Advertisement
ಗಣೇಶ ಚತುರ್ಥಿ ಸಂಭ್ರಮ ಮುಗಿಯುವಷ್ಟರಲ್ಲಿ ನವರಾತ್ರಿ ಉತ್ಸವದ ಸಿದ್ಧತೆಯೂ ಆರಂಭಗೊಂಡಿದೆ. ಪ್ರತಿ ಮನೆಮನೆಯೂ ನವರಾತ್ರಿ ನವವಧುವಿನಂತೆ ಸಿಂಗಾರಗೊಳ್ಳಲು ಕಾತರದಿಂದ ಕಾಯುತ್ತಿದೆ. ಹಬ್ಬದ ಖರೀದಿಯ ಜತೆಗೆ ಈ ಬಾರಿ ನವರಾತ್ರಿ ಆಚರಣೆ ಹೇಗಿರಬೇಕು, ಮನೆಯನ್ನು ಹೇಗೆ ಶೃಂಗರಿಸಬೇಕು ಮೊದಲಾದ ಚರ್ಚೆಗಳೂ ಆರಂಭಗೊಂಡಿವೆ. ನವರಾತ್ರಿ ಆರಂಭಕ್ಕೆ ಇನ್ನೇನು ಕೆಲವೇ ದಿನಗಳಷ್ಟೇ ಬಾಕಿ ಉಳಿದಿದೆ. ಹೀಗಿರುವಾಗ ಮನೆಯ ಶೃಂಗಾರಕ್ಕೆ ಏನೆಲ್ಲ ಮಾಡಬೇಕು ಎಂಬುದಕ್ಕೆ ಒಂದಷ್ಟು ಐಡಿಯಾಗಳು ಇಲ್ಲಿ ಇವೆ. ಹಬ್ಬವನ್ನು ವಿಶೇಷವಾಗಿ ಆಚರಿಸುವ ಯೋಚನೆ ಇದ್ದರೆ ಟ್ರೈ ಮಾಡಿನೋಡಬಹುದು. ಒಂದಷ್ಟು ಸಿದ್ಧತೆಗಳನ್ನು ಮುಂಚಿತವಾಗಿಯೇ ಮಾಡಿಕೊಳ್ಳಬಹುದು.
Related Articles
ನವರಾತ್ರಿ ಹಬ್ಬದ ವಿಶೇಷವಾಗಿ ಸಣ್ಣ ಮಣ್ಣಿನ ಮಡಕೆಗಳನ್ನು ಅಲಂಕಾರಕ್ಕೆ ಬಳಸಿಕೊಳ್ಳಬಹುದು. ಮಡಕೆಯ ಒಳಗೆ ಅಕ್ಕಿ ತುಂಬಿಸಿ ಅದರ ಮೇಲೆ ತೆಂಗಿನಕಾಯಿಯನ್ನು ಇಡುವ ಸಂಪ್ರದಾಯ ಹಲವೆಡೆ ಇದೆ. ಇದನ್ನು ಆಲಂಕಾರಿಕವಾಗಿಯೂ ಬಳಸಬಹುದು. ಇದರೊಂದಿಗೆ ದೀಪವನ್ನು ಬೆಳಗಿಸಿಟ್ಟರೆ ಮನೆಯ ಸೌಂದರ್ಯ ಇಮ್ಮಡಿಯಾಗುವುದು.
Advertisement
ಬಣ್ಣಗಳುನವರಾತ್ರಿ ಮತ್ತು ಬಣ್ಣಗಳಿಗೆ ಅವಿನಾಭಾವ ಸಂಬಂಧವಿದೆ. ಸಾಂಪ್ರದಾಯಿಕ ಶೈಲಿಯ ಹಸುರು, ಕೆಂಪು, ಹಳದಿ, ಕೇಸರಿ ಮೊದಲಾದ ಬಣ್ಣಗಳನ್ನು ಬಳಸಿಕೊಂಡರೆ ಮನೆಯ ಅಂದ ಹೆಚ್ಚಾಗುವುದು. ಅಲಂಕಾರಿಕ ವಸ್ತುಗಳಿಗೆಲ್ಲ ಹೊಸ ಬಣ್ಣ ಬಳಿಯುವುದರಿಂದ ಅವುಗಳಿಗೆ ಹೊಸತನ ಬರುತ್ತದೆ. ಸೋಫಾ, ದಿಂಬುಗಳ ಹೊದಿಕೆಯನ್ನು ಕಸೂತಿಯಲ್ಲಿ ಅಲಂಕರಿಸಿದರೆ ಅವುಗಳೂ ಆಕರ್ಷಕವಾಗಿ ಕಾಣುತ್ತವೆ. ರಂಗೋಲಿ
ಮನೆಯ ಹೊರಗೆ, ದೇವರ ಕೋಣೆ, ಹೊಸ್ತಿನಲ್ಲಿ ರಂಗೋಲಿ ರಚಿಸುವುದರಿಂದ ಹಬ್ಬಕ್ಕೆ ಮತ್ತಷ್ಟು ಮೆರುಗು ತುಂಬುತ್ತದೆ. ಈಗ ಮಾರುಕಟ್ಟೆಯಲ್ಲಿ ಸಿದ್ಧಗೊಂಡಿರುವ ರಂಗೋಲಿ, ರಂಗೋಲಿ ಬಿಡಿಸುವ ಉಪಕರಣಗಳು ಸಿಗುವುದರಿಂದ ಸುಲಭವಾಗಿ ರಂಗೋಲಿ ಬರೆಯಬಹುದು. ತಳಿರುತೋರಣ
ತಳಿರು ತೋರಣಗಳಿಗೆ ಹಬ್ಬದಲ್ಲಿ ವಿಶೇಷ ಸ್ಥಾನ ವಿದೆ ಮಾತ್ರ ವಲ್ಲ ಪ್ರಸ್ತುತ ಇದು ಅಲಂಕಾರದಲ್ಲೂ ಪ್ರಧಾನ ಪಾತ್ರ ವಹಿಸುತ್ತಿದೆ. ಮಾವಿನ ಎಲೆಯ ತಳಿರು ಅಥವಾ ಅಂಗಡಿಗಳಲ್ಲಿ ಸಿಗುವ ರೆಡಿಮೇಡ್ ತೋರಣಗಳನ್ನು ತಂದು ಮನೆಯ ಹೆಬ್ಬಾಗಿಲಿನ ದಾರಂದ, ದೇವರ ಕೋಣೆಯ ಬಾಗಿಲಿನ ಅಂದ ಹೆಚ್ಚಿಸಲು ಬಳಸಬಹುದು. ಇವುಗಳನ್ನು ನಾವೇ ತಯಾರಿಸಿಕೊಳ್ಳಬಹುದು. ಇಲ್ಲವಾದರೆ ಹಬ್ಬದ ದಿನ ಬಗೆ ಬಗೆಯ ಹೂವಿನ ತೋರಣವನ್ನೂ ಮಾಡಬಹುದು. ಹೂದಾನಿ
ಮನೆಯ ಸಂಪೂರ್ಣ ಅಲಂಕಾರ ಹಬ್ಬದ ಸಮಯದಲ್ಲಿ ಸಾಧ್ಯವಾಗುವುದಿಲ್ಲ. ಹೀಗಾಗಿ ಹೂದಾನಿಯಲ್ಲಿ ವಿವಿಧ ಹೂವುಗಳನ್ನು ಹಾಕಿ ಮನೆಯನ್ನು ಸಿಂಗರಿಸಬಹುದು. ಅದಕ್ಕಾಗಿ ವಿಶೇಷ ವಿನ್ಯಾಸದ ಹೂದಾನಿಯನ್ನು ಬಳಸಬಹುದು. ಪೈಂಟಿಂಗ್
ದುರ್ಗಾದೇವಿಯ ಆಕರ್ಷಕ ಪೈಂಟಿಂಗ್ ಅನ್ನು ರಚಿಸುವುದು, ಗೋಡೆಯಲ್ಲಿ ಚಿತ್ರ ಬರೆಯುವುದು ಕೂಡ ನವರಾತ್ರಿ ಹಬ್ಬದ ವಿಶೇಷ ಅಥವಾ ರಂಗೋಲಿಯಲ್ಲೂ ದೇವಿಯ ಚಿತ್ರ ಬಿಡಿಸಿದರೆ ಮನೆಯ ಸೌಂದರ್ಯ ಇಮ್ಮಡಿಯಾಗುವುದು. ಸಂಗೀತ
ಮನಸ್ಸಿಗೆ ಮುದ ನೀಡುವ ಶಬ್ಧವು ಮನೆಯ ಅಲಂಕಾರದ ಒಂದು ಭಾಗ. ಡೋರ್‌ಬೆಲ್, ಲೈಟಿಂಗ್,ಗೋಡೆಯಲ್ಲಿ ನೇತು ಹಾಕುವ, ಶೋಕೇಸ್‌ನಲ್ಲಿಡುವ ಅಲಂಕಾರಿಕ ವಸ್ತುಗಳ ಶಬ್ಧಗಳು ಹಬ್ಬದ ಮೆರುಗು ತುಂಬುತ್ತದೆ. ಇದರಲ್ಲಿ ಭಕ್ತಿಗೀತೆಗಳಿಗೆ ಆದ್ಯತೆ ಕೊಟ್ಟರೆ ನವರಾತ್ರಿ ಹಬ್ಬದ ಸೊಬಗು ಹೆಚ್ಚಾಗುವುದು. ದೀಪಗಳು
ದೀಪವಿಲ್ಲದೆ ಯಾವ ಹಬ್ಬಗಳೂ ಪರಿಪೂರ್ಣವಾಗುವುದಿಲ್ಲ. ದೀಪಗಳು, ವಿವಿಧ ಬಗೆಯ ಕ್ಯಾಂಡಲ್ ಗಳನ್ನು ಮನೆಯ ಹೊರಗೆ ಮತ್ತು ಒಳಗೆ ಹಚ್ಚಿ ಇಡುವುದರಿಂದ ಮನೆಯ ಅಂದ ಹೆಚ್ಚಾಗುತ್ತದೆ. ದೇವರ ಚಿತ್ರದ ಬಳಿ ಸಣ್ಣ ಸಣ್ಣ ದೀಪಗಳನ್ನು ಉರಿಸಿಟ್ಟು ದೇವರ ಕೋಣೆಯ ಅಂದವನ್ನು ಹೆಚ್ಚಿಸಬಹುದು. ಮಣ್ಣಿನ ಹಣತೆಯಾದರೆ ಅದಕ್ಕೆ ನಾವೇ ಸ್ವತಃ ಬಣ್ಣ ಹಚ್ಚಿ ಅದರಲ್ಲಿ ಚಿತ್ರಗಳನ್ನು ಬರೆಯಬಹುದು. ವಿವಿಧ ಬಣ್ಣದ ವಿದ್ಯುತ್ ದೀಪಗಳನ್ನೂ ಅಲಂಕಾರಕ್ಕೆ ಬಳಸಬಹುದು. ಇದು ಕೇವಲ ಮನೆಯನ್ನು ಅಂದಗೊಳಿಸುವುದು ಮಾತ್ರವಲ್ಲ ಇಡೀ ಮನೆಯನ್ನೂ ಬೆಳಗಿಸುತ್ತದೆ. ಇನ್ನು ಚಾಂಡಿಲಿಯರ್ ಗಳೂ ಕೂಡ ಮನೆಯ ಸೌಂದರ್ಯ ಹೆಚ್ಚಿಸುತ್ತದೆ. ಇವುಗಳಿಗೂ ವಿಶೇಷ ಅಲಂಕಾರ ಮಾಡಿ ನೇತಾಡಿಸಬಹುದು. ಅಲಂಕಾರಿಕ ವಿಗ್ರಹ, ಕಲಾಕೃತಿಗಳು
ವಿಗ್ರಹ ಮತ್ತು ಪಾಚೀನ ಕಲಾಕೃತಿಗಳ ಶೈಲಿಯಲ್ಲಿನ ಅಲಂಕಾರಿಕ ವಸ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವುಗಳನ್ನು ತಂದು ಮನೆಗಳಲ್ಲಿ ಜೋಡಿಸಿದರೆ ಮನೆಯ ಅಂದ ಹೆಚ್ಚಾಗುತ್ತದೆ. ಉದಾ: ಸಣ್ಣ ಆನೆಯ ಮೂರ್ತಿಗಳನ್ನು ತಂದು ದೇವರ ಕೋಣೆಯ ಎರಡೂ ಬದಿಗಳಲ್ಲಿ ನೇತಾಡಿಸಬಹುದು. ಜತೆಗೆ ಲೋಹದ ವಿಗ್ರಹ, ಬೊಂಬೆಗಳನ್ನೂ ಮನೆಯ ಅಲಂಕಾರಕ್ಕೆ ಬಳಸಬಹುದು. ಸುಶ್ಮಿತಾ, ಧನ್ಯಶ್ರೀ, ರಂಜಿನಿ