲಿ ಹೊಂದಿದ್ದು ವಾಸದ ಮನೆ, ಹಾಲಿಡೇ ಹೋಮ್‌, ಬಾಡಿಗೆ ಮನೆಗಳ ಮೂಲಕ ಆದಾಯ ಗಳಿಕೆ ಮುಂತಾದುವುಗಳು ಸೇರಿದಂತೆ ಪರಿಪಕ್ವ ಹೂಡಿಕೆ ಪರಿಹಾರಗಳನ್ನು ಒದಗಿಸುತ್ತದೆ ಎಂದರು.

Advertisement

ಸಿಂಡಿಕೇಟ್‌ ಬ್ಯಾಂಕಿನ ಅಜಯ್‌ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕಿನ ರಾಘವೇಂದ್ರ ಶೇಟ್‌ ಅವರು ಮನೆಗಳು ಹಾಗೂ ವಾಣಿಜ್ಯ ಮಳಿಗೆಗಳ ಖರೀದಿಗೆ ಸೌಲ ಸೌಲಭ್ಯಗಳ ಬಗ್ಗೆ ವಿವರಿಸಿದರು. ಇನ್‌ಲಾÂಂಡ್‌ ಬಿಲ್ಡರ್ ಪ್ರಬಂಧಕ ನಾಗರಾಜ್‌ ಸ್ವಾಗತಿಸಿದರು. ದೀಪಾ ವಂದಿಸಿದರು. ನಂದಿತಾ ನಿರ್ವಹಿಸಿದರು.

ಇನ್‌ಲ್ಯಾಂಡ್‌ನ‌ 
ವಿಶ್ವಾಸಾರ್ಹ ಪರಂಪರೆ

ಇನ್‌ಲ್ಯಾಂಡ್‌ ಬಿಲ್ಡರ್ ಸಂಸ್ಥೆ ಕಳೆದ 3 ದಶಕಗಳಿಂದ ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಚಿರಪರಿಚಿತವಾಗಿದೆ. ಸುಂದರ, ಆಕರ್ಷಕ ಕಲಾತ್ಮಕ ವಿನ್ಯಾಸಗಳ ಗುಣಮಟ್ಟದ ವಸತಿ ಸಮುಚ್ಚಯ ಹಾಗೂ ವಾಣಿಜ್ಯ ಸಂಕೀರ್ಣಗಳನ್ನು ಮಂಗಳೂರು ನಗರಕ್ಕೆ ನೀಡಿದ್ದು ತನ್ನ ಕಾರ್ಯಕ್ಷೇತ್ರವನ್ನು ಬೆಂಗಳೂರಿಗೂ ವಿಸ್ತರಿಸಿದೆ. ಹೂಡಿಕೆದಾರರ ಹಿತವನ್ನು ಕಾಯ್ದುಕೊಳ್ಳುತ್ತಾ ವಿಶ್ವಾಸಾರ್ಹ ಸಂಸ್ಥೆಯಾಗಿ ಗುರುತಿಸಿಕೊಂಡಿದೆ ಎಂದು ಡಾ| ಗಣೇಶ್‌ ಪೈ ಅವರು ಶ್ಲಾಘಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next