Advertisement

ಚೀನ ಸವಾಲಿಗೆ ಸಿದ್ಧ: ಸೇನಾದಿನದಲ್ಲಿ ಭೂಸೇನಾ ಮುಖಸ್ಥ ಜ|ಪಾಂಡೆ

11:42 PM Jan 15, 2023 | Team Udayavani |

ಬೆಂಗಳೂರು: ಲಡಾಖ್‌ ಸೇರಿದಂತೆ ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ ಯಾವುದೇ ಸವಾಲುಗಳನ್ನು ಎದುರಿಸಲು ಭೂಸೇನೆ ಸಿದ್ಧವಾಗಿದೆ ಎಂದು ಭೂಸೇನಾ ಮುಖ್ಯಸ್ಥ ಜ| ಮನೋಜ್‌ ಪಾಂಡೆ ಪ್ರತಿಪಾದಿಸಿದ್ದಾರೆ. ಚೀನದ ಯಾವುದೇ ಅನಿರೀಕ್ಷಿತ ಚಿತಾವಣೆಗಳನ್ನು ಎದುರಿಸಲು ಭೂಸೇನೆ ಶಕ್ತವಾಗಿದೆ ಎಂದಿದ್ದಾರೆ.

Advertisement

ಇದೇ ಮೊದಲ ಬಾರಿಗೆ ಹೊಸದಿಲ್ಲಿಯಿಂದ ಹೊರಗೆ, ಅಂದರೆ ಬೆಂಗಳೂರಿನಲ್ಲಿ ನಡೆದ “ಸೇನಾ ದಿನ’ದಲ್ಲಿ ಮಾತನಾಡಿದ ಅವರು, ಉತ್ತರದ ಗಡಿ ಪ್ರದೇಶದಲ್ಲಿ ಶಾಂತಿ ನೆಲೆಸಿದೆ. ಎಲ್‌ಎಸಿ ವ್ಯಾಪ್ತಿಯಲ್ಲಿ ಕದನ ವಿರಾಮ ಮುಂದುವರಿಸುವ ನಿಟ್ಟಿನಲ್ಲಿ ಆದ್ಯತೆಯ ಕ್ರಮ ಕೈಗೊಳ್ಳಲಾಗಿದೆ. ಪಶ್ಚಿಮ ವ್ಯಾಪ್ತಿಯಲ್ಲಿ ನಿಯಮ ಉಲ್ಲಂ ಸುವ ಪ್ರಕರಣಗಳು ಮುಂದುವರಿದಿವೆ ಎಂದರು.

ಸ್ಥಿತಿ ಸುಧಾರಣೆ
ಪಾಕಿಸ್ಥಾನ ಜತೆಗಿನ ಗಡಿ ಪ್ರದೇಶದಲ್ಲಿ ಮಾದಕ ವಸ್ತು ಕಳ್ಳಸಾಗಣೆ ಮತ್ತು ಶಸ್ತ್ರಾಸ್ತ್ರ ಸಾಗಣೆ ತಡೆಯಲು ಡ್ರೋನ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಈಶಾನ್ಯ ಭಾರತದಲ್ಲಿ ಕೂಡ ಭದ್ರತ ಸ್ಥಿತಿಯಲ್ಲಿ ಸುಧಾರಣೆಯಾಗಿದೆ ಎಂದು ಜ| ಪಾಂಡೆ ಪ್ರತಿಪಾದಿಸಿದರು. ಅಲ್ಲಿ ಸಕ್ರಿಯವಾಗಿರುವ ಹಲವು ಉಗ್ರಗಾಮಿ ಗುಂಪುಗಳನ್ನು ಶಾಂತಿ ಒಪ್ಪಂದಕ್ಕೆ ಬರುವಂತೆ ಮಾಡಲು ಸೇನೆ ಶ್ರಮಿಸಿದೆ ಎಂದರು.

ಆತ್ಮನಿರ್ಭರತೆಗೆ ಒತ್ತು
ಭವಿಷ್ಯದ ಸವಾಲುಗಳನ್ನು ಎದುರಿಸಲು ಆಧುನಿಕತೆ ಮತ್ತು ಆತ್ಮನಿರ್ಭರ ಭಾರತ ನಮ್ಮ ಮೂಲಮಂತ್ರವಾಗಿರಲಿದೆ. ಇದಕ್ಕೆ ಪೂರಕವಾಗಿ ಹಲವಾರು ಸುಧಾರಣೆಗಳನ್ನು ತಂದಿದ್ದು, ಭಾರತೀಯ ಕೈಗಾರಿಕೆಗಳೊಂದಿಗೆ ಖರೀದಿ- ಮಾರಾಟಗಾರ ಸಂಬಂಧದ ಬದಲಿಗೆ “ಸಹಭಾಗಿತ್ವ’ದ ಬಾಂಧವ್ಯ ಬೆಳೆಸಿಕೊಂಡಿದ್ದೇವೆ ಎಂದರು.

ಚೀನ, ಪಾಕ್‌ಗೆ ತಕ್ಕ ಉತ್ತರ
ಚೆನ್ನೈ: ಸದಾ ಕಾಲು ಕೆರೆದು ಬರುವ ಚೀನ ಮತ್ತು ಪಾಕಿಸ್ಥಾನಗಳಿಗೆ ತಕ್ಕ ಉತ್ತರ ನೀಡುವ ಮೂಲಕ ಭಾರತವನ್ನು ಬೆದರಿಸುವ ದೃಷ್ಟಾಂತಗಳಿಗೆ ಪೂರ್ಣ ವಿರಾಮ ಹಾಕಲಾಗಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್‌ ಪ್ರತಿಪಾದಿಸಿದ್ದಾರೆ. ಚೆನ್ನೈಯಲ್ಲಿ ಮಾತನಾಡಿದ ಅವರು, ಕೊರೊನಾ ಸಂಕಟದ ಹೊರತಾಗಿಯೂ 2020ರ ಮೇ ಮತ್ತು ಡಿಸೆಂಬರ್‌ನಲ್ಲಿ ಪೂರ್ವ ಲಡಾಖ್‌ ಹಾಗೂ ತವಾಂಗ್‌ನಲ್ಲಿ ಚೀನಕ್ಕೆ ಸೂಕ್ತ ಪ್ರತ್ಯುತ್ತರ ನೀಡಲಾಗಿದೆ ಎಂದರು. ಹಾಗೆಯೇ ಉರಿಯಲ್ಲಿ ಸಂಭವಿಸಿದ ಘಟನೆಗೆ ಬಾಲಾಕೋಟ್‌ ದಾಳಿಯ ಮೂಲಕ ಪಾಕಿಸ್ಥಾನಕ್ಕೆ ಪ್ರತ್ಯುತ್ತರ ನೀಡಲಾಯಿತು ಎಂದು ಹೇಳಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next