ಕೋವಿಡ್ 19 ಮಹಾಮಾರಿ ವಿರುದ್ಧ ಹೋರಾಡಲು ಈಗಾಗಲೆ ಹಲವು ನಟ, ನಟಿಯರು ಕಲಾವಿದರು ತಮ್ಮ ಕೈಲಾದ ರೀತಿಯಲ್ಲಿ ಹಲವು ಸಹಾಯ ಮಾಡುತ್ತಿದ್ದಾರೆ. ಈಗ ಅದೇ ರೀತಿ ನಟಿ ಶಾನ್ವಿ ಶ್ರೀವಾಸ್ತವ್ ಕೂಡ ಸಹಾಯಕ್ಕೆ ಮುಂದಾಗಿದ್ದಾರೆ.
ಸದ್ಯ ಫೇಸ್ಬುಕ್ ಮೂಲಕ ಸಹಾಯ ಮಾಡಲು ಮುಂದಾಗಿರುವ ಶಾನ್ವಿ, ರೂರಲ್ ಹೆಲ್ತ್ ಕೇರ್ ಫೌಂಡೇಶನ್‌ನ ಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಫೇಸ್ಬುಕ್‌ನಲ್ಲಿ ಆನ್‌ಲೆ„ನ್ ಮೂಲಕ ಇತರರು ದಾನ ನೀಡುವಂತೆ ಸಂಸ್ಥೆ ಮನವಿ ಮಾಡಿದ್ದು, ಗ್ರಾಮೀಣ ಭಾಗದ ಜನರಿಗೆ ನೇರವಾಗಿ ಸಹಾಯ ತಲುಪಬೇಕೆಂಬ ಉದ್ದೇಶದಿಂದ ಶಾನ್ವಿ ಈ ಸಂಸ್ಥೆಯ ಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ತಮ್ಮ ಸ್ನೇಹಿತರು, ಅಭಿಮಾನಿಗಳೂ ಸಹ ದಾನ ನೀಡುವಂತೆ ಕರೆ ನೀಡಿದ್ದಾರೆ. ಈ ಮೂಲಕ ಫಂಡ್ ಸಂಗ್ರಹಕ್ಕೆ ಮುಂದಾಗಿದ್ದಾರೆ.
ಮೂಲತಃ ಉತ್ತರ ಪ್ರದೇಶದ ವಾರಾಣಸಿಯ ಶಾನ್ವಿ ಸದ್ಯ ಕನ್ನಡ ಚಿತ್ರರಂಗದಲ್ಲಿ ಭದ್ರವಾಗಿ ನೆಲೆ ಕಂಡುಕೊಂಡಿದ್ದಾರೆ. ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ಹತ್ತಾರು ಸಿನಿಮಾಗಳನ್ನು ಮಾಡುವ ಮೂಲಕ ಗುರುತಿಸಿಕೊಂಡಿರುವ ಶಾನ್ವಿ, ತಮ್ಮ ನಟನೆ ಮೂಲಕವೇ ಕನ್ನಡಿಗರನ್ನು ಸೆಳೆದಿದ್ದಾರೆ. ಸ್ಯಾಂಡಲ್‌ವುಡ್ ಪ್ರಸಿದ್ಧ ನಟರೊಂದಿಗೆ ಶಾನ್ವಿ ತೆರೆ ಹಂಚಿಕೊಂಡಿದ್ದು, ಇತ್ತೀಚೆಗೆ ಶ್ರೀಮನ್ನಾ ರಾಯಣ ಚಿತ್ರದಲ್ಲೂ ಮೋಡಿ ಮಾಡಿದ್ದಾರೆ.
ಆದರೆ ಇದೀಗ ಲಾಕ್‌ಡೌನ್ ಆಗಿರುವುದರಿಂದ ಮನೆಯಲ್ಲೇ ಕಾಲ ಕಳೆಯುತ್ತಿರುವ ಶಾನ್ವಿ, ಈ ವೇಳೆ ಒಂದಷ್ಟು ಸಾಮಾಜಿಕ ಕೆಲಸಗಳಿಗೂ ಮುಂದಾಗಿದ್ದಾರೆ. ಇನ್ನು, ನಟಿ ಶಾನ್ವಿ ಶ್ರೀವಾತ್ಸವ್ ಕೂಡಾ ಲಾಕ್‌ಡೌನ್ ವೇಳೆಯನ್ನು ಸದುಪಯೋಗಪಡಿಸುತ್ತಿದ್ದಾರೆ. ಅದು ಓದು, ಪೆಂಟಿಂಗ್ ಹಾಗೂ ಸಿನಿಮಾ ನೋಡುವ ಮೂಲಕ. ಶಾನ್ವಿಗೆ ಓದುವ ಹವ್ಯಾಸದ ಜೊತೆಗೆ ಪೆಂಟಿಂಗ್ ಕ್ರೇಜ್ ಕೂಡಾ ಇದೆಯಂತೆ. ಆದರೆ ಚಿತ್ರೀಕರಣದಲ್ಲಿ ಬಿಝಿಯಾಗಿ ಇದ್ದ ಕಾರಣ ಓದಿನ ಕಡೆಗೆ ಹೆಚ್ಚಿನ ಗಮನ ಕೊಡಲು ಸಾಧ್ಯವಾಗುತ್ತಿರಲಿಲ್ಲ. ಈಗ ಶಾನ್ವಿ ತಮಗೆ ಇಷ್ಟವಾದ ಪುಸ್ತಕಗಳನ್ನು ಓದುವುದರಲ್ಲಿ ಬಿಝಿಯಾಗಿದ್ದಾರೆ. ಅವರಿಗೆ ಮೈಥಲಾಜಿಕಲ್ ಪುಸ್ತಕಗಳೆಂದರೆ ಇಷ್ಟವಂತೆ. ಅಮಿತ್ ತ್ರಿಪಾಠಿಯವರ ಪುಸ್ತಕಗಳೆಂದರೆ ಇಷ್ಟವಂತೆ. ಸದ್ಯ ಅವರ ಪುಸ್ತಕಗಳನ್ನು ಓದಲು ಶಾನ್ವಿ ಆರಂಭಿಸಿದ್ದಾರಂತೆ. ಈ ನಡುವೆಯೇ ಶಾನ್ವಿ 70-80ರ ದಶಕದ ಸಿನಿಮಾಗಳನ್ನು ನೋಡುತ್ತಿದ್ದಾರಂತೆ. ಕನ್ನಡ, ಹಿಂದಿ ಸೇರಿದಂತೆ ಬೇರೆ ಬೇರೆ ಭಾಷೆಯ ಸಿನಿಮಾಗಳನ್ನು ನೋಡಿ ಖುಷಿ ಪಡುತ್ತಿದ್ದಾರಂತೆ. ಇನ್ನು, ಶಾನ್ವಿಗೆ ಲಾಕ್‌ಡೌನ್‌ನಿಂದಾಗಿ ತಮ್ಮ ಹವ್ಯಾಸಕ್ಕಾಗಿ ಸಮಯ ಸಿಕ್ಕ ಖುಷಿ ಇದೆ.
ಶಾನ್ವಿ ಕನ್ನಡದ ಬಹುತೇಕ ಸ್ಟಾರ್ ನಟರ ಚಿತ್ರಗಳಲ್ಲಿ ನಟಿಸಿದ್ದಾರೆ. ರಕ್ಷಿತ್ ಶೆಟ್ಟಿ ನಾಯಕರಾಗಿರುವ “ಅವನೇ ಶ್ರೀಮನ್ನಾರಾಯಣ’ ಚಿತ್ರದಲ್ಲೂ ಶಾನ್ವಿ ನಾಯಕಿ. ಈ ಚಿತ್ರಕ್ಕಾಗಿ ಶಾನ್ವಿ ಕನ್ನಡ ಕಲಿತು ಡಬ್ ಮಾಡಿದ್ದರು. ಕನ್ನಡ ಚಿತ್ರರಂಗದಲ್ಲಿದ್ದು, ಕನ್ನಡ ಕಲಿಯಬೇಕೆಂಬ ಬಯಕೆಯಿಂದ ಕನ್ನಡ ಕಲಿತಿದ್ದಾರೆ ಶಾನ್ವಿ.