Advertisement
ವಿಶ್ವವಿದ್ಯಾನಿಲಯದಲ್ಲಿ ಪ್ರತಿ ವರ್ಷ ವಿನೂತನ ರೀತಿಯಲ್ಲಿ ಶಿವಲಿಂಗ ದರ್ಶನ ಮಾಡಿ, ಸಾರ್ವಜನಿಕರ ಮನಗೆದ್ದಿದೆ. ಈ ಬಾರಿ ಮತ್ತಷ್ಟು ಹಬ್ಬವನ್ನು ಆಕರ್ಷಣೆಯಾಗಿ ಆಚರಿಸುವ ಸಲುವಾಗಿ ಧಾನ್ಯಗಳಲ್ಲಿ ಶಿವಲಿಂಗ ದರ್ಶನಕ್ಕೆ ಮುಂದಾಗಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿದೆ.
Related Articles
Advertisement
ರಾಜಯೋಗದಿಂದ ಸುಖ, ಶಾಂತಿ: ಮನುಷ್ಯನ ಅಂತರಿಕ ಸುಖ, ಶಾಂತಿ ಮತ್ತು ಆನಂದ ಪ್ರಾಪ್ತಿ ರಾಜಯೋಗದಿಂದ ಸಿಗುತ್ತದೆ. ಇಲ್ಲಿ ಹೇಳಿಕೊಡುವ ರಾಜಯೋಗದಿಂದ ಏಕಾಗ್ರತೆ, ಸ್ಮರಣೆ ಶಕ್ತಿ ಮತ್ತು ಮನೋಬಲದ ವೃದ್ಧಿಗೆ ಪೂರಕವಾಗುತ್ತದೆ. ಸದ್ಗುಣಗಳು ಹಾಗೂ ವಿಶೇಷತೆಗಳ ಆಧಾರದಿಂದ ಶ್ರೇಷ್ಠ ವ್ಯಕ್ತಿತ್ವ ನಿರ್ಮಾಣವಾಗಲಿದೆ. ಸಂಬಂಧಗಳಲ್ಲಿ ಮಧುರತೆಯ ಮೂಲಕ ಗೃಹಸ್ತರಲ್ಲಿ ನೆಮ್ಮದಿ ಕಾಣಲು ಸಾಧ್ಯವಿದೆ.
ಶಿವಲಿಂಗ ದರ್ಶನದಲ್ಲಿ ಅಧಿಕಾರಿಗಳು ಭಾಗಿ: ಮಹಾಶಿವರಾತ್ರಿ ಪ್ರಯುಕ್ತ ಪಟ್ಟಣದ ಈಶ್ವರೀಯ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿರುವ ಧಾನ್ಯಗಳಲ್ಲಿ ಶಿವಲಿಂಗ ದರ್ಶನ ದೊರೆಯಲಿದೆ. ಫೆ.24ರಂದು ವಿಶ್ವವಿದ್ಯಾನಿಲಯದಲ್ಲಿ ನಡೆಯುವ ಶಿವಲಿಂಗ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದ್‌ಕುಮಾರ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಬೋಯಲ್ ನಾರಾಯಣರಾವ್, ಕೇರಳದ ರಾಜಯೋಗಿನಿ ಬಿ.ಕೆ.ಮೀನಾಜಿ ಭಾಗವಹಿಸಲಿದ್ದಾರೆ.
ಮನುಷ್ಯನ ಸಮಸ್ಯೆಗಳನ್ನು ಶಮನ ಮಾಡಿಕೊಳ್ಳಲು ಮತ್ತು ಮಾನಸಿಕ ಒತ್ತಡಗಳನ್ನು ಬಿಡುಗಡೆ ಮಾಡಿ, ಜೀವನದಲ್ಲಿ ಸುಖ, ಶಾಂತಿ, ಆನಂದವನ್ನು ರಾಜಯೋಗ ಕೊಡುತ್ತದೆ.-ಬಿ.ಕೆ.ಪ್ರಭಾಮಣಿ, ಮುಖ್ಯ ಸಂಚಾಲಕಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ * ಡಿ.ನಟರಾಜು