Advertisement

ಬಿಸಿಸಿಐನ ಕೆಲ ತಕರಾರಿನ ಮೇಲೆ ಪರಿಶೀಲನೆಗೆ ಸಿದ್ಧ: ಸುಪ್ರೀಂ

06:30 AM Jul 25, 2017 | |

ನವದೆಹಲಿ: ಬಿಸಿಸಿಐಗೆ ಆಡಳಿತಾತ್ಮಕ ಸುಧಾರಣೆ ಕುರಿತು ಸರ್ವೋಚ್ಚ ನ್ಯಾಯಾಲಯದಲ್ಲಿ ಸೋಮವಾರ ಮಹತ್ವದ ವಿಚಾರಣೆ ನಡೆಯಿತು. ನ್ಯಾಯಾಲಯದ ತೀರ್ಪಿನ ಕೆಲ ಅಂಶಗಳ ವಿರುದ್ಧ ಬಹಳ ದಿನಗಳಿಂದ ಹೋರಾಟ ಮಾಡುತ್ತಿದ್ದ ಬಿಸಿಸಿಐಗೆ ಸಂತೋಷ ನೀಡುವಂತಹ ಕೆಲ ಅಭಿಪ್ರಾಯವನ್ನು ನ್ಯಾಯಪೀಠ ವ್ಯಕ್ತಪಡಿಸಿದೆ. ಒಂದು ರಾಜ್ಯಕ್ಕೆ ಒಂದೇ ಮತರದ್ದು, ಮತ್ತೆ ಐದು ಮಂದಿಯ ಆಯ್ಕೆ ಸಮಿತಿಗೆ ಅವಕಾಶ ನೀಡುವುದು, ಪೂರ್ಣಕಾಲೀನ ಸದಸ್ಯ ಸಂಸ್ಥೆಗಳು, ಸಹಸದಸ್ಯಗಳಿಗೆ ಮಾನ್ಯತೆ ಕುರಿತ ಮನವಿಯನ್ನು ಪರಿಶೀಲಿಸುವುದಾಗಿ ನ್ಯಾಯಪೀಠ ತಿಳಿಸಿದೆ.

Advertisement

ಲೋಧಾ ಶಿಫಾರಸನ್ನು ಪರಿಗಣಿಸಿ 2016ರಲ್ಲಿ ಬಿಸಿಸಿಐಗೆ ಸಮಗ್ರ ಆಡಳಿತಾತ್ಮಕ ಸುಧಾರಣೆಯನ್ನು ಸರ್ವೋಚ್ಚ ನ್ಯಾಯಾಲಯ ಘೋಷಿಸಿತ್ತು. ಇದರಲ್ಲಿನ ಕೆಲ ಸಂಗತಿಗಳ ಕುರಿತು ಬಿಸಿಸಿಐ ಆರಂಭದಿಂದಲೂ ತನ್ನ ತಕರಾರು ಎತ್ತಿತ್ತು. ಇಲ್ಲಿಯವರೆಗೆ ಬಿಸಿಸಿಐ ಬೇಡಿಕೆಗೆ ಮಾನ್ಯತೆ ಸಿಕ್ಕಿರಲಿಲ್ಲ. ನ್ಯಾಯಪೀಠದ ಒತ್ತಾಯದ ಮೇರೆಗೆ ಬಿಸಿಸಿಐ ಪೂರ್ಣವಾಗಿ ತೀರ್ಪನ್ನು ಪ್ಪಿಕೊಳ್ಳಲು ಸಿದ್ಧವಾಗಿದೆ. ಆದರೆ ರಾಜ್ಯಸಂಸ್ಥೆಗಳು ಸುತಾರಾಂ ತಮ್ಮ ವಿರೋಧ ಮುಂದುವರಿಸಿವೆ.

ಇದರಿಂದ ಸರ್ವೋಚ್ಚ ನ್ಯಾಯಾಲಯ ನಿಯೋಜಿತ ಆಡಳಿತಾಧಿಕಾರಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ. ರಾಜ್ಯ ಸಂಸ್ಥೆಗಳ
ಅಭಿಪ್ರಾಯದ ಕುರಿತು ತುಸು ಮೃದು ಧೋರಣೆ ತೋರಿದ್ದಾರೆ. ನ್ಯಾಯಾಲಯವೂ ಇದಕ್ಕೆ ಸ್ಪಂದಿಸಿರುವುದರಿಂದ ಬಿಸಿಸಿಐ ನಿರಾಳೆಗೊಂಡಿದೆ. ಮುಂದಿನ ವಿಚಾರಣೆ ಆ.18ಕ್ಕೆ ನಡೆಯಲಿದೆ.

ಯಾವುದಕ್ಕೆಲ್ಲ ನ್ಯಾಯಪೀಠದ “ವಿನಾಯ್ತಿ’?: ನ್ಯಾಯಾಲಯದ ತೀರ್ಪಿನಲ್ಲಿ ಐದು ಮಂದಿಯ ಬಿಸಿಸಿಐ ಆಯ್ಕೆ ಸಮಿತಿಯನ್ನು ರದ್ದು ಮಾಡಲು ಹೇಳಿ ಮೂವರನ್ನು ಮಾತ್ರ ನೇಮಿಸಲು ಹೇಳಿತ್ತು. ಹೀಗಾದರೆ ಆಯ್ಕೆ ಬಹಳ ಕಷ್ಟ ಎನ್ನುವುದು ಬಿಸಿಸಿಐ ಅಭಿಪ್ರಾಯ. ಇಂದು ಕ್ರಿಕೆಟ್‌ ಪಂದ್ಯಗಳು ನಡೆಯುತ್ತಿರುವ ಪ್ರಮಾಣ ಗಮನಿಸಿದಾಗ ಬಿಸಿಸಿಐ ಬೇಡಿಕೆ ಸಾಧುವೆಂದು ನ್ಯಾಯಾಲಯ ಹೇಳಿದೆ.

ಒಂದು ರಾಜ್ಯಕ್ಕೆ ಒಂದೇ ಮತ ಭಾರತದಂತಹ ದೇಶದಲ್ಲಿ ಒಳ್ಳೆಯ ಯೋಚನೆಯಲ್ಲ ಎಂದು ನ್ಯಾಯಪೀಠವೇ ಅಭಿಪ್ರಾಯಪಟ್ಟಿದೆ. ಮಹಾರಾಷ್ಟ್ರ, ಬರೋಡಾ, ರೈಲ್ವೇಸ್‌, ಯೂನಿವರ್ಸಿಟೀಸ್‌ಗಳ ಅಭಿಪ್ರಾಯ ನಮಗೂ ಅರ್ಥವಾಗಿದೆ. ಇದನ್ನೂ ಮುಂದೆ ಪರಿಶೀಲಿಸುತ್ತೇವೆಂದು ನ್ಯಾಯಪೀಠ ಹೇಳಿದೆ. ಆದರೆ ಯಾವ ಸಂಸ್ಥೆಗಳಿಗೆ ಪೂರ್ಣ ಸದಸ್ಯತ್ವ ನೀಡಬೇಕು, ಯಾವುದಕ್ಕೆ ನೀಡಬಾರದು ಎಂಬ ಪ್ರಶ್ನೆಗಳ ಕುರಿತು ಚರ್ಚೆ ಮುಂದುವರಿದಿದೆ.

Advertisement

ಬಿಸಿಸಿಐನ ಇನ್ನೊಂದು ಮಹತ್ವದ ಬೇಡಿಕೆಯಾದ 3 ವರ್ಷಗಳ ನಂತರ ಪದಾಧಿಕಾರಿಗಳಿಗೆ ಕಡ್ಡಾಯ ವಿಶ್ರಾಂತಿಯನ್ನು ರದ್ದು ಮಾಡುವುದರ ಕುರಿತು ನ್ಯಾಯಾಲಯದ ಅಭಿಪ್ರಾಯ ಹೊರಬಿದ್ದಿಲ್ಲ.

ಬಿಸಿಸಿಐ ಸಭೆಯಲ್ಲಿ ಭಾಗವಹಿಸಬೇಡಿ: ಶ್ರೀನಿ, ಶಾಗೆ ತಾಕೀತು ನ್ಯಾಯಾಲಯದ ತೀರ್ಪಿನ ಪ್ರಕಾರ ಅನರ್ಹಗೊಂಡಿದ್ದರೂ ಬಿಸಿಸಿಐ ಪಾಲ್ಗೊಳ್ಳುತ್ತಿರುವ ಬಿಸಿಸಿಐ ಪದಚ್ಯುತ ಅಧ್ಯಕ್ಷ ಶ್ರೀನಿವಾಸನ್‌,ಮಾಜಿ ಕಾರ್ಯದರ್ಶಿ ನಿರಂಜನ್‌ ಶಾ ಬಗ್ಗೆ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಜು.26ರ ಬಿಸಿಸಿಐ ಸಭೆಯಲ್ಲಿ ಪಾಲ್ಗೊಳ್ಳಬೇಡಿ ಎಂದಿದೆ. ತಾಂತ್ರಿಕವಾಗಿ ಶ್ರೀನಿ ಹೇಳುವುದು ಸರಿಯಿದೆ. ಆದರೆ ಅದನ್ನೇ ಇಟ್ಟುಕೊಂಡು ಆದೇಶವನ್ನು ಉಲ್ಲಂಘಿಸಬಾರದು ಎಂದು ಸ್ಪಷ್ಟಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next