Advertisement
ಹಂಪಿ ಬಜಾರ್ ಹೆಸರಿನಲ್ಲಿ ಹೈಟೆಕ್ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಪಪಂ ಮುಂದಾಗಿದ್ದು, ಈಗಾಗಲೇ ನೀಲನಕ್ಷೆ ಸಿದ್ಧಪಡಿಸಿ ಅಗತ್ಯ ಅನುದಾನಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಕಮಲಾಪುರ ಪಟ್ಟಣದ ಹೊಸ ನಿಲ್ದಾಣದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ 107.2 ಅಡಿ, ಪೂರ್ವದ ಕಡೆ ದಕ್ಷಣದಿಂದ ಉತ್ತರಕ್ಕೆ 316 ಅಡಿ, ಪಶ್ಚಿಮಕ್ಕೆ ದಕ್ಷಣದಿಂದ ಉತ್ತರಕ್ಕೆ 397.6 ಅಡಿಯಲ್ಲಿ ಬೃಹತ್ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ವಾಹನಗಳ ಪಾರ್ಕಿಂಗ್ವ್ಯವಸ್ಥೆ ಇದ್ದರೆ, ನೆಲಮಹಡಿಯಲ್ಲಿ 34 ವಾಣಿಜ್ಯ ಮಳಿಗೆಗಳು, ಒಂದು ಹೋಟೆಲ್, ಶೌಚಾಲಯ ಹಾಗೂ ಆಹಾರ ಅಂಗಳವನ್ನು ನಿರ್ಮಾಣ ಮಾಡಲಾಗುತ್ತದೆ. ಮೊದಲನೇ ಮಹಡಿಯಲ್ಲಿ 22 ಸಾಮಾನ್ಯ ವಸತಿ ಕೋಣೆಗಳು, 6 ವಸತಿಗೃಹಗಳು.ಶೌಚಾಲಯ ನಿರ್ಮಾಣ ಮಾಡಲಾಗುತ್ತದೆ.
ನೂತನ ವಿಜಯನಗರ ಜಿಲ್ಲೆಯ ಬಹುತೇಕ ಕಟ್ಟಡಗಳು ಹಂಪಿಯ ವಾಸ್ತುಶಿಲ್ಪದ ಮಾದರಿಯಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಇದರಂತೆ ಕಮಲಾಪುರದ ಹೈಟೆಕ್ ವಾಣಿಜ್ಯ ಮಳಿಗೆಯನ್ನು ಹಂಪಿ ಬಜಾರ್ ಎಂದು ಹೆಸರಿಡಲಾಗಿದ್ದು, ಮುಖಭಾಗದಲ್ಲಿ ಹಂಪಿ ಸ್ಮಾರಕಗಳ ಮಾದರಿಯಲ್ಲಿ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ.
Related Articles
ಹೈಟೆಕ್ ಹಂಪಿ ಬಜಾರ್ ನಿರ್ಮಾಣವಾದಲ್ಲಿ ಹಂಪಿ ಆಗಮಿಸುವ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಊಟ, ವಸತಿಗಾಗಿ ಪ್ರವಾಸಿಗರು ಹೊಸಪೇಟೆಗೆ ತೆರಳುವುದು ತಪ್ಪಲಿದೆ. ಇದೀಗ ಕಮಲಾಪುರದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ವಸತಿಗೃಹ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಪ್ರವಾಸಿಗರಿಗೆ ಅನುಕೂಲವಾಗಲಿದೆ.
Advertisement
ಕಮಲಾಪುರದಲ್ಲಿ ಗುಣಮಟ್ಟದ ವಾಣಿಜ್ಯ ಮಳಿಗೆ ಹಾಗೂ ವಸತಿಗೃಹಗಳ ನಿರ್ಮಾಣಕ್ಕೆ ಚಿಂತನೆ ನಡೆದಿದ್ದು, ಯೋಜನೆ ಸರಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಸರ್ಕಾರದಿಂದ ಅನುದಾನ ಜಾರಿಯಾದ ನಂತರ ಯೋಜನೆ ಸಿದ್ಧಪಡಿಸಲಾಗುವುದು.ನಾಗೇಶ್, ಮುಖ್ಯಾಧಿಕಾರಿ,
ಪಪಂ, ಕಮಲಾಪುರ ಪಟ್ಟಣದ ಹೊಸ ಬಸ್ ನಿಲ್ದಾಣದ ಸ್ಥಳದಲ್ಲಿ ಹೈಟೆಕ್ ಹಂಪಿ ಬಜಾರ್ ನಿರ್ಮಾಣಕ್ಕಾಗಿ ಸರಕಾರಕ್ಕೆ ಅನುಮೋದನೆ ಕಳುಹಿಸಲಾಗಿದೆ. ಸಚಿವ ಆನಂದ್‌ಸಿಂಗ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರು ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಿದ್ದಾರೆ.
ಸಯ್ಯದ್ ಅಮಾನುಲ್ಲ,
ಅಧ್ಯಕ್ಷರು, ಪಪಂ, ಕಮಲಾಪುರ ಪಿ.ಸತ್ಯನಾರಾಯಣ