Advertisement

ಒಂದು ಗಂಟೆ ಪಾಠಕ್ಕೆ ಎರಡು ಗಂಟೆ ಓದ್ಕೋ…….

10:53 PM Jul 22, 2019 | mahesh |

ರಾಜರತ್ನಂರ ಅಧ್ಯಾಪಕ ಜೀವನದ ಕಡೆಯ ಬ್ಯಾಚಿನ ವಿದ್ಯಾರ್ಥಿಯಾಗಿದ್ದವರು ಶ್ರೀನಿವಾಸರಾಜು. ಅವರಿಗೆ ಕಾಲೇಜಿನಲ್ಲಿ ಅಧ್ಯಾಪಕರಾಗಿ ನೌಕರಿ ದೊರೆಯಿತು. ಆ ಖುಷಿಯನ್ನು ರಾಜರತ್ನಂ ಅವರಿಗೆ ತಿಳಿಸಿದರು. ಶಿಷ್ಯನನ್ನು ಆಶೀರ್ವದಿಸಿದ ರಾಜರತ್ನಂ, ಮೂರು ವಿಷಯಗಳನ್ನು ಸದಾ ನೆನಪಿಡುವಂತೆ ಹೇಳಿದರು. ಅವು ಹಿಗೀವೆ:

Advertisement

1. ಒಂದು ಗಂಟೆ ಪಾಠ ಮಾಡಬೇಕಾದರೆ, ಎರಡು ಗಂಟೆ ಪಾಠಕ್ಕೆ ಸಿದ್ಧವಾಗಿರು. ಈ ಮೇಷ್ಟ್ರು ಅನ್ನಿಸಿಕೊಂಡವನಿಗೆ ತಲೆ ಬೇಗ ಖಾಲಿಯಾಗಬಾರದು.
2. ನೀನು ಮಾಡುವ ಪಾಠಗಳಿಗೆ ಟಿಪ್ಪಣಿ ತಯಾರಿಸು. ಪಾಠ ಮುಗಿದ ಮೇಲೆ ಅದನ್ನು ಹರಿದು ಹಾಕು. ಅದನ್ನೇ ಇಟ್ಟುಕೊಂಡರೆ, ಮತ್ತೆ ಪುಸ್ತಕ ಓದಲು ಮನಸ್ಸು ಬ ರುವುದಿಲ್ಲ . ಹೊಸ ವಿಷಯಗಳ ಕಡೆ ಮನಸ್ಸು ಹರಿಯುವುದಿಲ್ಲ.
3. ನೀನು ಮೇಸ್ಟ್ರೆ. ನಿಯತ್ತಾಗಿ ಪಾಠ ಮಾಡು. ಪಡೆದ ಸಂಬಳ ಜೀರ್ಣವಾಗಬೇಕು. ವಿದ್ಯಾರ್ಥಿಗಳ ಉತ್ಸಾಹವನ್ನು ಎಂದೂ ಕುಗ್ಗಿಸಬೇಡ. ತರಗತಿ ಮುಗಿದ ನಂತರ ಬೋರ್ಡ್‌ ಮೇಲೆ ಬರೆದಿದ್ದನ್ನೂ ಚನ್ನಾಗಿ ಅಳಿಸಿ ಬಾ.
ರಾಜರತ್ನಂ ಹೇಳಿದ್ದನ್ನು ಶ್ರೀನಿವಾಸರಾಜು ಅವರು ಬದುಕಿನುದ್ದಕ್ಕೂ ಪಾಲಿಸಿಕೊಂಡು ಬಂದರು. ಇಂಥ ಗುರು-ಶಿಷ್ಯರು ಈಗ ಎಲ್ಲಾದರೂ ಸಿಗ್ತಾರಾ?

Advertisement

Udayavani is now on Telegram. Click here to join our channel and stay updated with the latest news.

Next