ಚೆನ್ನೈ: ಆಡಿದ ಎರಡು ಪಂದ್ಯಗಳಲ್ಲೂ ಜಯ ಸಾಧಿಸಿ ಕೂಟದಲ್ಲಿ ಶುಭಾರಂಭ ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಮೂರನೇ ಪಂದ್ಯವಾಡುತ್ತಿದೆ. ಕೆಕೆಆರ್ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.
ಇಂದಿನ ಪಂದ್ಯಕ್ಕೆ ಆರ್ ಸಿಬಿ ತಂಡ ಒಂದು ಪ್ರಮುಖ ಬದಲಾವಣೆ ಮಾಡಿಕೊಂಡಿದೆ. ಈ ಪಂದ್ಯದಲ್ಲಿ ಕೇವಲ ಮೂರು ವಿದೇಶಿ ಆಟಗಾರರೊಂದಿಗೆ ಕಣಕ್ಕಿಳಿಯಲು ವಿರಾಟ್ ನಿರ್ಧರಿಸಿದ್ದಾರೆ. ಆಲ್ ರೌಂಡರ್ ಡೇನಿಯಲ್ ಕ್ರಿಶ್ಚಿಯನ್ ಬದಲಿಗೆ ರಜತ್ ಪಟಿದಾರ್ ಸ್ಥಾನ ಪಡೆದಿದ್ದಾರೆ. ಡಿವಿಲಿಯರ್ಸ್, ಮ್ಯಾಕ್ಸ್ ವೆಲ್ ಮತ್ತು ಜೇಮಿಸನ್ ಮೂವರು ವಿದೇಶಿ ಆಟಗಾರರು. ಕೆಕೆಆರ್ ಕಳೆದ ಪಂದ್ಯದಲ್ಲಿ ಆಡಿದ ತಂಡವನ್ನೇ ಉಳಿಸಿಕೊಂಡಿದೆ.
ಇದನ್ನೂ ಓದಿ:
ಡಿಸೆಂಬರ್‌ನಲ್ಲಿ ರಣಜಿಗೆ ಬಿಸಿಸಿಐ ಯೋಜನೆ: ಇರಾನಿ, ದೇವಧರ್, ದುಲೀಪ್ ಟ್ರೋಫಿ ಅನುಮಾನ!
ಮುಂಬೈ ಇಂಡಿಯನ್ಸ್ ಮತ್ತು ಹೈದರಾಬಾದ್ ವಿರುದ್ಧ ಆಡಿದ ಎರಡು ಪಂದ್ಯಗಳಲ್ಲೂ ಆರ್ ಸಿಬಿ ಅಲ್ಪ ಅಂತರದ ಜಯ ಸಾಧಿಸಿದೆ. ಹೈದರಾಬಾದ್ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಮಾರ್ಗನ್ ಪಡೆ ಗೆದ್ದರೂ ಎರಡನೇ ಪಂದ್ಯದಲ್ಲಿ ನಾಟಕೀಯ ಕುಸಿತ ಕಂಡು ಮುಂಬೈ ವಿರುದ್ಧ ಮುಗ್ಗರಿಸಿತ್ತು.
ಆರ್ ಸಿಬಿ: ವಿರಾಟ್ ಕೊಹ್ಲಿ (ನಾ), ದೇವದತ್ತ ಪಡಿಕ್ಕಲ್, ರಜತ್ ಪಟಿದಾರ್, ಎಬಿ ಡಿವಿಲಿಯರ್ಸ್, ಶಹಬಾಜ್ ಅಹಮದ್, ಗ್ಲೆನ್ ಮ್ಯಾಕ್ಸ್ ವೆಲ್, ವಾಷಿಂಗ್ಟನ್ ಸುಂದರ್, ಕೈಲ್ ಜೇಮಿಸನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜುವೇಂದ್ರ ಚಾಹಲ್.
ಕೆಕೆಆರ್: ಇಯಾನ್ ಮಾರ್ಗನ್ (ನಾ), ನಿತೀಶ್ ರಾಣಾ, ಶುಭ್ಮನ್ ಗಿಲ್, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್, ಆಂದ್ರೆ ರಸ್ಸೆಲ್, ಶಕಿಬ್ ಅಲ್ ಹಸನ್, ಪ್ಯಾಟ್ ಕಮಿನ್ಸ್, ಹರ್ಭಜನ್ ಸಿಂಗ್, ಪ್ರಸಿಧ್ ಕೃಷ್ಣ ಮತ್ತು ವರುಣ್ ಚಕ್ರವರ್ತಿ.