Advertisement

ಹಿಜಾಬ್- ಕೇಸರಿ ವಿವಾದ ಬಗೆಹರಿಸಲು ಮಧ್ಯಸ್ಥಿಕೆ ವಹಿಸಲು ಸಿದ್ದ: ಬಸವರಾಜ ಹೊರಟ್ಟಿ

02:30 PM Feb 11, 2022 | Team Udayavani |

ಹುಬ್ಬಳ್ಳಿ: ಹಿಜಾಬ್- ಕೇಸರಿ ವಿವಾದ ರಾಜಕೀಯಮಯವಾಗಿದ್ದು, ಸಮಸ್ಯೆ ಬಗೆಹರಿಸಲು ಬೇಕಾದರೆ ನಾನು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರ ಈ ಸಮಸ್ಯೆ ಬಗೆಹರಿಸುವಲ್ಲಿ ಎಡವಿದೆ. ತನ್ನ ಜವಾಬ್ದಾರಿಯಿಂದ ವಿಮುಖವಾಗಿದೆ‌. ಪ್ರಕರಣದ ಬಗ್ಗೆ ಗಂಭೀರತೆ ಇಲ್ಲ. ಶಿಕ್ಷಣ ಸಚಿವರು ಆರಾಮವಾಗಿದ್ದರೆ ಹೇಗೆ? ಶಾಲಾ-ಕಾಲೇಜ್ ಗೆ ರಜೆ ಕೊಟ್ಟದ್ದು ಸರಿಯಲ್ಲ ಎಂದರು.

ಇದನ್ನೂ ಓದಿ:ಸಿದ್ದರಾಮಯ್ಯ ರಾಜಕೀಯ ಸ್ಕೋರ್ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ: ಶ್ರೀರಾಮುಲು

ರಾಮನ ಭಕ್ತರೇ ಇರಲಿ, ಹನುಮನ ಭಕ್ತರೇ ಇರಲಿ. ಮಕ್ಕಳ ಜೊತೆ ರಾಜಕೀಯ ಮಾಡಬಾರದು. ಕೆಲ ಸಂಘಟನೆಗಳು ರಾಜಕೀಯ ನಾಯಕರ ಸಂಬಂಧಿಗಳು ಇದ್ದಹಾಗೆ. ಕುಮ್ಮಕ್ಕು ಕೊಟ್ಟು ಈ ರೀತಿ ಮಾಡಲಾಗುತ್ತಿದೆ. ಸಮಾಜದಲ್ಲಿ ಜವಾಬ್ದಾರಿ ಇರುವವರು ನಮ್ಮ ಊರು,‌ ನಮ್ಮ ಜಿಲ್ಲೆ, ರಾಜ್ಯದ ಮಕ್ಕಳು ಎನ್ನುವುದನ್ನು ಮರೆತು, ಹೊಲಸು ರಾಜಕೀಯ ಮಾಡುತ್ತಿದ್ದಾರೆ. ಈ ರೀತಿ ಮಾಡುವುದು ಒಂದೇ ಕೊಲೆ ಮಾಡುವುದು ಎರಡೂ ಒಂದೇ. ನ್ಯಾಯಾಲಯದಿಂದ ಯಾವುದೇ ತೀರ್ಮಾನ ಆದರೂ ಮಕ್ಕಳಲ್ಲಿ ಈ ವಿಷ ಹಾಗೇ ಇರುತ್ತೆ. ನಾನೇ ಉಸ್ತುವಾರಿ ತೆಗೆದುಕೊಂಡು ಸಮಸ್ಯೆ ಬಗೆಹರಿಸು ಅಂದರೆ ಮಾಡುತ್ತೇನೆ. ಪೋಷಕರು, ಕಾಲೇಜು ಆಡಳಿತ ಮಂಡಳಿ, ಶಿಕ್ಷಣ ಸಚಿವರ ಜೊತೆ ಸಭೆ ಮಾಡುತ್ತೇನೆ. ಈ ಬಗ್ಗೆ ಸಿಎಂ ಅಂಥವರು ನನಗೆ ಹೇಳಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next