ಬೆಂಗಳೂರು: ಪ್ರತಿ ಬಾರಿಯಂತೆ ಈ ಸಲವೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗೋ ಗ್ರೀನ್ ಅಭಿಯಾನಕ್ಕೆ ಬೆಂಬಲ ನೀಡುತ್ತಿದೆ. ಅದರಂತೆ ಹಸಿರು ಜೆರ್ಸಿಯಲ್ಲಿ ಒಂದು ಪಂದ್ಯವನ್ನು ಆಡಲಿದೆ.
ಈ ಬಗ್ಗೆ ಟ್ವಿಟ್ಟರ್ ನಲ್ಲಿ ಆರ ಸಿಬಿ ಪ್ರಕಟಿಸಿದೆ. ಆರ್‌ಸಿಬಿಯ ಗ್ರೀನ್ ಗೇಮ್ ಏಪ್ರಿಲ್ 23 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆಯಲಿದೆ.
ನಮ್ಮ ವಿಶೇಷ ಹಸಿರು ಜೆರ್ಸಿಗಳು 100% ಮರುಬಳಕೆಯ ವಸ್ತುಗಳಿಂದ ಮಾಡಲ್ಪಟ್ಟಿದೆ. ನೀವು ಈಗ ಆರ್ ಸಿಬಿ ವೆಬ್‌ಸೈಟ್ ಮತ್ತು ಅಪ್ಲಿಕೇಶನ್ ನಲ್ಲಿ ಜೆರ್ಸಿ ಪಡೆಯಬಹುದು. ಪರಿಸರದ ಸುಧಾರಣೆಗಾಗಿ ನಾವು ಈ ವರ್ಷ ಹಲವಾರು ಹಸಿರು ಉಪಕ್ರಮಗಳನ್ನು ಹೊಂದಿದ್ದೇವೆ ಮತ್ತು ನಮಗೆ ನಿಮ್ಮ ಬೆಂಬಲದ ಅಗತ್ಯವಿದೆ ಎಂದು ಆರ್ ಸಿಬಿ ಟ್ವೀಟ್ ಮಾಡಿದೆ.
ಇದನ್ನೂ ಓದಿ:Kajol:ಅಜಯ್ ದೇವಗನ್ ಭೇಟಿಯಾಗುವುದಕ್ಕೂ ಮೊದಲೇ ನಾನು ಬೇರೊಬ್ಬನೊಂದಿಗೆ ಡೇಟ್ ಮಾಡಿದ್ದೆ
ರಾಜಸ್ಥಾನ ರಾಯಲ್ಸ್ ವಿರುದ್ಧ ಏಪ್ರಿಲ್ 23ರಂದು ತಮ್ಮ ಸಾಂಪ್ರದಾಯಿಕ ಕೆಂಪು, ಕಪ್ಪು , ಬಂಗಾರದ ಬಣ್ಣದ ಜೆರ್ಸಿಯ ಬದಲು ಹಸಿರು ಬಣ್ಣದ ಜೆರ್ಸಿಯಲ್ಲಿ ಆಡಲಿದೆ. ಈ ಜೆರ್ಸಿಯನ್ನೂ ಆರ್ ಸಿಬಿ ಪ್ರಕಟ ಮಾಡಿದೆ.
2011 ರಿಂದ ಹಸಿರು ಮತ್ತು ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಆರ್ ಸಿಬಿ ತಮ್ಮ ‘ಗೋ ಗ್ರೀನ್’ ಅಭಿಯಾನದ ಭಾಗವಾಗಿ ಹಸಿರು ಜರ್ಸಿಯಲ್ಲಿ ಪ್ರತಿ ಸೀಸನ್ ನಲ್ಲಿ ಒಂದು ಪಂದ್ಯವನ್ನು ಆಡುತ್ತಿದೆ. 2021 ರಲ್ಲಿ, ಹಸಿರು ಜರ್ಸಿಯಲ್ಲಿ ಆಡುವ ಬದಲು, ತಂಡವು ಒಂದು ಪಂದ್ಯದಲ್ಲಿ ನೀಲಿ ಜರ್ಸಿಯಲ್ಲಿ ಆಡಿತ್ತು. ಕೋವಿಡ್ ಸಂಕಷ್ಟದ ಸಮಯದಲ್ಲಿ ಮುಂಚೂಣಿಯಲ್ಲಿರುವ ಕಾರ್ಮಿಕರಿಗೆ ಅವರ ತ್ಯಾಗ ಮತ್ತು ಕಠಿಣ ಪರಿಶ್ರಮದ ಸಮಯದಲ್ಲಿ ಗೌರವ ಸಲ್ಲಿಸಲು ತಂಡವು ನೀಲಿ ಜೆರ್ಸಿ ಧರಿಸಿ ಆಡಿತ್ತು.