Advertisement

3ನೇ ಅಲೆ ಎದುರಿಸಲು ಸಜ್ಜಾಗಿದ್ದೇವೆ

01:40 AM May 20, 2021 | Team Udayavani |

ಬೆಂಗಳೂರು: “ಕೊರೊನಾ ನಿರ್ವಹಣೆಯಲ್ಲಿ ನಮ್ಮ ಮುಂದಿದ್ದ ದೊಡ್ಡ ಸವಾಲು ಸೀÌಕರಿಸಿ ಲೋಪ ದೋಷ ಸರಿಪಡಿಸುವ ಪ್ರಾಮಾಣಿಕ ಪ್ರಯತ್ನದ ಮೂಲಕ ಸೋಂಕಿತರಿಗೆ ವ್ಯವಸ್ಥಿತ ಚಿಕಿತ್ಸೆ ಸಿಗುವ ಹಂತಕ್ಕೆ ಬಂದಿದ್ದೇವೆ. 3ನೇ ಅಲೆ ಎದುರಿಸಲು ಸಜ್ಜಾಗಿದ್ದೇವೆ’

Advertisement

ಕೊರೊನಾ ಕಾರ್ಯಪಡೆ ಅಧ್ಯಕ್ಷರೂ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ| ಸಿ.ಎನ್‌. ಅಶ್ವತ್ಥ ನಾರಾಯಣ ಅವರ ಮಾತುಗಳಿವು.

– ಕಾರ್ಯಪಡೆ ಅಧ್ಯಕ್ಷರ ಹೊಣೆಗಾರಿಕೆ ಹೇಗೆ ನಿಭಾಯಿಸಿದೀªರಿ?
ಹಾಸಿಗೆ ವ್ಯವಸ್ಥೆ, ಆಕ್ಸಿಜನ್‌, ರೆಮಿಡಿಸಿವಿರ್‌ ಚುಚ್ಚುಮದ್ದು, ವಾರ್‌ ರೂಂ ಹೀಗೆ ಪ್ರತೀ ಹಂತದಲ್ಲಿ ಇದ್ದ ಲೋಪ ದೋಷ ಪತ್ತೆ ಹಚ್ಚಿ ಅದನ್ನು ಸರಿಪಡಿ ಸಲು ಪ್ರಯತ್ನಿಸ ಲಾಗಿದೆ. ಈಗ ಸುಧಾರಣೆ ಹಂತ ತಲುಪಲಾಗಿದೆ.

– ಈಗ ಸಂಪೂರ್ಣ ಪರಿಸ್ಥಿತಿ ಸುಧಾರಣೆಯಾಗಿದೆಯಾ?
ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ ಶೇ.75 ರಿಂದ 80ರಷ್ಟು ಸಮಸ್ಯೆ ಬಗೆಹರಿದಿದೆ. ಟ್ರಯಾಜ್‌ ಸೆಂಟರ್‌ಗೆ ಮೊದಲು ಸೋಂಕಿತರು ಬಂದು ಅಲ್ಲಿ ವೈದ್ಯರು ಪರೀಕ್ಷೆ ನಡೆಸಿ ರೋಗಿಗಳ ಅಗತ್ಯ ಮನಗಂಡು ಅನಂತರ ಸ್ಥಳಾಂತರಿ ಸುವ ಕೆಲಸ ಮಾಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ಹಾಗೂ ಪ್ರತೀ ಪ್ರಾಥಮಿಕ ಆರೋಗ್ಯ ಕೇಂದ್ರದ ಹಂತದಲ್ಲಿ ಕಾರ್ಯಪಡೆ ರಚನೆಗೆ ತೀರ್ಮಾನಿಸ ಲಾಗಿದೆ. 20 ಸಾವಿರ ಹೆಚ್ಚುವರಿ ಐಸಿಯು ಮತ್ತು ಆಕ್ಸಿಜನ್‌ ಹಾಸಿಗೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.

– ರೆಮಿಡಿಸಿವಿರ್‌, ಆಕ್ಸಿಜನ್‌ ಪೂರೈಕೆ ಹೇಗಿದೆ?
ಪ್ರಾರಂಭದಲ್ಲಿ ದಿನಕ್ಕೆ 10 ಸಾವಿರ ಡೋಸ್‌ ಮಾತ್ರ ನಮಗೆ ಸಿಗುತ್ತಿತ್ತು. ಇದೀಗ 50 ಸಾವಿರ ಡೋಸ್‌ವರೆಗೆ ಸಿಗುವಂತೆ ಮಾಡಲಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ಅಗತ್ಯವಾದ 4.25 ಲಕ್ಷ ಡೋಸ್‌ ರೆಮಿಡಿಸಿವಿರ್‌ ಪಡೆಯಲಾಗಿದೆ. ರೆಮಿಡಿಸಿವಿರ್‌, ಆಕ್ಸಿಜನ್‌ ಹೆಚ್ಚಿನ ಪ್ರಮಾ ಣದಲ್ಲಿ ಪಡೆಯುವ ವಿಚಾರದಲ್ಲಿ ಕೇಂದ್ರ ಸಚಿವ ಸದಾನಂದ ಗೌಡ, ಪ್ರಹ್ಲಾದ್‌ ಜೋಶಿ ಅವರು ಸಹಕಾರ ನೀಡಿದರು. ರಾಜ್ಯದಲ್ಲಿ 3,000 ಆಮ್ಲಜನಕ ಸಾಂದ್ರಕಗಳನ್ನು ಖರೀದಿಗೆ ಆದೇಶ ಮಾಡಲಾಗಿದೆ. ಇನ್ನೂ 10 ಸಾವಿರ ಖರೀದಿಗೆ ಬೇಡಿಕೆ ಸಲ್ಲಿಸಲು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ.

Advertisement

– ಉಸ್ತುವಾರಿ ಜಿಲ್ಲೆಯಲ್ಲೇನು ಕ್ರಮ?
ರಾಮನಗರ ಜಿಲ್ಲೆಯಲ್ಲಿ ಇದೀಗ ಇನ್ನೂ 150 ಹಾಸಿಗೆಗಳ ಸಂಖ್ಯೆ ಹೆಚ್ಚಳ ಮಾಡಲು ತೀರ್ಮಾನಿ ಸಲಾಗಿದೆ. ಮಾಗಡಿ, ಕನಕಪುರ, ಚನ್ನಪಟ್ಟಣ ತಾಲೂಕಿನ ಆಸ್ಪತ್ರೆ, ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಜನರೇಟರ್‌ ಸ್ಥಾಪನೆ. ಕಂದಾಯ ಭವನದಲ್ಲಿ 131 ಆಮ್ಲಜನಕ ಹಾಸಿಗೆ ಹೆಚ್ಚಳ, ಹೊಸ ಜಿಲ್ಲಾಸ್ಪತ್ರೆಯಲ್ಲಿ 130 ಹಾಸಿಗೆ ವ್ಯವಸ್ಥೆಗೆ ಕ್ರಮಕೈಗೊಳ್ಳ ಲಾಯಿತು. ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ಸಂಬಂಧ ವೀಡಿಯೊ ಕಾನ್ಫರೆನ್ಸ್‌ ಸೇರಿ 10ಕ್ಕೂ ಹೆಚ್ಚು ಸಭೆಗಳನ್ನು ನಡೆಸಿ ಅಧಿಕಾರಿಗಳಿಗೆ ಕಾಲಕಾಲಕ್ಕೆ ಸೂಚನೆ ನೀಡಲಾಗಿದೆ. ಗ್ರಾಮೀಣ ಭಾಗದಲ್ಲಿ ಹೋಂ ಐಸೊಲೇಶನ್‌ ಮಾಡದಿರಲು ಕೋವಿಡ್‌ ಕೇರ್‌ ಸೆಂಟರ್‌ಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ ಸೋಂಕಿತರ ನೆರವಿಗಾಗಿ ರಾಜರಾಜೇಶ್ವರೀ ಹಾಗೂ ದಯಾನಂದ ಸಾಗರ ವೈದ್ಯಕೀಯ ಕಾಲೇಜಿಗೆ ತಲಾ 50 ವೆಂಟಿಲೇಟರ್‌ ಸಹ ನೀಡಲಾಗಿದೆ.

3ನೇ ಅಲೆ ಎದುರಿಸಲು ಕೈಗೊಂಡ‌ ಕ್ರಮ
ಪ್ರತೀ ವಿಧಾನಸಭೆ ಕ್ಷೇತ್ರದಲ್ಲಿ 100 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಸ್ಥಾಪನೆಗೆ ನಿರ್ಧಾರ ಕೈಗೊಳ್ಳ ಲಾಗಿದೆ. ತಾಲೂಕು ಆಸ್ಪತ್ರೆ ಹಾಗೂ ಗ್ರಾಮೀಣ ಭಾಗದಲ್ಲಿ 8,105 ಆಕ್ಸಿಜನ್‌ ಹಾಸಿಗೆಗಳ ವ್ಯವಸ್ಥೆಗೆ ನಿರ್ಧರಿಸ ಲಾಗಿದೆ. ರಾಜ್ಯದ 146 ತಾಲೂಕು ಆಸ್ಪತ್ರೆಗಳಲ್ಲಿನ ಐಸಿಯು ಬೆಡ್‌ಗಳ ಸಂಖ್ಯೆ 6ರಿಂದ 20ಕ್ಕೆ ಏರಿಸಲು ನಿರ್ಧರಿಸಲಾಗಿದೆ. 206 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಾಲಿ ಇರುವ ತಲಾ 30 ಸಾಮಾನ್ಯ ಹಾಸಿಗೆಯನ್ನು ಆಕ್ಸಿಜನ್‌ ಹಾಸಿಗೆಗಳಾಗಿ ಪರಿವರ್ತಿಸಲಾಗುವುದು.

– ಎಸ್‌. ಲಕ್ಷ್ಮೀ ನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next