Advertisement
ಎಲ್ಲಾ ಸರಿ, ಚಿತ್ರ ಮುಗಿಯುವುದಿಲ್ಲ ಎಂದು ಪ್ರಸನ್ನರಿಗೆ ಯಾಕನಿಸಿತು. “ಆ ಸಂದರ್ಭಗಳೇ ಹಾಗಿದ್ದವು’ ಎಂಬ ಉತ್ತರ ಅವರಿಂದ ಬರುತ್ತದೆ. “ನಾನು “ರಂಗಪ್ಪ ಹೋಗಿಬಿಟ್ನಾ’ ಚಿತ್ರದ ನಂತರ ತುಂಬಾ ಕಲಿತೆ. ನಾನು ಸಿನಿಮಾ ಮಾಡಿದಿದ್ದಕ್ಕೂ ಅದೇ ಕಾರಣ. ಕೆಲವರು ಬಂದು ಸಿನಿಮಾ ಮಾಡಿಕೊಡಿ ಅಂತೇನೋ ಕೇಳಿದರು. ಆದರೆ, ಆ ಚಿತ್ರದಿಂದಾದ ನೋವು, ಹೊಸ ಚಿತ್ರ ನಿರ್ದೇಶಿಸುವುದಕ್ಕೆ ಒಪ್ಪುತ್ತಿರಲಿಲ್ಲ. ಸರಿಯಾದ ನಿರ್ಮಾಪಕರು ಬಂದರೆ ಮಾತ್ರ ಚಿತ್ರ ಮಾಡೋದಾಗಿ ನಿರ್ಧರಿಸಿದ್ದೆ.
Related Articles
Advertisement
ಈ ಚಿತ್ರದಲ್ಲಿ ನವರಸಗಳಿವೆ. ಚಿತ್ರ ಮನರಂಜಿಸುತ್ತಲೇ, ಹೃದಯ ತಟ್ಟುತ್ತಾ, ಭಾವುಕಗೊಳಿಸುತ್ತಾ ಹೋಗುತ್ತದೆ’ ಎಂದು ಹೇಳುತ್ತಾರೆ ಪ್ರಸನ್ನ. “ಚಿಟ್ಟೆ’ ಚಿತ್ರದಲ್ಲಿರುವುದು ಕೇವಲ ಐದೇ ಐದು ಪಾತ್ರಗಳಂತೆ. ನಾಯಕನಾಗಿ ಯಶಸ್ ಸೂರ್ಯ ಇದ್ದರೆ, ನಾಯಕಿಯಾಗಿ ಹರ್ಷಿಕಾ ಪೂಣಾತ್ಛ ಇದ್ದಾರೆ. ಇನ್ನು “ಜಟ್ಟ’ ಗಿರಿರಾಜ್, ದೀಪಿಕಾ ಮತ್ತು ನಾಗೇಶ್ ಕಾರ್ತಿಕ್ ನಟಿಸಿದ್ದಾರೆ. ಈ ಪೈಕಿ ಯಶಸ್, “ಕುರುಕ್ಷೇತ್ರ’ ಚಿತ್ರದ ಶೂಟಿಂಗ್‌ನಲ್ಲಿದ್ದುದರಿಂದ ಬಂದಿರಲಿಲ್ಲ.
ಗಿರಿರಾಜ್ ಮತ್ತು ದೀಪಿಕಾ ಸಹ ಬೇರೆ ಕಡೆ ಚಿತ್ರೀಕರಣದಲ್ಲಿದ್ದ ಕಾರಣ ಬಂದಿರಲಿಲ್ಲ. ಹರ್ಷಿಕಾ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು. “ನಾನು ಇದುವರೆಗೂ ಹಲವು ಸಿನಿಮಾಗಳಲ್ಲಿ ನಟಿಸಿದ್ದೇನೆ. ಅಷ್ಟು ಚಿತ್ರಗಳಲ್ಲಿ, ಅಭಿನಯ ಮಾಡಿ ತೋರಿಸುತ್ತಿದ್ದ ನಿರ್ದೇಶಕರೆಂದರೆ ಅದು ಸುನೀಲ್ ಕುಮಾರ್ ದೇಸಾಯಿ ಒಬ್ಬರೇ. ಪ್ರಸನ್ನ ಸಹ ಅದೇ ತರಹ ಪ್ರತಿಯೊಂದನ್ನು ಅಭಿನಯಿಸಿ ತೋರಿಸುತ್ತಿದ್ದರು. ಅವರಿಗೆ ಎಷ್ಟು ಬೇಕು ಎಂಬುದು ಚೆನ್ನಾಗಿ ಗೊತ್ತಿದೆ.
ಅಷ್ಟನ್ನೇ ಚೆನ್ನಾಗಿ ತೆಗೆಯುತ್ತಿದ್ದರು. ಅವರು ಏನು ಹೇಳಿದ್ದರೋ, ಅದನ್ನು ಮಾಡುವ ಪ್ರಯತ್ನ ಮಾಡಿದ್ದೀನಿ’ ಎಂದರು ಹರ್ಷಿಕಾ. ಇದು ಪ್ರಸನ್ನ ನಿರ್ದೇಶನದ ಎರಡನೇ ಚಿತ್ರವಷ್ಟೇ ಅಲ್ಲ, ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಅವರೇ ಬರೆದಿದ್ದಾರೆ. ಸಂಗೀತ ನಿರ್ದೇಶನ ಮಾಡುವುದರ ಜೊತೆಗೆ ಬಿ. ಶ್ರೀನಿವಾಸರಾವ್ ಎನ್ನುವವರ ಜೊತೆಗೆ ಸೇರಿ ಚಿತ್ರವನ್ನೂ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ವಿಶ್ವಜಿತ್ ರಾವ್ ಅವರ ಛಾಯಾಗ್ರಹಣವಿದ್ದರೆ, ಕೆಜೆಟನ್ ಡಯಾಸ್ ಅವರ ಹಿನ್ನೆಲೆ ಸಂಗೀತವಿದೆ.