Advertisement

ಪೌರಕಾರ್ಮಿಕರ ಮರು ನೇಮಿಸಿ

09:59 AM Jun 14, 2018 | Team Udayavani |

ಶಹಾಬಾದ: ನಗರಸಭೆಯಿಂದ ತೆಗೆದು ಹಾಕಿದ ದಿನಗೂಲಿ ಪೌರಕಾರ್ಮಿಕರು ಹಾಗೂ ವಿವಿಧ ಹಂತದ ಸಿಬ್ಬಂದಿಗಳನ್ನು ಕೆಲಸಕ್ಕೆ ತೆಗೆದುಕೊಂಡು ಕಾಯಂಗೊಳಿಸಬೇಕೆಂದು ಒತ್ತಾಯಿಸಿ ಬುಧವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರಸಭೆ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು.

Advertisement

ನಂತರ ಮಾತನಾಡಿದ, ಕರ್ನಾಟಕ ರಾಜ್ಯ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಕೃಷ್ಣಪ್ಪ ಕರಣಿಕ್‌   ಜಿಲ್ಲೆಯಲ್ಲಿಯೇ ದೊಡ್ಡ ನಗರವಾದ ಶಹಾಬಾದನಲ್ಲಿ ಸುಮಾರು 50 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆಯಿದೆ. ಅಲ್ಲದೇ ಜಿಲ್ಲೆಯಲ್ಲಿಯೇ ಏಕೈಕ ನಗರಸಭೆ ಹೊಂದಿದೆ. ರಾಜ್ಯ ಪೌರಾಡಳಿತ ಇಲಾಖೆ ನಗರಸಭೆಗೆ ನೂರು ಜನ ಪೌರಕಾರ್ಮಿಕರು, ಕರವಸೂಲಿಗಾರರು, ವಾಲ್‌ ಮ್ಮಾನಗಳು  ಹಾಗೂ ವಿವಿಧ ಹಂತದ ಸಿಬ್ಬಂದಿಗಳನ್ನು ತುಂಬಬೇಕೆಂಬ ಆದೇಶವಿದೆ.

ಆದರೆ ಇಲ್ಲಿನ ಪೌರಾಯುಕ್ತರ ಬೇಜವಾಬ್ದಾರಿತನದಿಂದ ಸುಮಾರು 17-18 ವರ್ಷಗಳಿಂದ ದಿನಗೂಲಿ ನೌಕರರಾಗಿ
ಕೆಲಸ ಮಾಡಿದ ಪೌರಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಇದರಿಂದ ಪೌರಕಾರ್ಮಿಕರ ಬದುಕು ಬೀದಿ
ಪಾಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಪ್ರಭಾರಿ ಪ್ರೊಜೆಕ್ಟ್ ಡೈರಕ್ಟರ್‌ ಶಿವನಗೌಡ ಸತ್ಯಾಗ್ರಹ ಸ್ಥಳಕ್ಕೆ ಬೇಟಿ ನೀಡಿ, ಪೌರಕಾರ್ಮಿರ
ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಜತೆ ಮಾತನಾಡಿ ವಾಸ್ತವ ಸ್ಥಿತಿಯ ಬಗ್ಗೆ ವಿವರಿಸುತ್ತೇನೆ. ಗುರುವಾರ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಿಯೋಗದೊಂದಿಗೆ ಬಂದು ಮಾತನಾಡಿ, ನಿಮ್ಮ ಸಮಸ್ಯೆ ಪರಿಹರಿಸುತ್ತಾರೆ ಎಂದರು. ಪಟ್ಟು ಬಿಡದ ಪ್ರತಿಭಟನಾಕಾರರು ಲಿಖೀತವಾಗಿ ಬರೆದುಕೊಡಿ ಆಗ ಮಾತ್ರ ಸತ್ಯಾಗ್ರಹ ಕೈಬಿಡುತ್ತೇವೆ ಎಂದರು. ಆಗ ಪಿಡಿ ಶಿವನಗೌಡ ಅವರು ಲಿಖೀತವಾಗಿ ಬರೆದು ಕೊಟ್ಟ ನಂತರ ಸತ್ಯಾಗ್ರಹವನ್ನು ಮುಖಂಡರು ಕೈಬಿಟ್ಟರು. 

ಪೌರಾಯುಕ್ತ ಬಿ.ಬಸಪ್ಪ, ನಗರಸಭೆ ಅಧ್ಯಕ್ಷೆ ಗೀತಾಸಾಹೇಬಗೌಡ ಬೋಗುಂಡಿ, ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಕುಸಾಳೆ, ಡಾ| ರಶೀದ್‌ ಮರ್ಚಂಟ್‌, ದಸಂಸ ಮುಖಂಡರಾದ ಮಹಾದೇವ ತರನಳ್ಳಿ, ನಗರಸಭೆ ಸದಸ್ಯರಾದ ರಾಮಕುಮಾರ ಸಿಂಘೆ, ಮಲ್ಲಿಕಾರ್ಜುನ ಜಲಂಧರ್‌,ಶರಣಬಸಪ್ಪ ಪಗಲಾಪುರ, ಸೂರ್ಯಕಾಂತ ಕೋಬಾಳ, ಡಾ| ಅಹ್ಮದ್‌ ಪಟೇಲ್‌ ಹಾಗೂ ಪೌರಕಾರ್ಮಿಕರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next