Advertisement

AI News: ರೈಲು ಚಾಲಕ ತೂಕಡಿಸಿದರೆ ಎಚ್ಚರಿಸಲಿದೆ RDAS

07:52 PM Sep 10, 2023 | Team Udayavani |

ನವದೆಹಲಿ: ಸಂಚಾರ ಸಮಯದಲ್ಲಿ ರೈಲು ಚಾಲಕರು ತೂಕಡಿಸುತ್ತಿದ್ದರೆ ಅವರನ್ನು ಎಚ್ಚರಿಸುವ ಕೃತಕ ಬುದ್ಧಿಮತ್ತೆ(ಎಐ) ಆಧಾರಿತ ಸಾಧನವನ್ನು ಈಶಾನ್ಯ ಗಡಿ ರೈಲ್ವೆಯು(ಎನ್‌ಎಫ್ಆರ್‌) ಅಭಿವೃದ್ಧಿಪಡಿಸುತ್ತಿದೆ. ಒಂದು ವೇಳೆ ಆಗಲೂ ರೈಲು ಚಾಲಕ ಎಚ್ಚರಗೊಳ್ಳದಿದ್ದರೆ ಸಾಧನವು ರೈಲನ್ನು ತುರ್ತಾಗಿ ಸ್ಥಗಿತಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ.

Advertisement

ರೈಲು ಅಪಘಾತಗಳನ್ನು ತಡೆಯಲು ಈ ಸಾಧನವು ಉಪಯಕ್ತವಾಗಲಿದೆ. ಚಾಲಕ ತೂಕಡಿಸಿದರೆ, ಈ ವೇಳೆ ಆತನನ್ನು ಎಚ್ಚರಗೊಳಿಸುವ ಸಾಧನ ಅಭಿವೃದ್ಧಿಪಡಿಸುವಂತೆ ರೈಲ್ವೆ ಮಂಡಳಿಯು ಜೂನ್‌ನಲ್ಲಿ ಎನ್‌ಎಫ್ಆರ್‌ಗೆ ಸೂಚಿಸಿತ್ತು.

ಈ ಸಾಧನಕ್ಕೆ “ರೈಲ್ವೆ ಡ್ರೈವರ್‌ ಅಸಿಸ್ಟೆನ್ಸ್‌ ಸಿಸ್ಟಮ್‌'(ಆರ್‌ಡಿಎಎಸ್‌) ಎಂದು ಹೆಸರಿಡಲಾಗಿದೆ. ರೈಲು ಚಾಲಕರು ತೂಕಡಿಸುವಾಗ ಈ ಸಾಧನವು ಎಚ್ಚರಿಕೆಯ ಗಂಟೆ(ಅಲಾರಾಮ್‌) ಬಾರಿಸಲಿದೆ. ಒಂದು ವೇಳೆ ಕೆಲವು ಸಮಯದವರೆಗೆ ಚಾಲಕ ಎಚ್ಚರಗೊಳ್ಳದಿದ್ದರೆ, ಆಗ ತುರ್ತು ಬ್ರೇಕ್‌ ಹಾಕಲಿದೆ ಎಂದು ಮೂಲಗಳು ತಿಳಿಸಿವೆ.

ಆರ್‌ಡಿಎಎಸ್‌ ಅಭಿವೃದ್ಧಿ ಹಂತದಲ್ಲಿದೆ. ಅದರ ಸರಿಯಾದ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಪ್ರಯೋಗಗಳು ನಡೆಯುತ್ತಿವೆ. ಎನ್‌ಎಫ್ಆರ್‌ ತಾಂತ್ರಿಕ ತಂಡವು ಈ ಕಾರ್ಯದಲ್ಲಿ ಮಗ್ನವಾಗಿದ್ದು, ಮುಂದಿನ ಕೆಲವೇ ವಾರಗಳಲ್ಲಿ ಪ್ರಯೋಗಗಳು ಪೂರ್ಣಗೊಳ್ಳಲಿದೆ. ನಂತರ ಇವುಗಳನ್ನು ಹಂತ-ಹಂತವಾಗಿ ರೈಲುಗಳಿಗೆ ಅಳವಡಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next