Advertisement
ಪಟ್ಟಣದಲ್ಲಿ ಮಂಗಳವಾರ ಮಾಜಿ ಶಾಸಕ ಸುರೇಶ್ ಬಾಬು ನೇತೃತ್ವದಲ್ಲಿ ಆಯೋಜಿಸಿದ್ದ ವಿಜಯ ಸಂಕಲ್ಪ ಯಾತ್ರೆಯ ರೋಡ್ ಶೋ ಕಾರ್ಯಕ್ರಮದಲ್ಲಿ ಮಾತನಾಡಿ, ಈಗಾಗಲೇ ಸಿಎಂ ಅಧಿಕಾರದ ಆಸೆಗಾಗಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸೂಟ್ ಬೂಟ್ ಹೊಲಿಸಿ, ಕನಸು ಕಾಣುತ್ತಿದ್ದಾರೆ. ಅವರಿಬ್ಬರ ಕನಸು ನಸನಾಗುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾಕಷ್ಟು ಅಭಿವೃದ್ಧಿ ಕಾರ್ಯಗಳೊಂದಿಗೆ ದೇಶದ ಜನರ ಅಚ್ಚುಮೆಚ್ಚೆಗೆ ಪಾತ್ರವಾಗಿದೆ. ನರೇಂದ್ರ ಮೋದಿಯವರು ಜನಪರ ಕಾರ್ಯಗಳೊಂದಿಗೆ ಜಗತ್ತಿಗೆ ಮಾದರಿಯಾಗಿದ್ದಾರೆ. ಭಾರತ ದೇಶದಲ್ಲಿ ಅತಿಕ್ರಮಣಕ್ಕೆ ಮುಂದಾಗಿದ್ದ ಚೀನಾವನ್ನು ಎದುರಿಸಿ ಗುಂಡಿಗೆ ನರೇಂದ್ರ ಮೋದಿಯದ್ದಾಗಿದೆ. ಚೀನಾ ಉಪಟಳಕ್ಕೆ ಹೆಡೆ ಮುರಿಕಟ್ಟುತ್ತಿದ್ದಾರೆ. ಇಂತಹ ಬಿಜೆಪಿ ಸರ್ಕಾರವನ್ನು ರಾಜ್ಯ ಮತ್ತು ದೇಶದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ತರುವ ಮೂಲಕ ದೇಶದ ಅಭಿವೃದ್ಧಿಗೆ ಅಣಿಯಾಗಬೇಕು ಎಂದರು.
Related Articles
Advertisement
ಈ ಸಂದರ್ಭದಲ್ಲಿ ಸಚಿವರಾದ ಬಿ.ಶ್ರೀರಾಮುಲು, ಸಿದ್ದರಾಜು, ಸಿದ್ದೇಶ್ ಯಾದವ್, ಸಂಸದ ವೈ.ದೇವೇಂದ್ರಪ್ಪ, ಮಾಜಿ ಸಂಸದರಾದ ಜೆ.ಶಾಂತ, ಎನ್.ಪಕ್ಕಿರಪ್ಪ, ಗುತ್ತಿಗನೂರು ವಿರೂಪಾಕ್ಷ ಗೌಡ, ಜಿಲ್ಲಾಧ್ಯಕ್ಷ ಮುರಾಹರಿಗೌಡ, ಕಂಪ್ಲಿ ಕ್ಷೇತ್ರದ ಮಂಡಲ ಅಧ್ಯಕ್ಷ ಅಳ್ಳಳ್ಳಿ ವೀರೇಶ್, ಪ್ರಧಾನ ಕಾರ್ಯದರ್ಶಿಗಳಾದ ಜಿ.ಸುಧಾಕರ, ಸುನೀಲ್ ಕುಮಾರ್, ಯುವ ಮೋರ್ಚ ಅಧ್ಯಕ್ಷ ನಟರಾಜಗೌಡ, ಜಿಲ್ಲಾ ಮುಖಂಡರಾದ ರಾಮಲಿಂಗಪ್ಪ, ಪ್ರೇಮ್ ಕುಮಾರ್ ಸೇರಿದಂತೆ ಮುಖಂಡರು, ಮಹಿಳೆಯರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ರೋಡ್ ಶೋ : ಪಟ್ಟಣದ ಶ್ರೀ ಗಾದಿಲಿಂಗಪ್ಪ ದೇವಸ್ಥಾನದಿಂದ ಆರಂಭಗೊಂಡ ಯಾತ್ರೆಯು ನಾಡ ಗೌಡರ ಮುಖ್ಯ ವೃತ್ತದ ಮೂಲಕ ಶ್ರೀ ದೊಡ್ಡ ಬಸವೇಶ್ವರ ದೇವಸ್ಥಾನದವರೆಗೆ ಸುಮಾರು ಒಂದುವರೆ ಕಿ.ಮಿ. ನಡೆದ ರೋಡ್ ಶೋನಲ್ಲಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಭಾಗದ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಸೇರಿದ್ದರು. ಈ ಯಾತ್ರೆಯಲ್ಲಿ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಸಾಕ್ಷಿಯಾಗಿದ್ದು ಕಂಡುಬಂತು. ಮೆರವಣಿಗೆಯಲ್ಲಿ ಜಾನಪದ ಕಾಲಮೇಳ, ವಿವಿಧ ವಿಷಭೂಷಣ ದಾರಿಗಳು, ಕಹಳೆ, ಚೆಂಡೆ ವಾದ್ಯ ಮೇಳ, ತಾಳಗಳು, ಗೊಂಬೆಯಾಟದ ಆಕರ್ಷಣೆಯೊಂದಿಗೆ ಕಾರ್ಯಕರ್ತರ ಘೋಷಣೆ ಮೊಳಗಿತು. ಉರಿ ಬಿಸಿಲನ್ನು ಲೆಕ್ಕಿಸದೆ ಕಾರ್ಯಕರ್ತರು ಲವಲವಿಕೆಯಿಂದ ರೋಡ್ ಶೋದಲ್ಲಿ ಭಾಗವಹಿಸಿದ್ದರು. ವಿಜಯ ಸಂಕಲ್ಪ ಯಾತ್ರೆ ಪಟ್ಟಣದ ನಾಡಗೌಡರ ವೃತ್ತಕ್ಕೆ ಅಗಮಿಸುತ್ತಿದ್ದಂತೆ ಹಾಲುಮತ ಸಮಾಜ ಬಾಂಧವರು ಅಸ್ಸಾಂ ಮುಖ್ಯಮಂತ್ರಿ ಹೇಮಂತ್ ಬಿಸ್ವಾ ಶರ್ಮಾ ಅವರಿಗೆ ಕುರಿಮರಿ ನೀಡಿ ಕಂಬಳಿ ಹೊದಿಸಿ ಸನ್ಮಾನಿಸಿ ಗೌರವಿಸಿದರು. ಪಟ್ಟಣದ ವಿವಿಧೆಡೆಯಲ್ಲಿ ಕೇಸರಿಮಯವಾಗಿತ್ತು. ಬಿಜೆಪಿಯ ರೋಡ್ ಶೋ ಹಿನ್ನಲೆ ಪಟ್ಟಣದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.