ಚಿತ್ರದುರ್ಗ: ಮೇ 12 ರಂದು ನಡೆಯುವ ಮತದಾನಕ್ಕೆ ಅಗತ್ಯ ಸಿದ್ಧತೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿ.ವಿ. ಜ್ಯೋತ್ಸ್ನಾ ತಿಳಿಸಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಿಂದ 76 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಎಲ್ಲಾ ವಿಧಾನಸಭೆಗಳಿಂದ 13,37,940 ಮತದಾರರಿದ್ದಾರೆ. ಇದರಲ್ಲಿ 6,74,851 ಪುರುಷ, 6,62,990 ಮಹಿಳಾ ಮತದಾರರು ಹಾಗೂ 99 ಇತರೆ ಮತದಾರರು ಸೇರಿದ್ದಾರೆ. ಒಟ್ಟು 1628 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ ಎಂದರು.
ಮೊಳಕಾಲ್ಮೂರು ಕ್ಷೇತ್ರದಲ್ಲಿ ಪುರುಷ ಅಭ್ಯರ್ಥಿಗಳು 10, ಮಹಿಳಾ ಅಭ್ಯರ್ಥಿ 1 ಸೇರಿ ಒಟ್ಟು 11, ಚಳ್ಳಕೆರೆ 4 ಪುರುಷ ಅಭ್ಯರ್ಥಿಗಳು, ಚಿತ್ರದುರ್ಗ 16 ಪುರುಷ, 1 ಮಹಿಳಾ ಅಭ್ಯರ್ಥಿ ಸೇರಿ ಒಟ್ಟು 17, ಹಿರಿಯೂರು 11 ಪುರುಷ ಅಭ್ಯರ್ಥಿಗಳು ಹಾಗೂ 2 ಮಹಿಳಾ ಅಭ್ಯರ್ಥಿ ಸೇರಿ 13, ಹೊಸದುರ್ಗ 11 ಪುರುಷ ಅಭ್ಯರ್ಥಿಗಳು, ಹೊಳಲ್ಕೆರೆ 19 ಪುರುಷ ಅಭ್ಯರ್ಥಿಗಳು ಹಾಗೂ ಓರ್ವ ಮಹಿಳಾ ಅಭ್ಯರ್ಥಿ ಸೇರಿ ಒಟ್ಟು 20 ಅಭ್ಯರ್ಥಿಗಳಿದ್ದಾರೆ ಎಂದು ಹೇಳಿದರು.
ಮೊಳಕಾಲ್ಮೂರು ಮತದಾನ ಕೇಂದ್ರಗಳು 279, ಪುರುಷ ಮತದಾರರು 1,17,002, ಮಹಿಳಾ ಮತದಾರರು 1,14,106, ಇತರರು 8 ಸೇರಿ ಒಟ್ಟು 2,31,116 ಮತದಾರರಿದ್ದಾರೆ. ಚಳ್ಳಕೆರೆ ಮತದಾನ ಕೇಂದ್ರಗಳು 254, ಪುರುಷ ಮತದಾರರು 1,05,158, ಮಹಿಳಾ ಮತದಾರರು 1,03,748, ಇತರರು 3 ಸೇರಿ ಒಟ್ಟು 2,08,909. ಚಿತ್ರದುರ್ಗ ಮತದಾನ ಕೇಂದ್ರಗಳು 280, ಪುರುಷ ಮತದಾರರು 1,25,311, ಮಹಿಳಾ ಮತದಾರರು 1,25,613, ಇತರರು 43 ಸೇರಿ ಒಟ್ಟು 2,50,967. ಹಿರಿಯೂರು ಮತದಾನ ಕೇಂದ್ರಗಳು 285, ಪುರುಷ ಮತದಾರರು 1,17,653, ಮಹಿಳಾ ಮತದಾರರು 1,17,755, ಇತರರು 36 ಸೇರಿ ಒಟ್ಟು 2,35,444. ಹೊಸದುರ್ಗ ಮತದಾನ ಕೇಂದ್ರಗಳು 236, ಪುರುಷ ಮತದಾರರು 95,600, ಮಹಿಳಾ ಮತದಾರರು 91,509, ಇತರರು 2 ಸೇರಿ ಒಟ್ಟು 1,87,111. ಹೊಳಲ್ಕೆರೆ ಮತದಾನ ಕೇಂದ್ರಗಳು 294, ಪುರುಷ ಮತದಾರರು 1,14,127, ಮಹಿಳಾ ಮತದಾರರು 1,10,259, ಇತರರು 7 ಸೇರಿ ಒಟ್ಟು 2,24,393 ಮತದಾರರಿದ್ದಾರೆ ಎಂದು ವಿವರಿಸಿದರು.
ಮೇ 12 ರಂದು ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಚುನಾವಣೆಗಾಗಿ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕೇಂದ್ರಗಳನ್ನು ಗುರುತಿಸಲಾಗಿದೆ. ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಹಾಗೂ ಡಿ-ಮಸ್ಟರಿಂಗ್ ಕೇಂದ್ರ ಸರ್ಕಾರಿ ಪದವಿಪೂರ್ವ ಕಾಲೇಜು ಮೊಳಕಾಲ್ಮೂರು, ಚಳ್ಳಕೆರೆ ಕ್ಷೇತ್ರದಲ್ಲಿ ಎಚ್ ಪಿಪಿಸಿ ಕಾಲೇಜು ಚಳ್ಳಕೆರೆ, ಚಿತ್ರದುರ್ಗ ಕ್ಷೇತ್ರದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು ಚಿತ್ರದುರ್ಗ, ಹಿರಿಯೂರು ಕ್ಷೇತ್ರದ ಸೆಂಟ್ ಆನ್ಸ್ ಕಾನ್ವೆಂಟ್ ಶಾಲೆ ವೇದಾವತಿ ನಗರ ಹಿರಿಯೂರು, ಹೊಸದುರ್ಗ ಕ್ಷೇತ್ರದ ತಾಯಮ್ಮ ಎಡತೊರೆ ಸದ್ದಿವಾಲ್ ಲಿಂಗಯ್ಯ ಸರ್ಕಾರಿ ಪದವಿಪೂರ್ವ ಕಾಲೇಜು ಹೊಸದುರ್ಗ, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರಿ ಪ್ರಥಮದರ್ಜೆ ಕಾಲೇಜು ಹೊಳಲ್ಕೆರೆಯಲ್ಲಿ ತೆರೆಯಲಾಗಿದೆ.
ಜಿಪಂ ಸಿಇಒ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಪಿ.ಎನ್. ರವೀಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ್ ಜೋಶಿ ಹಾಗೂ ಅಪರ ಜಿಲ್ಲಾಧಿಕಾರಿ ಕೆ. ಸಂಗಪ್ಪ ಸುದ್ದಿಗೋಷ್ಠಿಯಲ್ಲಿದ್ದರು.
24 ಪ್ರಕರಣ ದಾಖಲು
ನೀತಿ ಸಂಹಿತೆ ಉಲ್ಲಂಘನೆಗೆ ಅಡಿ 24 ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇದೇ ಅವಧಿಯಲ್ಲಿ 25,724,44 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಯಾವುದೇ ದಾಖಲೆಗಳಿಲ್ಲದೆ ನಗದು ಸಾಗಣೆ ಮಾಡುತ್ತಿದ್ದ ವೇಳೆ ಎಫ್‌ಎಸ್‌ಟಿಯಿಂದ 23,23,200 ರೂ. ಹಾಗೂ ಚೆಕ್‌ಪೋಸ್ಟ್‌ಗಳಲ್ಲಿ 20,80,023 ರೂ. ಗಳನ್ನು ವಶಪಡಿಸಿಕೊಳ್ಳಲಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದಲ್ಲಿ 1077 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.