Advertisement

ಕಾಲಹರಣ ಮಾಡದೆ ಪುಸ್ತಕ ಓದಿ; ವಿದ್ಯಾರ್ಥಿಗಳಿಗೆ ಪ್ರೌಢಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರ ಸೂಚನೆ

01:12 PM Jul 31, 2020 | mahesh |

ದೇವನಹಳ್ಳಿ: ಕೋವಿಡ್ ವಿಶ್ವವನ್ನೇ ತಲ್ಲಣಗೊಳಿಸಿದ್ದು, ಮಕ್ಕಳು ಮನೆಯಲ್ಲಿ ಕಾಲಹರಣ ಮಾಡದೇ ಪಠ್ಯ ಪುಸ್ತಕ ಓದುವಂತೆ ಆಗಬೇಕು ಎಂದು ಪ್ರೌಢಶಾಲಾಭಿವೃದ್ಧಿ ಸಮಿತಿ
ಅಧ್ಯಕ್ಷ ಲಕ್ಷ್ಮೀ ನಾರಾಯಣ್‌ (ಲಚ್ಚಿ) ತಿಳಿಸಿದರು. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಪ್ರೌಢಶಾಲಾ ಮಕ್ಕಳಿಗೆ 2020-21ನೇ ಶೈಕ್ಷಣಿಕ
ಸಾಲಿನ ಪಠ್ಯಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ಮಕ್ಕಳು ಮತ್ತು ಹಿರಿಯರಿಗೆ ಹೆಚ್ಚು ಕೋವಿಡ್ ತೊಂದರೆ ನೀಡುತ್ತಿದೆ. ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸಾಧ್ಯವಾದಷ್ಟು ಮನೆಯಲ್ಲಿಯೇ ಇರಬೇಕು. ಪ್ರತಿನಿತ್ಯ
ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಶಿಕ್ಷಕರು ನೀಡುತ್ತಿರುವ ಪ್ರವಚನ ಅರ್ಥ ಮಾಡಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಉಪ ಪ್ರಾಂಶುಪಾಲ ಬಸವರಾಜ್‌, ಕೆಂಚನಗೌಡ ಮಾತನಾಡಿ, ಶೈಕ್ಷಣಿಕ ಚಟುವಟಿಕೆ ಜೂನ್‌ನಿಂದ ಪ್ರಾರಂಭವಾಗಬೇಕಿತ್ತು. ಇಡೀ ವಿಶ್ವದೆಲ್ಲೆಡೆ, ವ್ಯಾಪಿಸಿರುವ
ಮಾರಕ ಕೊರೊನಾ ಪರಿಣಾಮದಿಂದ ವಿಳಂಬವಾಗುತ್ತಿದ್ದು, ಸರ್ಕಾರದ ಆದೇಶದಂತೆ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ವಿತರಿಸಿ, ಭವಿಷ್ಯದ ಕಲಿಕೆಗೆ
ಅಡ್ಡಿಯಾಗಬಾರದೆಂಬ ಉದ್ದೇಶವನ್ನು ಇಲಾಖೆ ಹೊಂದಿದೆ.

ಪ್ರೌಢಶಾಲಾ ಪಠ್ಯಕ್ರಮದ ವಿಶೇಷ ಬೋಧನೆ ಪ್ರತಿದಿನ ಚಂದನ ವಾಹಿನಿಯಲ್ಲಿ ನುರಿತ ಶಿಕ್ಷಕರಿಂದ ವಿಷಯವಾರು ಪಠ್ಯ ನಡೆಯುತ್ತದೆ. ವಾಹಿನಿಯಲ್ಲಿ ಬೋಧಿಸುವ ವಿಷಯಗಳ ಬಗ್ಗೆ ಸಮಸ್ಯೆ ಇದ್ದರೆ ತರಗತಿ ಶಿಕ್ಷಕರನ್ನು ಸಂಪರ್ಕಿಸಿ ಬಗೆಹರಿಸಿಕೊಳ್ಳಬಹುದು ಎಂದರು. ಹಿರಿಯ ಶಿಕ್ಷಕ ಶರಣಯ್ಯ ಹಿರೇಮಮಠ , ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಅಣ್ಣಪ್ಪ, ಎಸ್‌.ಮಹೇಶ್‌, ಶಿಕ್ಷಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next