Advertisement

ಕೊಹ್ಲಿ-ರಾಹುಲ್‌ ಕದನ ಕುತೂಹಲ

11:37 PM Apr 29, 2021 | Team Udayavani |

ಅಹ್ಮದಾಬಾದ್‌: ಈ ಬಾರಿಯ ಐಪಿಎಲ್‌ನಲ್ಲಿ ದಿಟ್ಟ ನಿರ್ವಹಣೆ ನೀಡುತ್ತಿರುವ ಆರ್‌ಸಿಬಿ ಶುಕ್ರವಾರ ಪಂಜಾಬ್‌ ಕಿಂಗ್ಸ್‌ ವಿರುದ್ಧ ಸೆಣಸಾಟ ನಡೆಸಲಿದೆ. ವಿರಾಟ್‌ ಕೊಹ್ಲಿ ಮತ್ತು ಕೆ.ಎಲ್‌. ರಾಹುಲ್‌ ತಂಡಗಳ ನಡುವಿನ ಈ ಪೈಪೋಟಿ ಎಲ್ಲರ ಕುತೂಹಲ ಕೆರಳಿಸಿದೆ.

Advertisement

ಆತ್ಮವಿಶ್ವಾಸದಲ್ಲಿ ಆರ್‌ಸಿಬಿ :

ಲೀಗ್‌ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಭರ್ಜರಿ ಆರಂಭ ಕಂಡಿರುವ ಆರ್‌ಸಿಬಿ ಗೆಲುವಿನ ಲಯದಲ್ಲಿದೆ. ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಒಲಿದ ಒಂದು ರನ್ನಿನ ಅದೃಷ್ಟದ ಗೆಲುವು ತಂಡಕ್ಕೆ ಹೆಚ್ಚಿನ ಆತ್ಮವಿಶ್ವಾಸ ತಂದುಕೊಟ್ಟಿದೆ.

ಡೆಲ್ಲಿ ವಿರುದ್ಧ ಸ್ಫೋಟಕ ಬ್ಯಾಟಿಂಗ್‌ ನಡೆಸಿದ ಎಬಿಡಿ ಮೇಲೆ ತಂಡ ಹೆಚ್ಚು ನಂಬಿಕೆ ಇರಿಸಿದೆ. ಪಡಿಕ್ಕಲ್‌, ಕೊಹ್ಲಿ, ಮ್ಯಾಕ್ಸ್‌ವೆಲ್‌ ಒಳಗೊಂಡ ಬ್ಯಾಟಿಂಗ್‌ ಪಡೆ ಹೆಚ್ಚು ಬಲಿಷ್ಠವಾಗಿದೆ. ಬೌಲಿಂಗ್‌ನಲ್ಲಿ ಮೊಹಮ್ಮದ್‌ ಸಿರಾಜ್‌, ಹರ್ಷಲ್‌ ಪಟೇಲ್‌, ಕೈಲ್‌ ಜಾಮೀಸನ್‌ ಕೂಡ ಉತ್ತಮ ಲಯದಲ್ಲಿದ್ದಾರೆ.

ಬದಲಾವಣೆ ಅನಿವಾರ್ಯ :

Advertisement

ವಿಂಡೀಸ್‌ ಆಟಗಾರರಾದ ಕ್ರಿಸ್‌ ಗೇಲ್‌ ಮತ್ತು ನಿಕೋಲಸ್‌ ಪೂರಣ್‌ ಅವರ ಸತತ ಬ್ಯಾಟಿಂಗ್‌ ವೈಫ‌ಲ್ಯ ಪಂಜಾಬ್‌ ತಂಡಕ್ಕೆ ಹಿನ್ನಡೆಯಾಗುತ್ತಿದೆ. ಇದರಿಂದ ಈ ಪಂದ್ಯದಲ್ಲಿ ಇವರನ್ನು ಕೈ ಬಿಡುವ ಸಾಧ್ಯತೆ ದಟ್ಟವಾಗಿದೆ. ಇವರ ಸ್ಥಾನಕ್ಕೆ ಟಿ20 ನಂ.1 ಟಿ20 ಬ್ಯಾಟ್ಸ್‌ಮನ್‌ ಡೇವಿಡ್‌ ಮಲಾನ್‌ ಚೊಚ್ಚಲ ಐಪಿಎಲ್‌ ಆಡುವ ಅವಕಾಶ ಪಡೆಯಬಹುದು. ದೀಪಕ್‌ ಹೂಡಾ ಸ್ಥಾನಕ್ಕೆ ಮನ್‌ದೀಪ್‌ ಸಿಂಗ್‌ ಅಥವಾ ಸಫ‌ìರಾಜ್‌ ಖಾನ್‌ ಬಂದರೂ ಅಚ್ಚರಿಯಿಲ್ಲ.

ಆರ್‌ಸಿಬಿಗೆ ಸ್ಕಾಟ್‌ ಕ್ಯುಗೆಲೀನ್‌ :

ನ್ಯೂಜಿಲ್ಯಾಂಡ್‌ ವೇಗಿ ಸ್ಕಾಟ್‌ ಕ್ಯುಗೆಲೀನ್‌ ಆರ್‌ಸಿಬಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಕೂಟವನ್ನು ಅರ್ಧದಲ್ಲೇ ತೊರೆದ ಆಸ್ಟ್ರೇಲಿಯದ ಕೇನ್‌ ರಿಚರ್ಡ್‌ಸನ್‌ ಸ್ಥಾನವನ್ನು ಇವರು ತುಂಬಲಿದ್ದಾರೆ.

ಸ್ಕಾಟ್‌ ಕ್ಯುಗೆಲೀನ್‌ ಮುಂಬೈ ಇಂಡಿಯನ್ಸ್‌ ತಂಡದ ಮೀಸಲು ಆಟಗಾರನಾಗಿದ್ದು, ಬಯೋ ಬಬಲ್‌ ಏರಿಯಾದಲ್ಲೇ ಇರುವುದು ಆರ್‌ಸಿಬಿಗೆ ಅನುಕೂಲಕರವಾಗಿ ಪರಿಣಮಿಸಿದೆ. ಕ್ಯುಗೆಲೀನ್‌ 2019ರಲ್ಲಿ ಚೆನ್ನೈ ಪರ ಆಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next