ಬೆಂಗಳೂರು: ಆರ್ ಎಸ್ ಎಸ್ ನವರು ಭಾರತೀಯರಲ್ಲ ಎಂದು ಹೇಳಿ ಸಿದ್ದರಾಮಯ್ಯ ಅವರು ಸ್ವಯಂ ಸೇವಕರು, ಕಾರ್ಯಕರ್ತರ ಭಾವನೆಗೆ ನೋವು ತಂದಿದ್ದಾರೆ ಎಂದು ಕುಡುಚಿಯ ಬಿಜೆಪಿ ಶಾಸಕ ಪಿ. ರಾಜೀವ್ ಆಕ್ರೋಶ ಹೊರ ಹಾಕಿದ್ದಾರೆ.
ಆರ್ ಟಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಅವಕಾಶಕ್ಕೆ ತಕ್ಕಂತೆ ಮಾತನಾಡುವ ರಾಜಕಾರಣಿ ಸಿದ್ದರಾಮಯ್ಯ, ಸತ್ಯ ತಿಳಿದುಕೊಳ್ಳಲು ಆರ್ ಎಸ್ ಎಸ್ ಶಾಖೆಗೆ ಹೋಗಲಿ. ನನ್ನ ಹೆಸರಲ್ಲೆ ರಾಮ ಇದ್ದಾನೆ ಅಂತ ಆಗಾಗ ಹೇಳುತ್ತಾರೆ, ಕಾಂಗ್ರೆಸ್ ಪಕ್ಷ ಶುರು ಮಾಡಿದ್ದು ಬ್ರಿಟಿಷ್ ಅಧಿಕಾರಿ ಎ ಓ ಹ್ಯೂಮ್. ಆರ್ ಎಸ್ ಎಸ್ ಹುಟ್ಟಿದ್ದು ಈ ಮಣ್ಣಿನಲ್ಲಿ ಎಂದರು.
ಲಿಂಗಾಯತ – ವೀರಶೈವ ಅಂತ ಮಾಡಿ ಸಮಾಜ ಒಡೆಯೋಕೆ ಹೋಗಿ ಕೈ ಸುಟ್ಡುಕೊಂಡಿದ್ದೀರಿ,ಈಗ ಆರ್ಯ- ದ್ರಾವಿಡ ಅಂತ ಒಡೆದು ಸುಟ್ಟುಕೊಳ್ಳುತ್ತಿದ್ದೀರಿ. ಅಂಬೇಡ್ಕರ್‌ರವರ ಹೂ ಇಸ್ ಶೂದ್ರ ಅನ್ನುವ ಪುಸ್ತಕದಲ್ಲಿ ಆರ್ಯ- ದ್ರಾವಿಡ ಅಂತ ಬರೆದಿಲ್ಲ. ಆರ್ ಎಸ್ ಎಸ್ ಶಾಖೆಯಲ್ಲಿ ಜಾತಿಯತೆ ನಡೆಯುವುದಿಲ್ಲ ಎಂದರು.
ಇದನ್ನೂ ಓದಿ : ರಾಜ್ಯಸಭೆ ಚುನಾವಣೆ: ಕಾಂಗ್ರೆಸ್ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಖಾನ್
ಮೆಕಾಲೆ ಶಿಕ್ಷಣ ಪದ್ದತಿ ದೇಶದ ಸಂಸ್ಕೃತಿಯನ್ನು ಹಾಳು ಮಾಡಿದೆ. ಸಿದ್ದರಾಮಯ್ಯನವರು ಸಿಎಂ ಕುರ್ಚಿ ವ್ಯಾಮೋಹದಿಂದ ಒಡೆದು ಆಳುವ ಪ್ರಯತ್ನ ಮಾಡುತ್ತಿದ್ದರೆ ಆ ಆಸೆಯನ್ನು ಬಿಡಬೇಕು. ವಯಸ್ಸಿನಲ್ಲಿ ಚಿಕ್ಕವನಾದರೂ ಸಿದ್ದರಾಮಯ್ಯನವರಿಗೆ ಈ ಮಾತು ಹೇಳುತ್ತೇನೆ ಎಂದರು.