Advertisement

ವ್ಯವಸ್ಥೆ ಸುಧಾರಣೆಗೆ ವಿಷ ಕುಡಿಯಲು ಸಿದ್ಧ: ಪಟೇಲ್‌

07:30 AM Mar 15, 2018 | |

ಗಾಂಧಿನಗರ: ವ್ಯವಸ್ಥೆ ಸುಧಾರಣೆಗಾಗಿ ಅಗತ್ಯ ಬಿದ್ದರೆ ವಿಷ ಕುಡಿದು ನೀಲಕಂಠನಾಗುವೆ ಎಂದಿದ್ದಾರೆ ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌. ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನ 12,967 ಕೋಟಿ ರೂ. ಮೌಲ್ಯದ ಹಗರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿ, ಆರ್‌ಬಿಆ ಈ ಪ್ರಕರಣದಿಂದ ನೊಂದಿದೆ ಮತ್ತು ಆಘಾತಗೊಂಡಿದೆ ಎಂದಿದ್ದಾರೆ. ಗುಜರಾತ್‌ ರಾಷ್ಟ್ರೀಯ ಕಾನೂನು ವಿವಿಯಲ್ಲಿ ಉಪನ್ಯಾಸ ನೀಡಿದ ಅವರು,  ಆರ್‌ಬಿಐ ದೇಶದ ಸಾಲ ನೀಡಿಕೆ ಕ್ಷೇತ್ರವನ್ನು ಮಂದರ ಪರ್ವತಕ್ಕೆ ಹೋಲಿಕೆ ಮಾಡಿದ್ದಾರೆ. ಅದರಲ್ಲಿ ಅಮೃತಕ್ಕಾಗಿ ಸಮುದ್ರ ಮಥನ ಮಾಡಲಾಯಿತು. ಅದೇ ರೀತಿ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಸರಿಪಡಿಸುವಾಗ ಸವಾಲುಗಳು ಎದುರಾಗುತ್ತವೆ. ಅದನ್ನು ಮೆಟ್ಟಿ ನಿಲ್ಲಲು ಸಿದ್ಧ ಎಂದು ಪಟೇಲ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next