Advertisement

ಬೆಂಗಳೂರು ಯಾವತ್ತೂ ನನ್ನ ತಂಡ..; ಮನ ಬಿಚ್ಚಿ ಮಾತನಾಡಿದ ಕ್ರಿಸ್ ಗೇಲ್

11:48 AM Dec 24, 2022 | Team Udayavani |

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಯಾವಾಗಲೂ ನಂ.1 ತಂಡವಾಗಿರುತ್ತದೆ ಎಂದು ಅನುಭವಿ ಬ್ಯಾಟರ್ ಕ್ರಿಸ್ ಗೇಲ್ ಹೇಳಿದ್ದಾರೆ.

Advertisement

ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಗಾಗಿ ಎರಡು ಋತುಗಳಲ್ಲಿ 16 ಪಂದ್ಯಗಳ ನಂತರ, ಗೇಲ್ 2011 ರ ಪಂದ್ಯಾವಳಿಯ ನಡುವಿನಲ್ಲಿ ಆರ್ ಸಿಬಿ ಕ್ಯಾಂಪ್ ಸೇರಿದ್ದರು.

ಅಲ್ಲಿಂದ ಮುಂದೆ, ಜಮೈಕಾ ಆಟಗಾರ ಹಿಂತಿರುಗಿ ನೋಡಲಿಲ್ಲ. 2013 ರಲ್ಲಿ, ಗೇಲ್ ಐಪಿಎಲ್ ಇತಿಹಾಸದಲ್ಲಿ ಔಟಾಗದೆ ಗರಿಷ್ಠ ವೈಯಕ್ತಿಕ ಸ್ಕೋರ್ 175 ದಾಖಲಿಸಿದರು.

ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಕೆಎಲ್ ರಾಹುಲ್ ಮತ್ತು ಇತರರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳಲು ನಾನು ಇಷ್ಟಪಡುತ್ತೇನೆ ಎಂದು ಗೇಲ್ ಹೇಳಿದ್ದಾರೆ.

ಇದನ್ನೂ ಓದಿ:ದುಬಾರಿ ಓಲಾ ಸ್ಕೂಟರ್‌ ಬಳಸಿಕೊಂಡು ಕ್ರಿಕೆಟ್‌ ಕಾಮೆಂಟ್ರಿ ಮಾಡಿದ ವ್ಯಕ್ತಿ.! ವಿಡಿಯೋ ವೈರಲ್

Advertisement

“ನಾನು ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಅವರೊಂದಿಗೆ ಮಾತ್ರವಲ್ಲದೆ ಫ್ರಾಂಚೈಸಿಯ ಇತರ ಆಟಗಾರರೊಂದಿಗೆ ಕೆಲವು ಉತ್ತಮ ಕ್ಷಣಗಳನ್ನು ಹೊಂದಿದ್ದೇನೆ. ಆರ್ ಸಿಬಿ ಯಲ್ಲಿ ನಾನು ಸರ್ಫರಾಜ್ ಖಾನ್, ಮಂದೀಪ್ ಸಿಂಗ್ ಮತ್ತು ಕೆಎಲ್ ರಾಹುಲ್ ಅವರನ್ನು ಭೇಟಿ ಮಾಡಿದ್ದೇನೆ. ಈ ವ್ಯಕ್ತಿಗಳು ಕೂಡ ಅದ್ಭುತವಾಗಿದ್ದರು. ಇಬ್ಬರು ದಿಗ್ಗಜರಾದ ಕೊಹ್ಲಿ ಮತ್ತು ಎಬಿಡಿ ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದು ಅದ್ಭುತ ಅನುಭವ. ನಾವು ಪರಸ್ಪರರಿಂದ ಕಲಿಯುತ್ತಿದ್ದೆವು, ”ಎಂದು ಗೇಲ್ ಹೇಳಿದ್ದಾರೆ.

“ನಾವು ಟ್ರೋಫಿಯನ್ನು ಗೆಲ್ಲಲು ಬಯಸಿದ್ದೇವೆ, ಆದರೆ ಅದು ಆಗಲಿಲ್ಲ. ಈ ಫ್ರಾಂಚೈಸಿ ಟ್ರೋಫಿ ಎತ್ತುವುದನ್ನು ನಾನು ನೋಡಲು ಬಯಸುತ್ತೇನೆ. ಆರ್‌ಸಿಬಿ ಯಾವಾಗಲೂ ನನ್ನ ತಂಡವಾಗಿರುತ್ತದೆ. ನಾನು ಈ ಫ್ರ್ಯಾಂಚೈಸ್ ಅನ್ನು ಪ್ರೀತಿಸುತ್ತೇನೆ ಮತ್ತು ನಾನು ಅದರ ಭಾಗವಾಗಿರುವುದಕ್ಕೆ ಸಂತೋಷವಾಗಿದೆ, ”ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next